ಮುಂಬೈ:ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ಬಂಧನವು ಸದ್ಯದ ಮಟ್ಟಿಗೆ ಬಹು ಚರ್ಚಿತ ವಿಷಯವಾಗಿದೆ. ಕುಂದ್ರಾ ಬಂಧನವಾದಾಗಿನಿಂದ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ.
ಹಾಟ್​ಶಾಟ್ಸ್​ ಮತ್ತು ಇತರೆ ವೆಬ್​ಸೈಟ್​ಗಳಿಗಾಗಿ ಬೋಲ್ಡ್​ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್​ ಜೊಯಾ ರಾಥೋಡ್ ಅವರು ರಾಜ್​​ ಕುಂದ್ರಾರಿಂದ ಆಫರ್​ ಸ್ವೀಕರಿಸಿದ್ದಾಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ​
ಹಾಟ್​ಶಾಟ್ಸ್​ ಆ್ಯಪ್​ಗಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸುವಂತೆ ಕುಂದ್ರಾ ಅವರ ಆಪ್ತ ಸಹಾಯಕ ಮತ್ತು ಉದ್ಯಮ ಪಾಲುದಾರ ಉಮೇಶ್​ ಕಾಮತ್​, ಅನೇಕ ಬಾರಿ ನನಗೆ ಕರೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಬಂಧನಕ್ಕೂ ಮುಂಚೆ ಕಾಮತ್​ ಜೊಯಾಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದರಂತೆ. ನಾನು ಹೊರಗಿರುವುದರಿಂದ ಆಫೀಸ್​ನಲ್ಲಿ ಆಡಿಷನ್​ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಕಾಮತ್​, ವಾಟ್ಸ್​ಆ್ಯಪ್​ ಮೂಲಕವೇ ಬೆತ್ತಲೇ ಆಡಿಷನ್​ ನೀಡುವಂತೆ ಜೊಯಾಗೆ ಕೇಳಿದ್ದರಂತೆ. ಆತನ ಮನವಿಗೆ ನಿರಾಕರಿಸಿದರೂ ಪದೇಪದೆ ಕರೆ ಮಾಡುತ್ತಿದ್ದರು ಎಂದು ಜೊಯಾ ಆರೋಪಿಸಿದ್ದಾರೆ.
ಸ್ಕ್ರಿಪ್ಟ್​ ತಿಳಿಯದೇ ಬೆತ್ತಲೆ ಆಡಿಷನ್​ ಕೊಡಲಾಗದು ಎಂದು ಜೊಯಾ ನಿರಾಕರಿಸಿದರೂ ಆಫರ್​ ಒಪ್ಪಿಕೊಳ್ಳುವಂತೆ ಕಾಮತ್​ ದುಂಬಾಲು ಬಿದ್ದಿದ್ದನಂತೆ. ವಯಸ್ಕರ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರೆ ದಿನಕ್ಕೆ 20 ಸಾವಿರ ರೂ. ಕೊಡುವುದಾಗಿ ಆಫರ್​ ನೀಡಿದ್ದರು ಎಂದು ಜೊಯಾ ತಿಳಿಸಿದ್ದಾರೆ.
ಹಾಟ್​ಶಾಟ್ಸ್​ಗಾಗಿ ಕೆಲಸ ಮಾಡುವ ರಾಯ್​ ಎಂಬಾತನೂ ಸಹ ಇದೇ ವಿಚಾರಕ್ಕೆ ಕರೆ ಮಾಡಿದ್ದ. ತಾನೂ ಯುಕೆ ಮೂಲದವನು ಎಂದು ಹೇಳಿಕೊಂಡಿದ್ದ. ಹಾಟ್​ಶಾಟ್ಸ್​ಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆ ವೆಬ್​ಸೀರಿಸ್​ ಮಾಡುತ್ತಿರುವುದಾಗಿ ಹೇಳಿದ. ನಮ್ಮೊಂದಿಗೆ ಕೆಲಸ ಮಾಡಲು ಒಪ್ಪಿದರೆ ದಿನವೊಂದಕ್ಕೆ 70 ಸಾವಿರ ರೂ. ಕೊಡುವುದಾಗಿ ಆಫರ್​ ಮಾಡಿದ ಎಂದು ಜೊಯಾ ಆರೋಪ ಮಾಡಿದ್ದಾರೆ. ಆಫರ್​ ನಿರಾಕರಿಸಿದಾಗ ಬೋಲ್ಡ್​ ಸಿನಿಮಾಗಳಲ್ಲೇ ನಟಿಸಿರುವಾಗ ಬೆತ್ತಲೆ ವೆಬ್​ ಸೀರಿಸ್​ನಲ್ಲಿ ನಟಿಸಲು ನಿಮಗೇನು ಸಮಸ್ಯೆ ಎಂದು ರಾಯ್​ ಕೇಳಿದ್ದನಂತೆ. ಪದೇಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಮನವೊಲಿಸಲು ಸಾಕಷ್ಟು ಮನಸ್ಸು ಮಾಡಿದ್ದರು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ ಜೊಯಾ.
ಇನ್ನು ಜೊಯಾ ಅವರು ಬಡೆ ಅಚ್ಚೇ ಲಗ್ತೆ ಹೈನ್​, ಸೌಭಾಗ್ಯವತಿ ಭವ ಮತ್ತು ಫಿಯರ್​ ಫೈಲ್ಸ್​ ಹೆಸರಿನ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. 2011ರಿಂದ ಬೋಲ್ಡ್​ ಸಿನಿಮಾಗಳಲ್ಲಿ ಜೊಯಾ ನಟಿಸುತ್ತಿದ್ದಾರೆ. ಆದರೆ, ಬೆತ್ತಲೆಯಾಗಿ ನಟಿಸಲು ನಿರಾಕರಿಸಿದ್ದಾರೆ.(ಏಜೆನ್ಸೀಸ್​)
ಯಶಿಕಾ ಕಾರು ಅಪಘಾತ ಪ್ರಕರಣ: ಮೃತ ಭವಾನಿ ಧರಿಸಿದ್ದ ಉಡುಗೆಯೇ ದುರಂತಕ್ಕೆ ಕಾರಣವಾಯ್ತಾ?

ಭೀಕರ ಭೂಕುಸಿತ ಬೆನ್ನಲ್ಲೇ ವರುಣನ ಆರ್ಭಟಕ್ಕೆ ನಲುಗಿದ ಹಿಮಾಚಲ ಪ್ರದೇಶ: 9 ಸಾವು, 7 ಮಂದಿ ನಾಪತ್ತೆ

ಹಿಂದಿ ಚಿತ್ರದಲ್ಲಿ ನಟಿಸುವುದಕ್ಕೆ ಆಡಿಷನ್​ ಕೊಟ್ಟಿದ್ದರಂತೆ ಜೇಮ್ಸ್​ ಬಾಂಡ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 12 =
Remember me
