ವಿಶಾಖಪಟ್ಟಣ:ಕಬಡ್ಡಿ ಹೇಳಿಕೊಡುವ ನೆಪದಲ್ಲಿ ತಂದೆ-ಮಗ ಇಬ್ಬರು ಸೇರಿಕೊಂಡು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳನ್ನು ತಂದೆ ಮೆರುಗು ಬಪಯ್ಯ ಹಾಗೂ ಮಗ ನಕರಾಜು ಎಂದು ಗುರುತಿಸಲಾಗಿದೆ. ತಂದೆ-ಮಗ ವಿಶಾಖಪಟ್ಟಣ ಜಿಲ್ಲೆಯ ಅಚುತಾಪುರಂ ವಲಯದ ಪುಡಿ ಮಡಕ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಂ ಗ್ರಾಮದ ನಿವಾಸಿಗಳಾಗಿದ್ದಾರೆ. ನಕರಾಜು ಅಪ್ರಾಪ್ತೆಯರನ್ನು ಹತ್ತಿರದ ಜಮೀನಿನ ಬಳಿ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಊಟ ಮತ್ತು ಹಣ ನೀಡುವುದಾಗಿ ಹೇಳಿ ತಂದೆ ಬಪಯ್ಯ ಸಹ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.
ತಂದೆ-ಮಗನ ನಡುವಳಿಕೆಯಿಂದ ಬೆದರಿದ್ದ ಅಪ್ರಾಪ್ತೆಯರು ನಡೆದ ಘಟನೆಯನ್ನು ಪಾಲಕರು ಬಳಿ ಹೇಳಿಕೊಂಡಿದ್ದರು. ಬಳಿಕ ಪಾಲಕರು ಅಚುತಾಪುರಂ ಠಾಣೆಗೆ ತೆರಳಿ ಸೋಮವಾರ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಾದ ಬಪಯ್ಯ ಮತ್ತು ನಕರಾಜು ತಲೆಮರೆಸಿಕೊಂಡಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಯರನ್ನು ವೈದ್ಯಕೀಯ ತಪಾಸಣೆಗಾಗಿ ಅನಕಪಲ್ಲಿ ಏರಿಯಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಕ್ಸೊ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದ್ದು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
PHOTOS| ಎದೆಸೀಳು ಕಾಣಿಸುವ ಡ್ರೆಸ್​ ಧರಿಸಿ ಬಂದು ಮುಜುಗರಕ್ಕೀಡಾದ ಬಾಲಿವುಡ್​ ಬ್ಯೂಟಿ ನೋರಾ ಫತೇಹಿ!

‘ಕಿರಾತಕ’ ಬೆಡಗಿ ಓವಿಯಾಳನ್ನು ಓಡಿ ಹೋದವರ ಲಿಸ್ಟ್‌ಗೆ ಸೇರಿಸಿದ ಯೂಟ್ಯೂಬರ್‌: ನಟಿ ಗರಂ

ರಶ್ಮಿಕಾಗೆ ಸೌಂದರ್ಯ ಆಗುವಾಸೆ; ಕಿರಿಕ್ ಬೆಡಗಿಯ ಬಯೋಪಿಕ್ ಬಯಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
