ಹೈದರಾಬಾದ್​:ಮಾಜಿ ಮಿಸ್​ ತೆಲಂಗಾಣ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರ ತಕ್ಷಣದ ಸ್ಪಂದನೆಯಿಂದ ತೆಲಂಗಾಣ ಸುಂದರಿಯ ಪ್ರಾಣ ಉಳಿದಿದೆ.
ಯುವತಿಯನ್ನು ಹಸಿನಿ ಎಂದು ಗುರುತಿಸಲಾಗಿದೆ. ಲೈವ್​ ವಿಡಿಯೋವನ್ನು ನೋಡಿದ ಆಕೆಯ ಫ್ರೆಂಡ್ಸ್​ ತಕ್ಷಣ ಪೊಲೀಸ್​ ಕಂಟ್ರೋಲ್​ ರೂಮ್​ ನಂ. 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ನಾರಾಯಣಗುಡ ಪೊಲೀಸರು ಆಕೆಯ ಸ್ಥಳಕ್ಕೆ ಧಾವಿಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಹಸಿನಿ ಅವರು ಹೈದರಾಬಾದ್​ನ ಹಿಮಾಯತ್​ನಗರದ 6ನೇ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದಾರೆ. ರಕ್ಷಣೆಯ ಬೆನ್ನಲ್ಲೇ ಆಕೆಯನ್ನು ಹೈದರ್​ಗುಡದಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಾಡೆಲ್​ ಆಗಿರುವ ಹಸಿನಿ, 2018ರಲ್ಲಿ ಮಿಸ್​ ತೆಲಂಗಾಣ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಯುವಕನೊಬ್ಬನ ವಿರುದ್ಧ ಹಸಿನಿ, ಲೈಂಗಿಕ ದೌರ್ಜನ್ಯ ನೀಡಿದ್ದಾನೆಂದು ಆರೋಪಿಸಿ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಸಿನಿ ಆತ್ಮಹತ್ಯೆಗೆ ಕಾರಣ ಏನೆಂದು ಹುಡುಕುವ ಪ್ರಯತ್ನದಲ್ಲಿದ್ದಾರೆ. ಯುವಕನ ವಿರುದ್ಧ ದೂರು ದಾಖಲಿಸಿದ ಕೆಲವೇ ದಿನಗಳಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಯೂಟ್ಯೂಬ್​ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಪಿಯು ವಿದ್ಯಾರ್ಥಿನಿ! ಪ್ರಿಯಕರನ ಬಂಧನ

ಒಂದೆಡೆ ಪಾಕ್​ ವಿಜಯೋತ್ಸವದಲ್ಲಿದ್ರೆ ತಂಡದ ನಾಯಕ ಬಾಬರ್​ಗೆ ಬಿಸಿ ತುಪ್ಪವಾದ ಈ ಯುವತಿ ಯಾರು?

ಮದ್ವೆಯಾಗಲು ತೋರಿದ ಉತ್ಸಾಹ ಜೀವನದಲ್ಲಿ ತೋರದ ನವದಂಪತಿಯ ಬದುಕು ದುರಂತ ಅಂತ್ಯ!

https://www.vijayavani.net/r-chethan-kumar-bahaddur-chethan-appu-fan-puneeth-rajkumar-fan-death-note-social-media/
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:thirteen − 2 =
Remember me
