ಹೈದರಾಬಾದ್​: ಆಸಿಡ್​ ದಾಳಿಯನ್ನು, ಅತ್ಯಾಚಾರ ಬೆದರಿಕೆಯನ್ನು ಮತ್ತು ಪಬ್ಲಿಕ್​ನಲ್ಲಿ ಬರುವ ಕಾಮೆಂಟ್​ ಅನ್ನು ಎದುರಿಸುವ ತಾಳ್ಮೆ ನನ್ನಲ್ಲಿ ಇಲ್ಲ. ಅಪ್ಪ-ಅಮ್ಮ ನಾನು ಈ ರೀತಿ ಹೇಳುತ್ತಿರುವುದಕ್ಕೆ ಕ್ಷಮಿಸಿ. ನನ್ನಿಂದ ಉಳಿಯಲು ಸಾಧ್ಯವಾಗುತ್ತಿಲ್ಲ. ಇದಿಷ್ಟು 2018ರ ಮಿಸ್​ ತೆಲಂಗಾಣ ವಿಜೇತೆ ಹಸಿನಿ ಅವರು ಬರೆದಿದ್ದ ನೋವಿನ ಮಾತುಗಳು. ಮೊನ್ನೆಯಷ್ಟೇ ಆತ್ಮಹತ್ಯೆಗೆ ಯತ್ನಿಸಿದ್ದ ಹಸಿನಿ ಇದೀಗ ಮತ್ತೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಮಾಡೆಲಿಂಗ್​ ಅನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಹಸಿನಿ ಹೇಳಿದ್ದಾರೆ. ಮೊನ್ನೆಯಷ್ಟೇ ಹಸಿನಿ ಅವರು ಲೈವ್​ ವಿಡಿಯೋ ಹರಿಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಡಿಯೋ ನೋಡಿದ ಆಕೆಯ ಫ್ರೆಂಡ್ಸ್​ ತಕ್ಷಣ ಪೊಲೀಸ್​ ಕಂಟ್ರೋಲ್​ ರೂಮ್​ ನಂ. 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ನಾರಾಯಣಗುಡ ಪೊಲೀಸರು ಆಕೆಯ ಸ್ಥಳಕ್ಕೆ ಧಾವಿಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದರು. ಹೈದರಾಬಾದ್​ನ ಹಿಮಾಯತ್​ನಗರದ 6ನೇ ರಸ್ತೆಯಲ್ಲಿರುವ ಅವರ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿತ್ತು. ರಕ್ಷಣೆಯ ಬೆನ್ನಲ್ಲೇ ಆಕೆಯನ್ನು ಹೈದರ್​ಗುಡದಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿತ್ತು.
ಇದೀಗ ಹಸಿನಿ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೃಷ್ಣಾ ಜಿಲ್ಲೆ ಕಂಚಿಕಚಾರ್ಲ ಬಳಿಯ ಕೀಸರ ಸೇತುವೆಯಿಂದ ಮುನ್ನೇರು ನದಿಗೆ ಹಾರಲು ಶುಕ್ರವಾರ ಯತ್ನಿಸಿದ್ದಾರೆ. ಕೃಷ್ಣ ಜಿಲ್ಲೆಯ ವಿರುಲಪಾಡು ವಲಯದ ನಿವಾಸಿಯಾಗಿರುವ ಹಸಿನಿ, ಹೈದರಾಬಾದ್​ನ ಹಿಮಾಯತ್​ನಗರದಲ್ಲಿರು ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಶುಕ್ರವಾರ ನದಿಗೆ ಹಾರುವುದನ್ನು ನೋಡಿದ ಸ್ಥಳೀಯರು ಆಕೆಯನ್ನು ರಕ್ಷಿಸಿ ಸಮೀಪದ ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಡೆಲ್​ ಆಗಿರುವ ಹಸಿನಿ, 2018ರಲ್ಲಿ ಮಿಸ್​ ತೆಲಂಗಾಣ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಯುವಕನೊಬ್ಬನ ವಿರುದ್ಧ ಹಸಿನಿ, ಲೈಂಗಿಕ ದೌರ್ಜನ್ಯ ನೀಡಿದ್ದಾನೆಂದು ಆರೋಪಿಸಿ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಸಿನಿ ಆತ್ಮಹತ್ಯೆಗೆ ಕಾರಣ ಏನೆಂದು ಹುಡುಕುವ ಪ್ರಯತ್ನದಲ್ಲಿದ್ದಾರೆ. ಯುವಕನ ವಿರುದ್ಧ ದೂರು ದಾಖಲಿಸಿದ ಕೆಲವೇ ದಿನಗಳಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಲೈವ್​ ವಿಡಿಯೋ ಮಾಡುತ್ತಾ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಮಿಸ್​ ತೆಲಂಗಾಣ ಬಚಾವ್​ ಆಗಿದ್ದೇ ರೋಚಕ!

ಶಾಪಿಂಗ್​ಗೆಂದು ಹೋದ ಸ್ನೇಹಿತೆಯರು ರಾತ್ರಿಯಾದ್ರೂ ಮನೆಗೆ ಬಾರಲೇ ಇಲ್ಲ: ಬೆಳಗ್ಗೆ ಪಾಲಕರಿಗೆ ಕಾದಿತ್ತು ಶಾಕ್​!

ಯೂಟ್ಯೂಬ್​ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಪಿಯು ವಿದ್ಯಾರ್ಥಿನಿ! ಪ್ರಿಯಕರನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
