ಮುಂಬೈ:ಐಷಾರಾಮಿ ಜೀವನ ನಡೆಸಲು ಸರಣಿ ಕಳ್ಳತನ ಮಾಡುತ್ತಿದ್ದ ಪ್ರಖ್ಯಾತ ಯೂಟ್ಯೂಬರ್​ನನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿಯ ಹೆಸರು ಅಭಿಮನ್ಯು ಗುಪ್ತ. ಈತ ಸೋಶಿಯಲ್ ​ಮೀಡಿಯಾ ಇನ್ಫ್ಲ್ಯುಯೆನ್ಸರ್​. ಭಾರತದಲ್ಲಿ ಬ್ಯಾನ್​ ಆಗಿರುವ ಟಿಕ್​ಟಾಕ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿದ್ದ. ಬಂಧಿತನಿಂದ 14 ಮೊಬೈಲ್​ ಫೋನ್​, ಹರಿತ ಆಯುಧಗಳು, ನಕಲಿ ಆಭರಣಗಳು ಹಾಗೂ ನಕಲಿ ವಿದೇಶಿ ಕರೆನ್ಸಿ ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಂಬೈನ ವಿಬಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮುಂಬೈ, ನವಿ ಮುಂಬೈ ಹಾಗೂ ಥಾಣೆಯ ಅನೇಕ ಕಡೆ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಆರೋಪ ಯೂಟ್ಯೂಬರ್​ ಮೇಲಿದೆ. ತನ್ನ ಗುರುತನ್ನು ಮರೆ ಮಾಚಲು ಕ್ಯಾಪ್​ ಮತ್ತು ಮಾಸ್ಕ್​ ಧರಿಸುತ್ತಿದ್ದ. ಕಳೆದ ವಾರ ಮುಂಬೈ ಉಪನಗರ ಕುರ್ಲಾದಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ.
ಕುಟುಂಬವೊಂದು ಮರಳಿ ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಳುವಾಗಿರುವುದನ್ನು ಗಮನಿಸಿ, ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಆರೋಪಿಯ ಪತ್ತೆ ಸುಲಭವಾಗಿರಲಿಲ್ಲ. ಆತ ಕ್ಯಾಪ್​ ಮತ್ತು ಮಾಸ್ಕ್​ ಧರಿಸಿದ್ದರಿಂದ ಸುಮಾರು 150 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಆದರೆ, ಕಳ್ಳ ಎಷ್ಟು ದಿನ ಅಂತಾ ತಲೆಮರೆಸಿಕೊಳ್ಳಲು ಸಾಧ್ಯ. ಒಂದಲ್ಲ ಒಂದು ಕ್ಷಣದಲ್ಲಿ ಆತ ಸಿಕ್ಕಿಬೀಳಲೇಬೇಕು ಎಂಬ ಮಾತಿದೆ. ಅದರಂತೆ ಒಂದು ಸ್ಥಳದಲ್ಲಿ ಆರೋಪಿ ತನ್ನ ಕ್ಯಾಪ್​ ಮತ್ತು ಮಾಸ್ಕ್​ ತೆಗೆಯುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆಗಲೇ ಗೊತ್ತಾಗಿದ್ದು, ಆತ ಟಿಕ್​ಟಾಕರ್​ ಗುಪ್ತಾ ಎಂಬುದು. ಆರೋಪಿ ಕುರ್ಲಾಗೆ ಬಂದಿರುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಮುಂಬೈ ವಲಯದಲ್ಲಿ ಸುಮಾರು 15 ಮನೆಗಳಲ್ಲಿ ಕನ್ನ ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಕಳ್ಳತನ ಮಾಡಿದ ನಂತರ, ಆರೋಪಿ ಗುಪ್ತ, ಮನೆಯ ಹೊರಗೆ ಇರಿಸಲಾದ ಶೂಗಳು ಮತ್ತು ಚಪ್ಪಲಿಗಳನ್ನು ಸಹ ಕದಿಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪಾದರಕ್ಷೆಗಳು ತುಂಬಿದ್ದ ನಾಲ್ಕು ಗೋಣಿ ಚೀಲಗಳನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್​ಸ್ಟಾಗ್ರಾಂನಲ್ಲಿ ಖ್ಯಾತ ವ್ಯಕ್ತಿಗಳೊಂದಿಗೆ ವಿಡಿಯೋ ಮಾಡಿರುವ ಆರೋಪಿ, ಕ್ಯಾಸಿನೋಗಳಲ್ಲಿ ಹಣ ಖರ್ಚು ಮಾಡಿದ್ದನ್ನು ಮತ್ತು ದುಬಾರಿ ಬಟ್ಟೆಗಳನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದರು. ಗುಪ್ತ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 380 (ಕಳ್ಳತನದ ಮನೆ) ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.(ಏಜೆನ್ಸೀಸ್​)
ಪತ್ನಿ ಜತೆಗಿನ ಸಂಭೋಗದ ಬೆನ್ನಲ್ಲೇ ಮೊಬೈಲ್ ನೋಡಿದ ವ್ಯಕ್ತಿಗೆ ಬಿಗ್​ ಶಾಕ್​: ಮೆಮೊರಿ ಲಾಸ್​, ಇದು ಭಯಾನಕ ಕೇಸ್!​

VIDEO| ಶಕ್ತಿಮಾನ್​ ಸ್ಟೈಲ್​ನಲ್ಲಿ ಸಾಹಸ ಮಾಡಲು ಹೋಗಿ ಜೈಲು ಪಾಲಾದ ಮೂವರು ಯುವಕರು!

ಉತ್ತರ ಹೇಳಿ ಅಕ್ರಮಕ್ಕೆ ಸಹಕರಿಸಿದ ಜಾಣರಿಗೆ ನಡುಕ: ಪಿಎಸ್​ಐ ನೇಮಕ ಪರೀಕ್ಷೆಯಲ್ಲಿ ಡಿವೈಸ್ ಬಳಕೆ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 5 =
Remember me
