ಮುಂಬೈ: ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ದೇಶದಲ್ಲಿ ತೀವ್ರವಾಗಿದ್ದು ದಿನೇದಿನೆ ಸೋಂಕಿತ ಪ್ರಕರಣಗಳ ಹೆಚ್ಚಳದೊಂದಿಗೆ ಮೃತ್ಯು ಕೂಪವೂ ಬೆಳೆಯುತ್ತಿದೆ. ಇದರ ನಡುವೆ ಕೋವಿಡ್​ ಹೆಮ್ಮಾರಿಗೆ ಮುಂಬೈನ 51 ವರ್ಷದ ವೈದ್ಯೆ ಬಲಿಯಾಗಿದ್ದು, ಸಾಯುವ ಮುನ್ನ ಅವರ ಫೇಸ್​ಬುಕ್​ ಸಂದೇಶ ಮನಕಲಕುವಂತಿದೆ.
ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮನಿಶಾ ಜಾಧವ್​ ಸೋಮವಾರ ಕೋವಿಡ್​ಗೆ ಬಲಿಯಾಗಿದ್ದಾರೆ. ಅದಕ್ಕೂ ಮುನ್ನ ಅಂದರೆ ಭಾನುವಾರ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಮನಿಶಾ, ಬಹುಶಃ ಇದೇ ನನ್ನ ಕೊನೆಯ ಶುಭೋದಯ ಅನಿಸುತ್ತದೆ. ಈ ವೇದಿಕೆಯಲ್ಲಿ ನಿಮ್ಮನ್ನು ಇನ್ನು ಮುಂದೆ ಭೇಟಿ ಮಾಡುವುದಿಲ್ಲ ಅನಿಸುತ್ತಿದೆ. ಎಲ್ಲರೂ ಎಚ್ಚರಿಕೆ ವಹಿಸಿ. ದೇಹ ಮಾತ್ರ ಸಾಯುತ್ತದೆ. ಆತ್ಮ ಎಂದಿಗೂ ಸಾಯುವುದಿಲ್ಲ. ಆತ್ಮ ಅಮರ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿರಿ:ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​ ಕೇಸ್​: ಯುಪಿ ಪೊಲೀಸರಿಗೆ ಕ್ಲೀನ್​ ಚಿಟ್​ ನೀಡಿದ ತನಿಖಾ ಆಯೋಗ
ಡಾ. ಮನೀಶಾ ಅವರು ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿವಿಕ್​ ಹೆಲ್ತ್​ ಸೆಟಪ್​ನ ಸೋಂಕಿನಿಂದ ಸಾವಿಗೀಡಾದ ಮೊದಲ ವೈದ್ಯರಾಗಿದ್ದಾರೆ.
ಇದನ್ನೂ ಓದಿರಿ:ಕರೊನಾ ಸೋಂಕಿತರಿಗೆ ಊಟ ಕೊಡದ ವೈದ್ಯಾಧಿಕಾರಿ ಮುಖದಲ್ಲಿ ನೀರಿಳಿಸಿದ ಶಾಸಕ! ವಿಡಿಯೋ ವೈರಲ್​
ಇನ್ನು ಮಹಾರಾಷ್ಟ್ರದಲ್ಲಿ 18,000 ವೈದ್ಯರಿಗೆ ಕರೊನಾ ಪಾಸಿಟಿವ್​ ಆಗಿದೆ. ಭಾರತೀಯ ವೈದ್ಯಕೀಯ ಸಂಘದ ಪ್ರಕಾರ ಅದರಲ್ಲಿ 168 ಮಂದಿ ಈವರೆಗೂ ಸಾವಿಗೀಡಾಗಿದ್ದಾರೆ.(ಏಜೆನ್ಸೀಸ್​)
ಫನ್​ ಬಕೆಟ್​ ಭಾರ್ಗವನ ಕಾಮಕಾಂಡ ಬಿಚ್ಚಿಟ್ಟ ವಿಶಾಖಪಟ್ಟಣಂ ಎಸಿಪಿ: ಸಂತ್ರಸ್ತ ಬಾಲಕಿಗ್ಯಾಕೆ ಈ ದುರಾಸೆ ಬಂತು!

ಬಾಲಕಿ ಮೇಲೆ ರೇಪ್​: ಫನ್​ ಬಕೆಟ್​ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್​ ಸ್ಪಷ್ಟನೆ ಹೀಗಿದೆ…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ: ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 4 =
Remember me
