ಹೈದರಾಬಾದ್​:ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಹೆಣ್ಣು ಮಗುವನ್ನು ಅಪರಿಚಿತನೊಬ್ಬ ಬಲವಂತಾಗಿ ಎಲಿವೇಟರ್​ ಒಳಗೆ ಎಳೆದುಕೊಂಡು ಅನುಚಿತವಾಗಿ ವರ್ತಿಸಿರುವ ಘಟನೆ ಮಿಯಾಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನದ ಗೋರಖ್​ಪುರ್​ ಮೂಲದ ಗೊರಕ್​ ಪ್ರಸಾದ್​ ಮತ್ತು ರೇಣುಕಾ ಕಳೆದು 10 ವರ್ಷಗಳಿಂದ ಮಿಯಾಪುರ್​ನ ಹಫೀಜ್​ಪೇಟೆಯ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಿದ್ದಾರೆ. ದಂಪತಿಗೆ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ.
ಸೋಮವಾರ ಮಧ್ಯಾಹ್ನ ಐದು ವರ್ಷದ ಮಗಳು ತಮ್ಮ ಫ್ಲ್ಯಾಟ್​ ಮುಂದೆ ಆಟವಾಡುತ್ತಿತ್ತು. ಸ್ಟೋರ್​ ಒಂದರಲ್ಲಿ ಚಾಕೋಲೆಟ್ ಖರೀದಿಸಿ ಬಂದ ಅಪರಿಚಿತ ವ್ಯಕ್ತಿ ಅಪಾರ್ಟ್​ಮೆಂಟ್​ ಒಳಗೆ ತೆರಳಿ ಬಾಲಕಿಗೆ ಚಾಕೋಲೆಟ್​ ಆಮಿಷವೊಡ್ಡಿ ಬಲವಂತವಾಗಿ ಎಲಿವೇಟರ್​ ಒಳಗೆ ಎಳೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ.
ತಕ್ಷಣ ಬಾಲಕಿ ಕಿರುಚಿಕೊಂಡಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಬಾಲಕಿ ಏನು ನಡೆಯಿತು ಎಂದು ಪಾಲಕರ ಮುಂದೆ ಹೇಳಿದೆ. ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆರೋಪಿಯ ದುಷ್ಕೃತ್ಯವು ಅದರಲ್ಲಿ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಿಯಾಪುರ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಹಸಿವು ಮರೆಯಲು ಯೂಟ್ಯೂಬ್​ ನೋಡ್ತಿದ್ದ ದಿನಗೂಲಿ ಕಾರ್ಮಿಕನಿಂದು ಅದೇ ಯೂಟ್ಯೂಬ್​ನಿಂದ ಲಕ್ಷಾಧಿಪತಿ!

VIDEO: ಸೃಜನ್‌ ಖುಷಿಗಾಗಿ ನಾನು ಮದುವೆ ಮುರಿದೆ: ಯಾವ ಬೀದಿಗೆ ಬಂದೆ ಅಂತ ಹೇಳ್ತೀರಾ? ನಟಿ ವಿಜಯಲಕ್ಷ್ಮಿ ಕಣ್ಣೀರು

VIDEO: ವಿಶ್ವದ ಅತಿ ದೊಡ್ಡ ಬಂದರಿನಲ್ಲಿ ಭಾರಿ ಸ್ಫೋಟ: ಮುಗಿಲೆತ್ತರಕ್ಕೆ ಚಾಚಿದ ಬೆಂಕಿಯ ಕೆನ್ನಾಲಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 1 =
Remember me
