ಮುಂಬೈ:ಕಂಟೈನರ್​ ಟ್ರಕ್​ ಒಂದು ಸೇತುವೆ ಕೆಳಗಡೆ ಸಿಲುಕಿದ ವಿರಳಾತಿ ವಿರಳ ಘಟನೆ ಮುಂಬೈನ ಕಿಂಗ್​ ಸರ್ಕಲ್​​ ರೈಲ್ವೆ ಸೇತುವೆಯಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ನಡೆಸಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಸುಕಿನ ಜಾವ 4 ಗಂಟೆ ಸುಮಾರಿಗೆ ಸೇತುವೆ ಅಡಿ ಸಿಲುಕಿದ್ದ ಕಂಟೈನರ್​ ಟ್ರಕ್​ ಅನ್ನು ತೆರವುಗೊಳಿಸಲಾಗಿದೆ.
ಟ್ರಕ್​ ಚಾಲನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆಂದು ಮಾತುಂಗ ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಚಾಲಕನಿಗೆ ಸೇತುವೆಯ ಎತ್ತರದ ಬಗ್ಗೆ ತಿಳಿಯದೇ ವಾಹನ ಚಲಾಯಿಸಿದ್ದರಿಂದ ಸೇತುವೆ ಅಡಿಗೆ ಸಿಲುಕಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಟ್ರಕ್​ ಚಾಲಕ ಕಿಶನ್​, ಟ್ರಕ್​ ದೆಹಲಿಯಿಂದ ಬರುತ್ತಿತ್ತು. ನಾನು ಇದೇ ಮೊದಲ ಬಾರಿಗೆ ಈ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದೆ, ಆದ್ದರಿಂದ ಸೇತುವೆಯ ಎತ್ತರವನ್ನು ತಕ್ಷಣಕ್ಕೆ ತಿಳಿಯಲು ಆಗಲಿಲ್ಲ ಎಂದು ಹೇಳಿದ್ದಾನೆ.
ಘಟನೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸೇತುವೆ ಕೆಳಗೆ ನುಗ್ಗಿದ ಟ್ರಕ್​ ಅಲ್ಲಿಯೇ ಸಿಲುಕಿದ್ದು, ಕಂಟೈನರ್​ ಜಖಂ ಆಗಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇನ್ನು ಕಿಂಗ್ಸ್ ಸರ್ಕಲ್ ಸೇತುವೆಯ ಕೆಳಗೆ ಟ್ರಕ್ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯು ಇಂತಹ ಘಟನೆ ನಡೆದಿದೆ.
ಕಿಂಗ್ಸ್ ಸರ್ಕಲ್ ರೈಲ್ವೆ ಸೇತುವೆಯನ್ನು ಸಿಯಾನ್ ಆಸ್ಪತ್ರೆಯಿಂದ ಮಾತುಂಗಾ ಮತ್ತು ದಾದರ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಕೆಲವು ಟ್ರಕ್ ಅಥವಾ ದೊಡ್ಡ ಕಂಟೈನರ್ ಸಿಕ್ಕಿಹಾಕಿಕೊಳ್ಳುವುದು ಬಹುತೇಕ ಪ್ರತಿ ವರ್ಷವು ವರದಿಯಾಗುತ್ತಿರುತ್ತದೆ.(ಏಜೆನ್ಸೀಸ್​)
Maharashtra | Container truck gets stuck under King's Circle railway bridge in Mumbai
"The truck is coming from Delhi. I was driving on this road for the first time, so I could not figure out the height of the bridge" said the driver, Kishanpic.twitter.com/DOhdrXMMA3
— ANI (@ANI)May 3, 2022

ನೇಪಾಳದ ಪಾರ್ಟಿಗೆ ರಾಹುಲ್ ಹೋಗಿದ್ಯಾಕೆ? ಯಾರೀ ಸ್ನೇಹಿತೆ? ವೈರಲ್​ ವಿಡಿಯೋದ ಅಸಲಿಯತ್ತೇನು?

ನಕಲಿ ನೋಟಿಫಿಕೇಶನ್: ಆನ್​ಲೈನ್​ನಲ್ಲಿ ರೈಲ್ವೆ ಹುದ್ದೆಗೆ ಅರ್ಜಿ ಹಾಕುವ ಮುನ್ನ ಎಚ್ಚರ!

ಆಸ್ತಿ ಸ್ವಯಾರ್ಜಿತವಾಗಿದ್ದರೆ ಮೊಮ್ಮಕ್ಕಳಿಗೆ ಅದರಲ್ಲಿ ಯಾವುದೇ ಪಾಲು ಇಲ್ಲ- ಕಾನೂನಲ್ಲಿ ಉಲ್ಲೇಖವಾಗಿದ್ದು ಹೀಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
