ಕೋಲ್ಕತ:ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಹಾಗೂ ನಟಿ ಅರ್ಪಿತಾ ಮುಖರ್ಜಿ ನೀಡಿರುವ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿದೆ.
ಮಾಜಿ ಸಚಿವ ಚಟರ್ಜಿ ಮತ್ತು ಅರ್ಪಿತಾಳನ್ನು ಕೊಲ್ಕತಾ ಹೊರವಲಯದಲ್ಲಿರುವ ಇಎಸ್​ಐ ಜೋಕಾ ಆಸ್ಪತ್ರೆಗೆ ಎಂದಿನಂತೆ ಇಂದು ಕೂಡ ಕರೆದುಕೊಂಡು ಹೋಗಲಾಯಿತು. ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಅಲ್ಲಿಯೇ ಕಾಯುತ್ತಿದ್ದ ಮಾಧ್ಯಮ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅರ್ಪಿತಾ, ನನಗೆ ಗೊತ್ತಿಲ್ಲದೇ ನನ್ನ ಮನೆಯಲ್ಲಿ ಹಣವನ್ನು ಇಡಲಾಗಿದೆ. ನನ್ನ ಮನೆಯಲ್ಲಿ ಸಿಕ್ಕ ಅಷ್ಟೂ ಹಣ ನನ್ನದಲ್ಲ ಎಂದು ಹೇಳಿದ್ದಾರೆ.
ಅರ್ಪಿತಾ ಹೇಳಿಕೆ ಭಾರೀ ಕುತೂಹಲ ಸೃಷ್ಟಿಸಿದ್ದು, ಯಾರ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಪ್ರಮುಖ ಆರೋಪಿ ಚಟರ್ಜಿ ಕೂಡ ಈ ಹಿಂದೆ ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಇಬ್ಬರು ಕೂಡ ಹಣ ನಮ್ಮದಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಅಷ್ಟೊಂದು ಹಣ ಯಾರದ್ದು ಎಂಬ ಪ್ರಶ್ನೆ ಇದೀಗ ಹುಟ್ಟುಕೊಂಡಿದೆ.
ಆರೋಪಿಗಳಿಬ್ಬರನ್ನು ಬುಧವಾರ ಪಿಎಂಎಲ್‌ಎ ನ್ಯಾಯಾಲಯಕ್ಕೆ ಇಡಿ ಹಾಜರುಪಡಿಸಲಿದೆ. ಇಬ್ಬರ 10 ದಿನಗಳ ಇಡಿ ಕಸ್ಟಡಿ ಬುಧವಾರ ಅಂತ್ಯಗೊಳ್ಳಲಿದೆ.
ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಜುಲೈ 22ರಂದು ಸಚಿವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಇದಾದ ಬಳಿಕ ಜುಲೈ 28 ಅರ್ಪಿತಾಗೆ ಸಂಬಂಧಿಸಿದ ಮತ್ತೊಂದು ಫ್ಲ್ಯಾಟ್​ನಲ್ಲಿ ಮತ್ತೆ 28 ಕೋಟಿ ರೂಪಾಯಿ ನಗದು ದೊರೆತಿದೆ. ಇದುವರೆಗೂ 50 ಕೋಟಿ ರೂಪಾಯಿಗು ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಏನಿದು ಹಗರಣ?ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಇಡಿ, ಜುಲೈ 22ರಂದು ಅರ್ಪಿತಾ ಮನೆ ಮೇಲೆ ದಿಢೀರ್​ ದಾಳಿ ಮಾಡಿತು. ಈ ವೇಳೆ 21 ಕೋಟಿ ರೂಪಾಯಿ ನಗದು ಹಾಗೂ 20ಕ್ಕೂ ಹೆಚ್ಚು ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.(ಏಜೆನ್ಸೀಸ್​)
ಕಳ್ಳಬೇಟೆಗಾರರಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ “ರಾಣಾ” ಇನ್ನಿಲ್ಲ…

ವೃದ್ಧರಿಬ್ಬರಿಗೆ ಬೆತ್ತಲೆ ವಿಡಿಯೋ ಕಾಲ್​ ಮಾಡಿ 3.63 ಲಕ್ಷ ರೂ. ವಸೂಲಿ ಮಾಡಿದ ಐನಾತಿ ಲೇಡಿ

ಟ್ವಿಟರ್​, ಇನ್​ಸ್ಟಾಗ್ರಾಂ ಡಿಪಿ ಬದಲಿಸಿದ ಪ್ರಧಾನಿ: ನೀವೂ ಇದಕ್ಕೆ ಸಾಥ್​ ನೀಡಿ ಎಂದ ಮೋದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 4 =
Remember me
