ಇಂದೋರ್​:ಆತಂಕಕಾರಿ ಘಟನೆಯೊಂದು ಮಧ್ಯಪ್ರದೇಶದ ಇಂದೋರ್​ನಿಂದ ವರದಿಯಾಗಿದೆ. ವಿವಾಹಿತೆಯನ್ನು ಮರುಮದುವೆಯಾದ ವ್ಯಕ್ತಿಯೊಬ್ಬ ತದನಂತದಲ್ಲಿ ಆಕೆಯ ಮಗಳನ್ನೂ ಮದುವೆ ಮಾಡಿಕೊಡಲು ಒತ್ತಾಯಿಸಿದ ವಿಚಿತ್ರ ಪ್ರಸಂಗ ಜರುಗಿದೆ.
ಅಲ್ಲದೆ, ಮದುವೆಯಾದ ಕೆಲವೇ ದಿನಗಳಲ್ಲಿ ಮರುಮದ್ವೆಯಾದ ಮಹಿಳೆಯ ಮಗಳೊಂದಿಗೆ ಆತ ಓಡಿಹೋಗಿದ್ದು, ಇಂದೋರ್​ನಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಮರುಮದುವೆಯಾದ ಮಹಿಳೆ ಗಂಡನ ವಿರುದ್ಧವೇ ದೂರು ನೀಡಿದ್ದು, ಮಗಳನ್ನು ಹುಡುಕಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಅಂದಹಾಗೆ ಈ ಘಟನೆ ಇಂದೋರ್​ನ ಲಾಸುದಿಯಾ ಏರಿಯಾದಲ್ಲಿ ನಡೆದಿದೆ. ಕಳೆದ ಸೋಮವಾರ ಪೊಲೀಸ್​ ಠಾಣೆಗೆ ತೆರಳಿದ ಮಹಿಳೆ ತನ್ನ ಗಂಡನ ವಿರುದ್ಧವೇ ದೂರು ನೀಡಿದ್ದಾಳೆ. ಖರ್ಜಾನಾ ನಿವಾಸಿ ಸಂತೋಷ್​ ಸಿಂಗ್​ನನ್ನು ಪ್ರೀತಿಸಿ ಮರುಮದುವೆಯಾದೆ. ಆದರೆ, ಮದುವೆಯಾದ 15 ದಿನಗಳ ಬಳಿಕ ಮಗಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ. ಸಂಬಂಧದಲ್ಲಿ ಮಗಳಾಗುತ್ತಾಳೆ ಎಂದು ಸಂತೋಷ್‌ಗೆ ಸಾಕಷ್ಟು ಮನವರಿಕೆ ಮಾಡಿದೆ. ಆದರೆ, ಅದಕ್ಕೆ ಆತ ಒಪ್ಪಲಿಲ್ಲ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸೋಮವಾರ ರಾತ್ರಿ ಮನೆಗೆ ಬಂದ ಸಂತೋಷ್​ ಬಲವಂತವಾಗಿ ಮಗಳನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಬಲೆ ಬೀಸಿದ್ದಾರೆ. ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಹಳಿತಪ್ಪಿ ಸೇತುವೆಯಿಂದ ನದಿಗೆ ಉರುಳಿದ ಗೂಡ್ಸ್​ ರೈಲು: ಟನ್​ಗಟ್ಟಲೇ ಕಲ್ಲಿದ್ದಲು ನಾಶ

ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

ಮನ ಮೆಚ್ಚಿದ ಹುಡುಗಿಗೆ ಇಂಪ್ರೆಸ್‌ ಮಾಡಲು ರೋಸ್‌ ಬದಲು ಗನ್‌ ಕೊಟ್ಟು ಜೈಲಿಗೆ ಹೋದ ಪ್ರೇಮಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
