ಮುಂಬೈ:ಪೋರ್ನ್​ ವಿಡಿಯೋ ಪ್ರಕರಣದಲ್ಲಿ ಬಂಧನವಾಗಿರುವ ಸೆಲೆಬ್ರಿಟಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅವರದೇ ಕಂಪನಿಯ ನಾಲ್ವರು ಉದ್ಯೋಗಿಗಳು ಸಾಕ್ಷಿ ಹೇಳಲು ಮುಂದೆ ಬಂದಿದ್ದು, ರಾಜ್​ ಕುಂದ್ರಾಗೆ ಈ ಪ್ರಕರಣ ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ.
ಪೋರ್ನ್​ ವಿಡಿಯೋಗಳನ್ನು ತಯಾರಿಸಿ ಅದನ್ನು ವಿದೇಶಿ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡ್ತಿದ್ದ ಆರೋಪದ ಮೇಲೆ ರಾಜ್​ ಕುಂದ್ರಾ ಅವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಜುಲೈ 19ರಂದು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೂಕ್ತ ಸೆಕ್ಷನ್​ಗಳಡಿಯಲ್ಲಿ ರಾಜ್​ ಕುಂದ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೀಗ ಸಾಕ್ಷಿ ಹೇಳಲು ಮುಂದೆ ಬಂದಿರುವ ಕಂಪನಿಯ ನಾಲ್ವರು ಉದ್ಯೋಗಿಗಳು ಪ್ರಕರಣದ ಬಹುಮುಖ್ಯ ಸಾಕ್ಷಿಗಳಾಗಲಿದ್ದಾರೆ. ಆರೋಪಿಗಳಾದ ರಾಜ್​ ಕುಂದ್ರಾ ಮತ್ತು ಇತರರು ವಿಚಾರಣೆಗೆ ಸಾಕಷ್ಟು ಸಹಕರಿಸುತ್ತಿಲ್ಲವಾದ್ದರಿಂದ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ತೆಗೆಯಲು ನಾಲ್ವರು ಉದ್ಯೋಗಿಗಳು ಬಹು ಮುಖ್ಯವಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ವ್ಯವಹಾರಿಕಾ ಒಪ್ಪಂದ, ಹಣಕಾಸು ವ್ಯವಹಾರ ಸೇರಿದಂತೆ ಪೋರ್ನ್​ ವಿಡಿಯೋ ದಂಧೆ ಹೇಗೆ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಮಾಹಿತಿಯನ್ನು ತಿಳಿಯಲು ನಾಲ್ವರು ಸಾಕ್ಷಿಗಳು ಮುಖ್ಯವಾಗಿವೆ. ಈ ದಂಧೆಗೆ ಹಣವನ್ನು ಹೇಗೆ ಬಳಸಲಾಗುತ್ತಿತ್ತು ಎಂಬ ಮಾಹಿತಿ ಬಹು ಮುಖ್ಯವಾಗಿದ್ದು, ಸಾಕಷ್ಟು ಪ್ರಶ್ನೆಗಳಿಗೆ ನಾಲ್ವರಿಂದ ಉತ್ತರ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಶೀಘ್ರದಲ್ಲೇ ನಾಲ್ವರ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್​ ಮುಂದೆ ದಾಖಲಿಸಲಾಗುತ್ತದೆ. ಈಗಾಗಲೇ ರಾಜ್​​​ ಕುಂದ್ರಾಗೆ ಸಂಬಂಧಿಸಿದ ಮನೆಗಳ ಮೇಲೆ ದಾಳಿ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಅವರ ವಿಚಾರಣೆಯು ನಡೆದಿದೆ. ಕುಂದ್ರಾ ಕಚೇರಿಯ ಮೇಲೂ ದಾಳಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
‘ನನ್ನ ಗಂಡ ಅಶ್ಲೀಲ ವಿಡಿಯೋ ಹಾಕುತ್ತಿರಲಿಲ್ಲ, ಶೃಂಗಾರದ ವಿಡಿಯೋ ಚಿತ್ರೀಕರಿಸ್ತಿದ್ರು’

‘ಹೌ ನಾಟ್​ ಟು ಮೇಕ್​ ಮನಿ’ ರಾಜ್​ ಕುಂದ್ರ ಬರೆದಿರುವ ಕಾದಂಬರಿ ಈಗ ವೈರಲ್!

ತಾಯಿಯಾದ ಖುಷಿಯಲ್ಲಿ ‘ಯುವರತ್ನ’ ನಟಿ ಸಯೇಷಾ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fourteen =
Remember me
