ಭೋಪಾಲ್​:ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಮಧ್ಯ ಪ್ರದೇಶದ ದೇವಾಸ್​ ಜಿಲ್ಲೆಯ 90 ವರ್ಷದ ವೃದ್ಧೆ ತಾಜಾ ಉದಾಹರಣೆ ಆಗಿದ್ದಾರೆ. ಇಳಿವಯಸ್ಸಿನಲ್ಲೂ ವೃದ್ಧೆ ಕಾರು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಜ್ಜಿ ಇದೀಗ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ವೃದ್ಧೆಯ ಹೆಸರು ರೇಷಮ್​ ಬಾಯ್​ ತನ್ವರ್. ಇವರು ದೇವಾಸ್​ ಜಿಲ್ಲೆಯ ಬಿಲವಾಲಿ ಪ್ರದೇಶದ ನಿವಾಸಿ. ಅವರ ಇಡೀ ಕುಟುಂಬ ಚಾಲನಾ ಕೌಶಲ್ಯ ಹೊಂದಿರುವುದರಿಂದ ವೃದ್ಧೆಯು ಕೂಡ 90ನೇ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತುಕೊಂಡಿದ್ದಾರೆ. ​
ನನಗೆ ಡ್ರೈವಿಂಗ್​ ಮಾಡುವುದೆಂದರೆ ತುಂಬಾ ಖುಷಿ. ನಾನು ಕಾರು ಮಾತ್ರವಲ್ಲದೆ ಟ್ರ್ಯಾಕ್ಟರ್​ಗಳನ್ನು ಸಹ ಓಡಿಸುತ್ತೇನೆಂದು ಅಜ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.
ಇಳಿ ವಯಸ್ಸಿನಲ್ಲಿ ಅಜ್ಜಿಯ ಕಲಿಕಾ ಹುಮ್ಮಸ್ಸಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​​ ಸಿಂಗ್​ ಚೌಹಾಣ್​ ಫಿದಾ ಆಗಿದ್ದು, ಟ್ವೀಟ್​ ಮೂಲಕ ಹಿರಿಯ ಮಹಿಳೆಯನ್ನು ಅಭಿನಂದಿಸಿದ್ದಾರೆ. ಈ ವಯಸ್ಸಿನಲ್ಲಿ ಡ್ರೈವಿಂಗ್​ ಕಲಿತಿರುವ ಅವರು ಎಲ್ಲರಿಗೂ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಕ್ಯಾಬ್​ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಮೊಬೈಲ್​ ರಹಸ್ಯ ಬಯಲು!

ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!

ಪ್ರಧಾನಿ ಮೋದಿ ಜತೆಗಿನ ಮೊದಲ ಭೇಟಿಯಲ್ಲೇ ಭಯೋತ್ಪಾದನೆಯಲ್ಲಿ ಪಾಕ್​ ಪಾತ್ರ ಪ್ರಸ್ತಾಪಿಸಿದ ಕಮಲಾ ಹ್ಯಾರಿಸ್​

Sign in to your account
Please enter an answer in digits:three × 2 =
Remember me
