ನವದೆಹಲಿ:ಮಾನವನ ಜೀವ ನೀರಿನ ಮೇಲಿನ ಗುಳ್ಳೆಯಿದ್ದಂತೆ ಎಂಬ ಮಾತು ಅಕ್ಷರಶಃ ಸತ್ಯ. ಸಾವು ಯಾವಾಗ, ಯಾವ ರೀತಿ ಬರುತ್ತದೆ ಎಂದು ಊಹಿಸಲಾಗದು. ನಗು ನಗುತ್ತಲೇ ಕೊನೆಯುಸಿರೆಳೆದಿರವವರನ್ನು ನೋಡಿ ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ ಎಂದು ಶಪಿಸಿದ್ದು ಉಂಟು. ಕಣ್ಣ ಮುಂದೆ ಸುರಕ್ಷಿತವಾಗಿ, ಸಂತೋಷವಾಗಿ ಇರುವವರು ಮರು ಘಳಿಗೆ ದುರಂತ ಸಾವಿಗೀಡಾಗಿದಾಗ ದೇವರಿಗೆ ಹಿಡಿಶಾಪ ಹಾಕುವುದನ್ನು ನೋಡಿದ್ದೇವೆ. ಇದೇ ರೀತಿಯ ದುರಂತ ಘಟನೆ ನಿನ್ನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ಭಾನುವಾರದಂದು ಘನ ಘೋರ ದುರಂತ ಸಂಭವಿಸಿದೆ. ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅದರಿಂದಾಗಿ ಸೇತುವೆಯೂ ಮುರಿದುಬಿದ್ದಿದೆ. ಘಟನೆಯಲ್ಲಿ 9 ಪ್ರವಾಸಿಗರು ಬಲಿಯಾಗಿದ್ದಾರೆ.
ಸಾಂಗ್ಲಾ ಕಣಿವೆಯಲ್ಲಿ ಈ ಘಟನೆ ನಡೆದಿದೆ. ಸೇತುವೆಯ ಬಳಿ ಪ್ರವಾಸಿಗರ ವಾಹನಗಳಿದ್ದವು. ಅದರ ಮೇಲೆ ಬಂಡೆ ಉರುಳಿ ಬಿದ್ದಿದ್ದರಿಂದಾಗಿ 11 ಪ್ರವಾಸಿಗರಿಗೆ ಗಾಯವಾಗಿದೆ. ಅದರಲ್ಲಿ 9 ಪ್ರವಾಸಿಗರು ಸಾವಿಗೀಡಾಗಿದ್ದಾರೆಂದು ಅಲ್ಲಿನ ಎಸ್​ಪಿ ಕಿನ್ನೌರ್ನ ಸಾಜು ರಾಮ್ ರಾಣಾ ತಿಳಿಸಿದ್ದಾರೆ.
ಮೃತ ಒಂಬತ್ತು ಮಂದಿಯಲ್ಲಿ ಜೈಪುರ ಮೂಲದ ಆಯುರ್ವೆದ ಡಾಕ್ಟರ್​ ದೀಪಾ ಶರ್ಮಾ ಕೂಡ ಒಬ್ಬರು. ಸಾವಿಗೂ ಕೆಲವೇ ಕ್ಷಣಗಳ ಹಿಂದೆ ಟ್ವೀಟ್​ ಮಾಡಿದ್ದ ದೀಪಾ, “ನಾಗರಿಕರಿಗೆ ಅವಕಾಶವಿರುವ ಭಾರತದ ಕೊನೆಯ ಕೇಂದ್ರದಲ್ಲಿ ನಿಂತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
34 ವರ್ಷದ ದೀಪಾ ಅವರ ಟ್ವಿಟರ್​ ತುಂಬಾ ಹಿಮಾಚಲ ಪ್ರದೇಶದ ಭೇಟಿಯ ಚಿತ್ರಗಳೇ ತುಂಬಿವೆ. ನಾಗಸ್ಟಿ ಐಟಿಬಿಪಿ ಚೆಕ್​ಪೋಸ್ಟ್​ ಬಳಿ ನಿಂತು ಕ್ಯಾಮೆರಾಗೆ ಪೋಸ್​​ ನೀಡಿರುವ ಫೋಟೋವನ್ನು ಭಾನುವಾರ ಮಧ್ಯಾಹ್ನ 12.59ಕ್ಕೆ ಪೋಸ್ಟ್​ ಮಾಡಿದ್ದಾರೆ.
Standing at the last point of India where civilians are allowed. Beyond this point around 80 kms ahead we have border with Tibet whom china has occupied illegally.pic.twitter.com/lQX6Ma41mG— Dr.Deepa Sharma (@deepadoc)July 25, 2021
Standing at the last point of India where civilians are allowed. Beyond this point around 80 kms ahead we have border with Tibet whom china has occupied illegally.pic.twitter.com/lQX6Ma41mG
ಸಾಂಗ್ಲಾ-ಚಿಟ್ಕುಲ್​ ರಸ್ತೆಯ ಬಸ್ತೇರಿ ಬಳಿ ಮಧ್ಯಾಹ್ನ 1.25ರ ಸುಮಾರಿಗೆ ಅನೇಕ ಭೂಕುಸಿತಗಳು ಸಂಭವಿಸಿವೆ. ದೀಪಾ ಅವರು ತಮ್ಮ ಪ್ರಯಾಣದ ಫೋಟೋಗಳನ್ನು ಶೇರ್​ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ದುರಂತ ಸಂಭವಿಸಿದೆ. ಎತ್ತರ ಬೆಟ್ಟದಿಂದ ಬಂಡೆಗಳು ನೆಲಕ್ಕೆ ಉರುಳಿದವು. ಬೃಹತ್​ ಗಾತ್ರದ ಬಂಡೆಗಳ ವೇಗಕ್ಕೆ ದಾರಿಯಲ್ಲಿ ಸಿಕ್ಕ ವಸ್ತುಗಳೆಲ್ಲ ಪುಡಿ ಪುಡಿಯಾದವು. ಒಂದು ಬಂಡೆ ನೇರವಾಗಿ ಸೇತುವೆ ಬಡಿದ ಪರಿಣಾಮ ಕ್ಷಣಾರ್ಧದಲ್ಲೇ ಸೇತುವೆ ಉರುಳಿತು. ಈ ದೃಶ್ಯ ಪ್ರವಾಸಿಗರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್​ ಎನ್ನುವಂತಿದೆ.
ಪ್ರಕೃತಿ ತಾಯಿಯಿಲ್ಲದ ಜೀವನ ಏನೇನೂ ಅಲ್ಲ ಎಂದು ದೀಪಾ ಬರೆದುಕೊಂಡಿದ್ದಾರೆ. ಆದರೆ, ಅದೇ ಪ್ರಕೃತಿ ವಿಕೋಪದ ಮಡಿಲಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಯುವ ವೈದ್ಯೆಯ ಸಾವಿಗೆ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ.
Life is nothing without mother nature. ❤️pic.twitter.com/5URLVYJ6oJ— Dr.Deepa Sharma (@deepadoc)July 24, 2021
Life is nothing without mother nature. ❤️pic.twitter.com/5URLVYJ6oJ
ಪ್ರಧಾನಿ ಮೋದಿ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಅವರು ಮೃತರ ಸಾವಿಗೆ ಸಾಂತ್ವಾನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ ಮತ್ತು ಗಾಯಗೊಂಡವರ ಚಿಕಿತ್ಸೆಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.(ಏಜೆನ್ಸೀಸ್​)
OMG. Can’t believe that Deepa is no more. I have been told that she died in a landslide today. Till 8hrs ago she was sending photos from Himalayas. Such a lively, aware person. Have no words. May God give her family strength. Prayers. ॐ शांति।https://t.co/M0hoeNVuYP— Vivek Ranjan Agnihotri (@vivekagnihotri)July 25, 2021
OMG. Can’t believe that Deepa is no more. I have been told that she died in a landslide today. Till 8hrs ago she was sending photos from Himalayas. Such a lively, aware person. Have no words. May God give her family strength. Prayers. ॐ शांति।https://t.co/M0hoeNVuYP
ಇದ್ದಕ್ಕಿದ್ದಂತೆ ಗುಡ್ಡದಿಂದ ಕುಸಿದ ಬಂಡೆಗಳು; ಸೇತುವೆ ಮುರಿದುಬಿದ್ದು 9 ಸಾವು!
ಮತ್ತೆ ಚಂದನವನಕ್ಕೆ ಬರ್ತಾರಾ ತ್ರಿಷಾ? ಪುನೀತ್ ‘ದ್ವಿತ್ವ’ಕ್ಕೆ ನಾಯಕಿಯಾಗ್ತಾರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 9 =
Remember me
