ಹೊಸೂರು:ನೇಣು ಬಿಗಿದುಕೊಂಡು ಅಮ್ಮ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನ ಅಣ್ಣಾನಗರದಲ್ಲಿ ನಡೆದಿದೆ.
ನೂರ್ಜಾನ್ (38) ಮತ್ತು ಮಗಳು ಮೊಸಿಂಜಾನ್ (17) ನೇಣಿಗೆ ಶರಣಾದವರು. ಅಣ್ಣಾನಗರದ ಜೈಶಂಕರ್ ಕಾಲೋನಿಯಲ್ಲಿ ವಾಸವಿದ್ದರು. ನೂರ್ಜಾನ್​ ಪತ್ನಿ ಮೆಕ್ಯಾನಿಕ್ ಮಹಬೂಬ್ ಪಾಷ ಬಾರಂಡಪಲ್ಲಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ನಡೆಸುತ್ತಿದ್ದಾರೆ. ರಾತ್ರಿ ಮಹಾಬೂಬ್ ಪಾಷಾ ಮನೆಯಿಂದ ಹೊರಗೆ ಹೋಗಿದ್ದಾಗ ಘಟನೆ ನಡೆದಿದೆ.
ಪತ್ನಿ ನೂರ್ಜಾನ್ ಮತ್ತು ಪುತ್ರಿ ಮೋಸಿಂಜಾನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ರಿ ಮೋಸಿಂಜಾನ್ 10ನೇ ತರಗತಿವರೆಗೆ ಓದಿದ್ದು, ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದಳು. ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಸ್ಥಳಕ್ಕಾಗಮಿಸಿದ ಹೊಸೂರು ಪೊಲೀಸರು, ಮನೆಯ ಬಾಗಿಲು ಒಡೆದು ಒಳ ನುಗ್ಗಿ ಇಬ್ಬರ ಮೃತದೇಹಗಳನ್ನ ಹೊರಗೆ ತೆಗೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ತನಿಖೆ ಆರಂಭವಾಗಿದ್ದು, ಇನ್ನಷ್ಟೇ ಕಾರಣ ತಿಳಿದುಬರಬೇಕಿದೆ.(ದಿಗ್ವಿಜಯ ನ್ಯೂಸ್​)
ಹೂ ಅಂಟಾವ… ಸಿನಿಮಾಗಿಂತ ಮೇಕಿಂಗ್​ ವಿಡಿಯೋದಲ್ಲೇ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿರುವ ಸಮಂತಾ!

ಬುಲ್ಲಿ ಬಾಯ್​ ಆ್ಯಪ್ ಸೃಷ್ಟಿಕರ್ತ ಅರೆಸ್ಟ್​: ರ‍್ಯಾಂಕಿಂಗ್ ವಿದ್ಯಾರ್ಥಿಯ ಸ್ಫೋಟಕ ಮಾಹಿತಿ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
