ಅಹಮದಾಬಾದ್​:ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯಲ್ಲಿ ಯುವ ಸಮೂಹವೇ ಹೆಚ್ಚು ಮೃತ್ಯು ಕೂಪಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದುರ್ಬಲರು ಮಾತ್ರವಲ್ಲದೆ ಬಲಶಾಲಿಗಳು ಸಹ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ.
ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ ಮತ್ತು ಮಿಸ್ಟರ್​ ಇಂಡಿಯಾ ಜಗದೀಶ್​ ಲ್ಯಾಡ್​ ಅವರು ಕರೊನಾಗೆ ಬಲಿಯಾಗಿದ್ದಾರೆ. ಶುಕ್ರವಾರ ಗುಜರಾತ್​ನ ವಡೋದರದಲ್ಲಿ ಮೃತಪಟ್ಟ ಜಗದೀಶ್​​ ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.
ಕರೊನಾ ಸೋಂಕು ದೃಢಪಟ್ಟ ಬಳಿಕ ವಡೋದರಾ ಆಸ್ಪತ್ರೆಗೆ ದಾಖಲಾಗಿದ್ದ ಜಗದೀಶ್​ ಅವರಿಗೆ ಆಕ್ಸಿಕನ್​ ಸಪೋರ್ಟ್​ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಜಗದೀಶ್​ ಕೊನೆಯುಸಿರೆಳೆದಿದ್ದಾರೆ.
ಲ್ಯಾಡ್​ ಅವರು ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ತವರು ರಾಜ್ಯ ಮಹಾರಾಷ್ಟ್ರ ಮತ್ತು ಭಾರತವನ್ನು ಪ್ರತಿನಿಧಿಸಿದ್ದಾರೆ.(ಏಜೆನ್ಸೀಸ್​)
ಕರೊನಾ ಸಂಕಷ್ಟದಲ್ಲಿ ತಲೆಎತ್ತಿದೆ ಮೆಡಿಕಲ್​ ಮಾಫಿಯಾ: ಬೆಚ್ಚಿಬೀಳಿಸುವ ವರದಿ ಇದು..!

ದುರ್ವಾಸನೆ ಬರುತ್ತಿದ್ದ ತಾಯಿಯ ಶವದ ಜತೆಯೇ ಇತ್ತು ಹಸಿವಿನಿಂದ ನರಳುತ್ತಿದ್ದ ಮಗು! ಕರೊನಾ ಭಯದಿಂದ ಹತ್ತಿರವೂ ಬಾರದ ಕುಟುಂಬಸ್ಥರು!

ಗುರು ತೇಜ್​ ಬಹದ್ದೂರ್​ 400ನೇ ಜಯಂತಿ: ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಪ್ರಧಾನಿ ಮೋದಿ ಭೇಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
