ರಾಂಚಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಅದರಲ್ಲೂ ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳು ನೆಟ್ಟಿಗರನ್ನು ಹೆಚ್ಚು ಸೆಳೆಯುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಹೌದು, ಜಾರ್ಖಂಡ್​ನ ಹಜಾರಿಬಾಘ್​ ಜಿಲ್ಲೆಯ ದನುವಾ ಗ್ರಾಮದಲ್ಲಿ ಕೋತಿ ಒಂದು ಕಳೆದ ಒಂದು ವಾರದಿಂದ ಸರ್ಕಾರಿ ಶಾಲೆಗೆ ನಿತ್ಯವು ತಪ್ಪದೇ ಹಾಜರಾಗುತ್ತಿದೆ. ಮಂಗನ ಈ ನಡೆಗೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕೋತಿ ಶಾಲೆ ಮತ್ತು ಶಾಲೆಯ ಕಚೇರಿಯಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ಈ ಬಗ್ಗೆ ಮಾತನಾಡಿರುವ ಶಾಲಾ ಮುಖ್ಯೋಪಧ್ಯಾಯ ರತನ್​ ವರ್ಮ, ಬೆಳಗ್ಗೆ 9 ಗಂಟೆಗೆ ಶಾಲೆ ತೆರೆಯುತ್ತಿದ್ದಂತೆ ಕೋತಿಯು ಶಾಲಾ ಆವರಣವನ್ನು ಪ್ರವೇಶಿಸುತ್ತದೆ. ಸಂಜೆ ಶಾಲೆ ಮುಗಿಯುತ್ತಿದ್ದಂತೆ ಕೋತಿಯು ಶಾಲೆಯಿಂದ ನಿರ್ಗಮಿಸುತ್ತದೆ. ಒಂದು ವಾರದ ಹಿಂದೆ ಈ ಕೋತಿಯು ದಿಢೀರನೇ ಶಾಲೆಯ 9ನೇ ತರಗತಿ ಕೊಠಡಿಯನ್ನು ಪ್ರವೇಶಿಸಿದಾಗ ವಿದ್ಯಾರ್ಥಿಗಳು ಭಯಭೀತರಾದರು. ಆದರೆ, ಕೋತಿ ಯಾರೊಬ್ಬರಿಗೂ ಹಾನಿ ಮಾಡಿಲ್ಲ. ಬದಲಾಗಿ ತರಗತಿಯ ಮೇಜಿನ ಮೇಲೆ ಸುಮ್ಮನೇ ಕುಳಿತುಕೊಳ್ಳುತ್ತದೆ. ಯಾವುದೇ ತರಗತಿಗೆ ಹೋದರು ಮೊದಲ ಸಾಲಿನ ಮೇಜಿನಲ್ಲೇ ಕುಳಿತುಕೊಳ್ಳುವುದು ಅದರ ದೈನಂದಿನ ಅಭ್ಯಾಸವಾಗಿದೆ ಎಂದು ಮಾಹಿತಿ ನೀಡಿದರು.
In#Jharkhand's#Hazaribagha#wildlangoor attends a government school along with other students.pic.twitter.com/nTInwSfwMv
— Deepak Mahato (@deepakmahato)September 15, 2022

ಕಳೆದ ಬುಧವಾರ ಮುಖ್ಯೋಪಧ್ಯಾಯರ ಕಚೇರಿಗೆ ಎಂಟ್ರಿ ಕೊಟ್ಟ ಮಂಗ, ಅವರ ಟೇಬಲ್​ ಮೇಲೆ ಕುಳಿತುಕೊಂಡಿತ್ತು. ಇತ್ತ ತರಗತಿಗಳು ಆರಂಭವಾಗುತ್ತಿದ್ದಂತೆ ಅಲ್ಲಿಗೆ ತೆರಳಿತು. ಮಂಗನನ್ನು ಓಡಿಸಲು ಮುಖ್ಯೋಪಧ್ಯಾಯರು ಸಾಕಷ್ಟು ಬಾರಿ ಪ್ರಯತ್ನ ಮಾಡಿದರೂ ಎಲ್ಲಿಗೂ ಹೋಗದೇ ತರಗತಿಯಲ್ಲೇ ಕೋತಿ ಉಳಿದುಕೊಳ್ಳುತ್ತಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಸಕಲದೇವ್ ಯಾದವ್ ತಿಳಿಸಿದ್ದಾರೆ. ತಂಡವೊಂದು ಶಾಲೆಗೆ ಬಂದರೂ ಕೋತಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.(ಏಜೆನ್ಸೀಸ್​)
#Watch: झारखंड के हजारीबाग में एक लंगूर 5 दिनों से स्कूल में 'पढ़ाई' करने के लिए आ रहा है। धनुआ गांव के स्कूल में लंगूर आगे बैठकर टीचर की बात ध्यान से सुनता है और पूरी क्लास लेता है।#Jharkhand#Langoor#Monkey#School#ViralVideopic.twitter.com/z9ZclQdwYa
— Green Planet Magazine (@GreenPlanetMag1)September 15, 2022

ರಾಗಕೆ ಸ್ವರವಾಗಿ..: ಧನಂಜಯ್, ರಚಿತಾ ಕಂಡಂತೆ ಮಾನ್ಸೂನ್..

ದಕ್ಷಿಣ ಧ್ರುವದಿಂ ಉತ್ತರ ಧ್ರುವಕು; ಬಾಲಿವುಡ್​ನಲ್ಲಿ ಹೆಚ್ಚಿದ ರಿಮೇಕ್ ಟ್ರೆಂಡ್..

ಜೀವರಕ್ಷಕನಿಗೆ ಬೇಕು ಸಂರಕ್ಷಣೆ; ಇಂದು ಓಝೋನ್ ದಿನ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 3 =
Remember me
