ನವದೆಹಲಿ:ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿರುವ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್​ ರೀಮಿಕ್ಸ್​ ಹಾಡೇ ಕಣ್ಣು ಮುಂದೆ ಬರುತ್ತಿದೆ. ಇನ್ನೂ ಕೂಡ ಅದರ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ. ಅಲ್ಲದೆ, ಈ ಹಾಡಿಗೆ ಫಿದಾ ಆದ ಎಷ್ಟೋ ಮಂದಿ ಸೊಂಟ ಬಳಕಿಸುತ್ತಿದ್ದಾರೆ. ಇದೀಗ ಶಾಸಕಿ ಹಾಗೂ ನಟಿ ರೋಜಾ ಕೂಡ ಇದೇ ಹಾಡಿಗೆ ಡಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದೆ.
ರೋಜಾ ಅಲಿಯಾಸ್​ ರೋಜಾ ಸೆಲ್ವಮಣಿ ಆಂಧ್ರ ಪ್ರದೇಶದ ಚಿತ್ತೂರಿನ ನಗರಿ ಕ್ಷೇತ್ರದ ಶಾಸಕಿ. ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಪಕ್ಷದ ಶಾಸಕಿಯಾಗಿದ್ದು, ರಾಜಕಾರಣದ ಜತೆಗೆ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಬಣ್ಣದ ಜಗತ್ತಿನಲ್ಲೂ ತೊಡಗಿಸಿಕೊಂಡಿದ್ದಾರೆ.
ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿರುವ ಕಚ್ಚಾ ಬಾದಾಮ್​ ಹಾಡಿಗೆ ನೀಲಿ ಉಡುಗೆ ತೊಟ್ಟ ರೋಜಾ ಸೊಂಟ ಬಳುಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಕಷ್ಟು ಮಂದಿ ರೋಜಾ ಅವರ ನೃತ್ಯಕ್ಕೆ ಮನಸೋತು ಲೈಕ್​ಗಳ ಸುರಿಮಳೆ ಸುರಿಸುತ್ತಿದ್ದಾರೆ.
ಹಾಡಿನ ಹಿನ್ನೆಲೆ ಏನು?ಪಶ್ಚಿಮ ಬಂಗಾಳದ ಬಿರ್​ಭಮ್​ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಬದ್ಯಕರ್​​ ಕಚ್ಚಾ ಬಾದಾಮ್​ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದರು. ಅವರ ಹಾಡನ್ನು ಗುರುತಿಸಿದ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿ ರೀಮಿಕ್ಸ್​ ಮಾಡಿ, ಭುವನ್​ ಕೈಯಲ್ಲೇ ಹಾಡಿಸಿದ್ದಾರೆ. ಇದಾದ ಬಳಿಕ ಭುವನ್​ ಬದುಕೇ ಬದಲಾಗಿದೆ. ಕಚ್ಚಾ ಬಾದಾಮ್​ ಒರಿಜಿನಲ್​ ಸಾಂಗ್​ ಅನ್ನು ರೀಮಿಕ್ಸ್​ ಮಾಡಲು ಸಂಭಾವನೆಯಾಗಿ ಭುವನ್​ಗೆ 3 ಲಕ್ಷ ರೂ. ನೀಡಲಾಗಿದೆ ಎಂದು ತಿಳಿದುಬಂದಿದೆ. ಕಡಲೆಕಾಯಿ ಮಾರಾಟ ಮಾಡಿ ದಿನದೂಡುತ್ತಿದ್ದ ಭುವನ್​ ಇದೀಗ ಕಚ್ಚಾ ಬಾದಾಮ್​ ಮೂಲಕ ಖ್ಯಾತಿಯಾಗಿದ್ದು, ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಲಕ್​ ಬದಲಾಗಿದೆ.(ಏಜೆನ್ಸೀಸ್​)
ವೈರಲ್​ ಆಯ್ತು ಕಚ್ಚಾ ಬಾದಮ್​ ಹಾಡಿಗೆ ಪೊಲೀಸ್​ ಸಿಬ್ಬಂದಿ ಹಾಕಿದ ಸ್ಟೆಪ್ಸ್​: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ…

ಏರುತ್ತಲೇ ಇದೆ ಇಂಧನ ದರ, ಜನ ಸಾಮಾನ್ಯರ ಬದುಕು ಭಾರ: ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

ಡಿವೋರ್ಸ್ ಬೆನ್ನಲ್ಲೇ ಮಾಜಿ ಪತಿಗೆ ಶಾಕ್​ ಕೊಟ್ಟ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + six =
Remember me
