ಸೂರ್ಯಪೇಟೆ:ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸಬೇಕಾದ ತಾಯಿಯೊಬ್ಬಳು ಮೌಢ್ಯಕ್ಕೆ ಮರುಳಾಗಿ ಹತ್ತೆ ಮಗುವನ್ನೇ ಬಲಿ ನೀಡಿರುವ ಭಯಾನಕ ಘಟನೆ ತೆಲಂಗಾಣದ ಸೂರ್ಯಪೇಟೆಯ ಮೆಕಲಪಟಿ ತಾಂಡಾದಲ್ಲಿ ಗುರುವಾರ ಸಂಜೆ ನಡೆದಿದೆ.
ಪತ್ನಿಯ ಮೌಢ್ಯತೆ ಕಂಡು ಪತಿ ಆಘಾತಕ್ಕೆ ಒಳಗಾಗಿದ್ದಾನೆ. ಇತ್ತ ಮಗುವೂ ಇಲ್ಲ ಅತ್ತ ಪತ್ನಿ ಜೈಲು ಪಾಲಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿವರಣೆಗೆ ಬರುವುದಾದರೆ, ಮೆಕಲಪಟಿ ಮೂಲದ ಕೃಷ್ಣ ಭಾರತಿ ಅಲಿಯಾಸ್​ ಲಾಸ್ಯ ಎಂಬಾಕೆಯನ್ನು ಮದುವೆ ಆಗಿದ್ದಾನೆ. ಕೃಷ್ಣ ವೃತ್ತಿಯಲ್ಲಿ ರೈತ. ದಂಪತಿಯ ವೈವಾಹಿಕ ಜೀವನ ಸಾಕ್ಷಿಯಾಗಿ ಹೆಣ್ಣು ಮಗು ಜನಿಸಿತ್ತು.
ಇದಕ್ಕೂ ಮುನ್ನ ಮದುವೆಯಾದ 7 ರಿಂದ 8 ತಿಂಗಳ ಬಳಿಕ ಪೂಜಾರಿ ಒಬ್ಬ ಭಾರತಿಗೆ ಪೂಜೆ ಮಾಡುವಂತೆ ಹೇಳಿದ್ದ. ಮೌಢ್ಯಗಳಲ್ಲಿ ಭಾರಿ ನಂಬಿಕೆ ಹೊಂದಿದ್ದ ಭಾರತಿ, ನನಗೆ ಭಯ ಇದೆ. ಈ ಭಯದಿಂದ ಹೊರಬರಲು ಏನು ಮಾಡಬೇಕೆಂದು ಕೇಳಿದಾಗ ಪೂಜಾರಿ ಪೂಜೆ ಮಾಡಲು ಹೇಳಿದ್ದ.
ಇದನ್ನೂ ಓದಿರಿ:ಕಾಲಿಗೆ ಕಪ್ಪು ದಾರ ಯಾಕೆ ಕಟ್ತಾರೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಸಂಗತಿ..!
ನಿಗೆ ನಾಗದೋಷವಿದೆ. ಹೀಗಾಗಿ ನಾಗಪೂಜೆ ಮಾಡಿ ಎಲ್ಲವೂ ಸರಿಹೋಗುತ್ತದೆ ಎಂದು ಪೂಜಾರಿ ಹೇಳಿದ್ದ. ಅಲ್ಲದೆ, ಹೆಣ್ಣಾಗಲಿ ಅಥವಾ ಗಂಡು ಮಗುವಾಗಲಿ ಹುಟ್ಟಿದಾಗ ಅದನ್ನು ಸಹ ತ್ಯಾಗ ಮಾಡಬೇಕು ಎಂದು ಪೂಜಾರಿ ಹೇಳಿದ್ದ. ಇದನ್ನೇ ಬಲವಾಗಿ ನಂಬಿದ ಭಾರತಿ ಅಂದಿನಿಂದ ವಾರಕ್ಕೆ ಎರಡು ಅಥವಾ ಮೂರು ದಿನ ನಾಗಪೂಜೆ ಮಾಡಲು ಆರಂಭಿಸಿದಳು. ಇದರ ನಡುವೆಯೇ ಆಕೆ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದಳು.
ಹೀಗಿರುವಾಗ ಗುರುವಾರ ಕೆಲಸದ ಮೇಲೆ ಕೃಷ್ಣ ಸೂರ್ಯಪೇಟೆಗೆ ತೆರಳಿದ್ದಾನೆ. ಆದರೆ, ಪತ್ನಿ ವರ್ತನೆ ಬಗ್ಗೆ ಮೊದಲೇ ಅನುಮಾನ ಹೊಂದಿದ್ದ ಕೃಷ್ಣ ತನ್ನ ಅತ್ತೆ ಮನೆಯವರಿಗೆ ಭಾರತಿಯನ್ನು ನೋಡಿಕೊಳ್ಳಲು ಹೇಳಿ ಹೋಗಿರುತ್ತಾನೆ. ಇತ್ತ ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದ ಭಾರತಿ ಚಾಕುವಿನಿಂದ ಮಗುವನ್ನು ಕೊಂದಿರುತ್ತಾಳೆ. ಇತ್ತ ಮನೆಗೆ ಮಗಳನ್ನು ನೋಡಿಕೊಳ್ಳಲು ಬಂದ ಭಾರತಿಯ ತಾಯಿ ಮಗುವಿನ ಸ್ಥಿತಿ ಕಂಡು ಬೆಚ್ಚಿ ಬೀಳುತ್ತಾರೆ.
ಭಾರತಿ ದೇವರ ಫೋಟೋ ಮುಂದೆಯೇ ತನ್ನೆಲ್ಲ ಕೆಲಸವನ್ನು ಮಾಡಿರುತ್ತಾಳೆ. ನಾಗಪೂಜೆ ಹೇಗೆ ಮಾಡಬೇಕೆಂಬುದನ್ನು ಯೂಟ್ಯೂಬ್​ನಲ್ಲಿ ನೋಡಿರುತ್ತಾಳೆ. ಆಘಾತಕಾರಿ ವಿಚಾರವೆಂದರೆ, ಭಾರತಿಯೇನೂ ಅನಾಗರಿಕಳಲ್ಲ. ಡಿಗ್ರಿ ಜತೆಗೆ ಬಿಇಡಿ ಸಹ ಮಾಡಿದ್ದು, ವಿದ್ಯಾವಂತ ಮಹಿಳೆ. ಆದರೆ, ಮೌಢ್ಯಕ್ಕೆ ಕಟ್ಟುಬಿದ್ದು ಇಂಥ ಕೃತ್ಯ ಎಸಗಿದ್ದಾಳೆ. ಸದ್ಯ ಆಕೆಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.(ಏಜೆನ್ಸೀಸ್​)
ವೆಡ್ಡಿಂಗ್​ ಕಾರ್ಡ್​ ಮೇಲೆ ಮದುಮಗನ ಜಾಗದಲ್ಲಿ ಲಾಲು ಫೋಟೋ- ದಂಗಾದ ಮುಖಂಡರು!

ಬಾಯ್​ಫ್ರೆಂಡ್​ ಜತೆ ಮಾತನಾಡಲು ಅಡ್ಡಿಪಡಿಸಿದ ತಮ್ಮನನ್ನೇ ಕೊಂದ 15 ವರ್ಷದ ಸಹೋದರಿ

ಕರೊನಾ ತಡೆಗೆ ಅಗ್ನಿಹೋತ್ರ; ರಾಜ್ಯಾದ್ಯಂತ ಕೈಗೊಳ್ಳಲು ಬಿಎಸ್​ವೈ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
