ನವದೆಹಲಿ:ಗಡಿಯಲ್ಲಿ ಪಾಕಿಸ್ತಾನವು ತನ್ನ ಉಲ್ಲಂಘನೆಗಳನ್ನು ಹಾಗೂ ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ತನ್ನ ಪ್ರಾಯೋಕತ್ವವನ್ನು ನಿಲ್ಲಿಸದೇ ಹೋದಲ್ಲಿ​ ಹೆಚ್ಚಿನ ಸರ್ಜಿಕಲ್​ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವ ಅಮಿತ್​ ಷಾ ಪಾಕ್​ಗೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ದಾಳಿಗಳನ್ನು ನಾವು ಸಹಿಸುವುದಿಲ್ಲ ಎಂಬುದನ್ನು ಸರ್ಜಿಕಲ್​ ದಾಳಿಗಳು ಸಾಬೀತು ಮಾಡಿವೆ. ಹೀಗೆ ಉಲ್ಲಂಘನೆಗಳನ್ನು ಮುಂದುವರಿಸಿದರೆ, ಅಂತಹ ಮತ್ತಷ್ಟು ಸರ್ಜಿಕಲ್​ ದಾಳಿಗಳು ಬರಲಿವೆ ಎಂದು ಗೋವಾದ ಧರ್ಬಂದೋರಾದಲ್ಲಿ ನಡೆದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿದರು.
ಮಾಜಿ ರಕ್ಷಣಾ ಸಚಿವ ಮನೋಹರ್​ ಪರೀಕ್ಕರ್​ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸರ್ಜಿಕಲ್​ ದಾಳಿಗಳು ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದ ಗಡಿಗಳಲ್ಲಿ ಯಾರೋಬ್ಬರು ತೊಂದರೆ ನೀಡಬಾರದೆಂಬ ಸಂದೇಶವನ್ನು ನಾವು ರವಾನಿಸಿದ್ದೇವೆ. ಅಂದು ಮಾತುನಾಡುವ ಸಮಯವಾಗಿತ್ತು. ಆದರೆ, ಇಂದು ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಮಯ ಎಂದು ಪಾಕ್​ಗೆ ಚಾಟಿ ಬೀಸಿದ್ದಾರೆ.
https://twitter.com/ANI/status/1448571885768245250?s=20
2016ರ ಸೆಪ್ಟೆಂಬರ್​ ತಿಂಗಳಲ್ಲಿ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್​ ದಾಳಿ ನಡೆಸಿತ್ತು. ಉರಿ, ಪಠಾಣ್​ಕೋಟ್​ ಮತ್ತು ಗುರ್ದಾಸ್​ಪುರ್​ನಲ್ಲಿ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಸರ್ಜಿಕಲ್​ ದಾಳಿ ನಡೆದಿತ್ತು. ಈ ಸಮಯದಲ್ಲಿ ಅನೇಕ ಉಗ್ರರ ಕ್ಯಾಂಪ್​ಗಳನ್ನು ಹೊಡೆದುರುಳಿಸಲಾಗಿತ್ತು. ಉರಿ ಪ್ರದೇಶದ ಮೇಲೆ ನಡೆದ ದಾಳಿಯ 11 ದಿನಗಳ ಬಳಿಕ ಸೆಪ್ಟೆಂಬರ್​ 29, 2016ರಲ್ಲಿ ಸರ್ಜಿಕಲ್​ ದಾಳಿ ನಡೆದಿತ್ತು.(ಏಜೆನ್ಸೀಸ್​)
ವಿಜಯಪುರದ ಹುಡುಗಿಯ ಸಾಧನೆ: ಜಪಾನಿನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ರಾಜ್ಯದ ಏಕೈಕ ವಿದ್ಯಾರ್ಥಿನಿ

ಶಾರುಖ್​ ಪುತ್ರನಿಗೆ ಇಂದೂ ಸಿಗಲಿಲ್ಲ ಬಿಡುಗಡೆ ಭಾಗ್ಯ: ಅ.20ರವರೆಗೆ ಜೈಲು ವಾಸ​

ರಾತ್ರಿ ಸಮಯದಲ್ಲೇಕೆ ವೈದ್ಯರು ಶವಪರೀಕ್ಷೆ ಮಾಡುವುದಿಲ್ಲ? ಇಲ್ಲಿದೆ ಅಚ್ಚರಿಯ ಉತ್ತರ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 5 =
Remember me
