ಭೋಪಾಲ್​:ಗುಂಡಿನ ಮತ್ತೆ ಗಮ್ಮತ್ತು…ಅಳತೆ ಮೀರಿದರೆ ಆಪತ್ತು ಎನ್ನುವಂತೆ ದೆಹಲಿ ಮೂಲದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡಿದ್ದಲ್ಲದೆ, ವಾಹನ ನಿಬಿಡ ರಸ್ತೆಯ ಮಧ್ಯೆಯೇ ಸೇನಾ ವಾಹನವನ್ನು ತಡೆದು ಅದನ್ನು ಜಖಂಗೊಳಿಸಲು ಪ್ರಯತ್ನಿಸಿ ಹೈಡ್ರಾಮ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.
22 ವರ್ಷದ ಯುವತಿ ಮಾಡೆಲ್​ ಎಂದು ತಿಳಿದುಬಂದಿದೆ. ಆಕೆ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?: ಸೇನಾ ವಾಹನವನ್ನು ತಡೆದು ಅದಕ್ಕೆ ಒರಗಿಕೊಂಡು ಫೋನ್​ನಲ್ಲಿ ಮಾತನಾಡುತ್ತಿರುತ್ತಾಳೆ. ಈ ವೇಳೆ ಎಷ್ಟೇ ಹಾರ್ನ್​ ಮಾಡಿದರೂ ಆಕೆ ದಾರಿಯನ್ನು ಬಿಡುವುದಿಲ್ಲ. ಕಾರಿನ ಎದುರಿಗೆ ತಿರುಗಿ ಒಳಗೆ ಕುಳಿತಿದ್ದ ಯೋಧನನ್ನು ನಿಂದಿಸಲು ಶುರು ಮಾಡುತ್ತಾಳೆ. ಬಳಿಕ ಮಾತನಾಡುವುದನ್ನು ಮುಂದುವರಿಸುತ್ತಲೇ ಸೇನಾ ಕಾರಿಗೆ ಕಾಲಿನಿಂದ ಒದೆಯುತ್ತಾಳೆ. ಈ ವೇಳೆ ಅವಳ ಬ್ಯಾಗ್​ನಿಂದ ಒಂದು ಮದ್ಯದ ಬಾಟಲ್​ ರಸ್ತೆ ಬಿದ್ದು ಚೂರಾಗುತ್ತದೆ. ಅದನ್ನು ಗಮನಿಸಿದ ಮಾಡೆಲ್​, ಕಾರು ಒದೆಯುವುದನ್ನು ಮುಂದುವರಿಸುತ್ತಾಳೆ. ಅದನ್ನು ನೋಡಿ ಕಾರಿನ ಒಳಗಿದ್ದ ಯೋಧ ಕೆಳಗಿಳಿದು ಬರುತ್ತಾರೆ. ಆದರೆ, ಅವರಿಗೂ ಕ್ಯಾರೆ ಎನ್ನದ ಯುವತಿ, ಯೋಧನನ್ನು ನೂಕುತ್ತಾಳೆ. ಕೊನೆಗೆ ದಾರಿ ಬಿಡುತ್ತಾಳೆ.
A 22-year-old model from Delhi created ruckus in an inebriated state in Gwalior she blocked an army vehicle started vandalising the vehicle, she pushed the jawan started arguing later a woman cop took her to the police station@ndtv@ndtvindia@GargiRawat@manishndtvpic.twitter.com/tdiqZF32EB
— Anurag Dwary (@Anurag_Dwary)September 10, 2021

ಯುವತಿ ಹೈಡ್ರಾಮವನ್ನು ದಾರಿಹೋಕರು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಯುವತಿಯನ್ನು ಘಟನಾ ನಂತರ ಸ್ಥಳೀಯ ಪೊಲೀಸ್​​ ಠಾಣೆಯ ಕಾನ್ಸ್​ಟೇಬಲ್​ ಒಬ್ಬರು ಠಾಣೆಗೆ ಕರೆದೊಯ್ದರು ಎಂಬ ಮಾಹಿತಿ ಇದೆ. ಆಕೆ ಪಾನಮತ್ತಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದ್ದು, ಅಬಕಾರಿ ಕಾಯ್ದೆಯನ್ನು ಸೂಕ್ತ ಸೆಕ್ಷನ್​ ಅಡಿಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಇದಾದ ಬೆನ್ನಲ್ಲೇ ಜಾಮೀನಿನ ಮೇಲೆ ಆಕೆಯನ್ನು ಬಿಟ್ಟು ಕಳುಹಿಸಲಾಗಿದೆ.
ಯೋಧನಿಂದ ಇಲ್ಲಿಯವರೆಗೆ ಆಕೆಯ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಯುವತಿ ದೆಹಲಿ ಮೂಲದ ಮಾಡೆಲ್​ ಆಗಿದ್ದು, ತನ್ನ ಇಬ್ಬರು ಫ್ರೆಂಡ್ಸ್​ ಜತೆ ಗ್ವಾಲಿಯರ್​ಗೆ ಭೇಟಿ ನೀಡಿದ್ದಳು. ಈ ಸಂದರ್ಭದಲ್ಲಿ ಈ ಹೈಡ್ರಾಮ ನಡೆದಿದೆ.(ಏಜೆನ್ಸೀಸ್​)
ಡ್ರಾಪ್​ ಕೇಳಿದಳೆಂದು ಬೈಕ್​ ನಿಲ್ಲಿಸಿದ ಯುವಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಶಾಕ್​ ಕೊಟ್ಟ ಯುವತಿ!

VIDEO| ಇಳಿವಯಸ್ಸಿನಲ್ಲಿ ಬುಲೆಟ್ಟು ಬಂಡಿ ಹಾಡಿಗೆ ಹೆಜ್ಜೆ ಹಾಕಿ ಗಂಡನನ್ನು ರಂಜಿಸಿದ ಅಜ್ಜಿ

ಗಣೇಶ ಹಬ್ಬದಂದೇ ಮೆಗಾಸ್ಟಾರ್​ ಕುಟುಂಬಕ್ಕೆ ಶಾಕ್​: ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಸ್ಥಿತಿ ಗಂಭೀರ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
