
ಭೋಪಾಲ್​:ಪ್ರಸ್ತುತ ಕಾಲದಲ್ಲಿ ಹಣಕ್ಕಾಗಿ ಜನರು ಯಾವ ಮಟ್ಟಕ್ಕಾದರೂ ಇಳಿಯಲು ತಯಾರಾಗಿರುತ್ತಾರೆ. ಆದರೆ, ಮಧ್ಯಪ್ರದೇಶದ ಬಾಲಘಾಟ್​ ಜಿಲ್ಲೆಯಲ್ಲಿ ಆಭರಣ ವ್ಯಾಪಾರಿಯೊಬ್ಬರು 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಇಡೀ ಕುಟುಂಬದ ಜತೆಗೆ ಲೌಕಿಕ ಜೀವನ ತೊರೆದು, ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ.
ಆಭರಣ ವ್ಯಾಪಾರಿ ರಾಕೇಶ್​ ಸುರಾನ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಗೋಶಾಲೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ತಾನೊಬ್ಬನೆ ಅಲ್ಲದೆ, ತನ್ನೊಂದಿಗೆ ಪತ್ನಿ ಲೀನಾ (36) ಮತ್ತು ಪುತ್ರ ಅಮಯ್​ (11) ಜತೆ ಲೌಕಿಕ ಜೀವನ ತೊರೆದು ಆಧ್ಯಾತ್ಮಿಕತೆ ದಾರಿಯನ್ನು ಹಿಡಿದಿದ್ದಾರೆ. ಜೈಪುರದಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಇಡೀ ಕುಟುಂಬದ ಜತೆಗೆ ರಾಕೇಶ್​ ದೀಕ್ಷೆಯನ್ನು ಪಡೆದುಕೊಳ್ಳಲಿದ್ದಾರೆ. ಜೈನ ಸಮಾಜದವರು ಕೂಡ ರಾಕೇಶ್​ ಕುಟುಂಬವನ್ನು ಅದ್ಧೂರಿಯಾಗಿ ಬೀಳ್ಕೊಟ್ಟರು.
ರಾಕೇಶ್​ ಕುಟುಂಬದ ನಡೆಯನ್ನು ಜೈನ ಸಮಾಜ ಸ್ವಾಗತಿಸಿದೆ ಮತ್ತು ಗೌರವಿಸಿದೆ. ಸಕಾಲ್​ ಜೈನ ಸಮಾಜ ಮಂಗಳವಾರ ಸಮಾರಂಭವನ್ನು ಏರ್ಪಡಿಸಿತ್ತು. ಈ ವೇಳೆ ಸಾಕಷ್ಟು ಜನರು ಸೇರಿದ್ದರು. ಎಲ್ಲರು ಸೇರಿ ದೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿರುವ ರಾಕೇಶ್​ ಕುಟುಂಬಕ್ಕೆ ಗೌರವದಿಂದ ಬೀಳ್ಕೊಟ್ಟರು.
ಮಗ ದೊಡ್ಡವನಾಗಲು ಕಾದಿದ್ದರುಮಹೇಂದ್ರ ಸಾಗರ್ ಮಹಾರಾಜ್ ಮತ್ತು ಮನೀಷ್ ಸಾಗರ್ ಮಹಾರಾಜ್ ಅವರ ಪ್ರವಚನಗಳಿಂದ ಪಡೆದ ಸ್ಫೂರ್ತಿಯಿಂದ ನನ್ನ ಮನಸ್ಸು ಬದಲಾಗಿದೆ ಮತ್ತು ಆ ಕಾರಣದಿಂದಾಗಿ ಧರ್ಮ, ಆಧ್ಯಾತ್ಮಿಕತೆ ಮತ್ತು ಸ್ವಯಂ ಸ್ವರೂಪವನ್ನು ಗುರುತಿಸುವ ಸ್ಫೂರ್ತಿ ನನಗೆ ಸಿಕ್ಕಿತು ಎಂದು ಸುದ್ದಿಗಾರರೊಂದಿಗಿನ ಚರ್ಚೆಯಲ್ಲಿ ರಾಕೇಶ್​ ಹೇಳಿದರು. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿರುವ ರಾಕೇಶ್​ ಪತ್ನಿ ಲೀನಾ ಅವರಿಗೆ ಬಾಲ್ಯದಿಂದಲೂ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕೆಂಬ ಆಸೆ ಇತ್ತು. ಅಷ್ಟೇ ಅಲ್ಲ, ಮಗ ಅಮಯ್ 4 ವರ್ಷದವನಿದ್ದಾಗ ಆಧ್ಯಾತ್ಮಿಕ ಹಾದಿಯಲ್ಲಿ ಸಾಗುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಮಗ ತುಂಬಾ ಚಿಕ್ಕವನಾಗಿದ್ದಾರಿಂದ ತಮ್ಮ ಇಚ್ಛೆಯ ಹಾದಿಯನ್ನು ಅನುಸರಿಸಲು ಏಳು ವರ್ಷಗಳ ಕಾಲ ಕಾಯಬೇಕಾಯಿತು.
ಸಣ್ಣ ಆಭರಣ ಅಂಗಡಿಯಿಂದ ಬಿಸಿನೆಸ್​ ಆರಂಭರಾಕೇಶ್ ಅವರು ಬಾಲಘಾಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಅಂಗಡಿಯನ್ನು ಹೊಂದಿದ್ದರು, ಆದರೆ ಕ್ರಮೇಣ ಅವರ ವ್ಯಾಪಾರವು ಬೆಳೆದು ಕೋಟಿಗಟ್ಟಲೆ ಆಸ್ತಿಯನ್ನು ಸಂಪಾದಿಸಿದರು. ಹೆಸರು, ಕೀರ್ತಿ ಎರಡನ್ನೂ ಹೊಂದಿದ್ದರು ಎಲ್ಲ ಆಸ್ತಿಯನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಆಧುನಿಕತೆಯ ಯುಗದಲ್ಲಿ ಸುಖೀ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳೂ ರಾಕೇಶ್​ ಅವರ ಕುಟುಂಬದಲ್ಲಿ ಇದ್ದವು. ಅವರು ಕೋಟಿಗಟ್ಟಲೆ ಆಸ್ತಿ ಗಳಿಸಿದ್ದಾರೆ. ಆದರೆ, ಇಡೀ ಕುಟುಂಬ ತಮ್ಮ ವರ್ಷಗಳ ಸಂಪಾದನೆಯನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿದೆ.
ಈಗಾಗಲೇ ದೀಕ್ಷೆ ಪಡೆದಿರುವ ತಾಯಿ ಮತ್ತು ಸಹೋದರಿಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ರಾಕೇಶ್​ ಅವರ ತಾಯಿ ಈಗಾಗಲೇ ಗೃಹಸ್ಥ ಜೀವನದಿಂದ ವಿಮುಖಗೊಂಡು ದೀಕ್ಷೆಯನ್ನು ಪಡೆದಿದ್ದಾರೆ. ಅವರ ಸಹೋದರಿಯೊಬ್ಬರು ಸಹ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಇದೀಗ ರಾಕೇಶ್​ ಅವರು ತಾಯಿ ಮತ್ತು ಸಹೋದರಿಯ ಮಾರ್ಗವನ್ನು ಅನುಸರಿಸಿ ದೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)
ನೀಚ ಕೃತ್ಯದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಜೀವನ ಹಾಳು ಮಾಡ್ತಿದ್ದ ದೈಹಿಕ ಶಿಕ್ಷಕಿಯ ಬಂಧನ
ಸತ್ತವಳ ಹೆಸರಲ್ಲಿ ಬಂತು ಫೇಸ್​ಬುಕ್ ಫ್ರೆಂಡ್​ ರಿಕ್ವೆಸ್ಟ್​! ಹೆದರಿ ಠಾಣೆಗೆ ದೌಡಾಯಿಸಿದ ಸಂಬಂಧಿಕರು
ಮೈ ಮೇಲಿದ್ದ ಚಿನ್ನವೇ ಚೇತನಾಗೆ ಮುಳುವಾಯ್ತಾ? ಪಾಲಕರ ಮಾತು ಕೇಳಿದಿದ್ರೆ ಖಂಡಿತ ಪ್ರಾಣ ಉಳಿಯುತ್ತಿತ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 10 =
Remember me
