ಭೋಪಾಲ್​:ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಭೇದಿಸಲಾದ ವೇಶ್ಯಾವಾಟಿಕೆ ದಂಧೆಯ ಕುರಿತು ಶಾಕಿಂಗ್​ ಸಂಗತಿಯೊಂದು ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಮುನೀರ್​ ಇಲ್ಲಿವರೆಗೂ 75 ಮದುವೆ ಆಗಿರುವ ವಿಚಾರ ಬಯಲಾಗಿದೆ.
ಆರೋಪಿ ಮುನೀರ್​ ಬಾಂಗ್ಲದೇಶ ಮೂಲದವ. ಈತ ಇಲ್ಲಿಯವರೆಗೂ ಭಾರತಕ್ಕೆ 200 ಮಹಿಳೆರನ್ನು ಕಳ್ಳಸಾಗಾಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿರಿಸಿ, ಸಹಾಯ ಮಾಡುವ ನೆಪದಲ್ಲಿ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಎಂಬ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.
ಆಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಮುನೀರ್​, ಬಾಂಗ್ಲದೇಶ ಮತ್ತು ಭಾರತ ನಡುವೆ ಆರಾಮಾಗಿ ಓಡಾಡಿಕೊಂಡಿದ್ದ. ಸುಲಭವಾಗಿ ಹಣ ಮಾಡುವ ಗೀಳಿಗೆ ಬಿದ್ದಿದ್ದ ಆರೋಪಿಗೆ ಬಡ ಹೆಣ್ಣುಮಕ್ಕಳೇ ಪ್ರಮುಖ ಬಲಿಪಶುಗಳಾಗುತ್ತಿದ್ದರು. ಭಾರತದಂತಹ ಪ್ರಮುಖ ನಗರಗಳಲ್ಲಿ ಕೆಲಸ ಮತ್ತು ಕೈತುಂಬ ಹಣ ಕೊಡಿಸುವುದಾಗಿ ನಂಬಿಸಿ ಕರೆತಂದು ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದ. ಅಲ್ಲದೆ, ತಾನೂ ಕೂಡ ಸುಂದರ ಯುವತಿಯರನ್ನು ಮದುವೆ ಆಗಿ ತನ್ನ ಆಸೆಗಳನ್ನು ಪೂರೈಸಿಕೊಂಡ ಬಳಿಕ ಅವರನ್ನು ಕೂಡ ಬಲವಂತವಾಗಿ ಅದೇ ದಂಧೆ ಇಳಿಸುತ್ತಿದ್ದ.
ಕಳೆದ ಐದು ವರ್ಷಗಳಲ್ಲಿ ಸುಮಾರು 75 ಮದುವೆ ಮಾಡಿಕೊಂಡಿರುವ ಈತ 200 ಮಹಿಳೆಯರನ್ನು ಬಾಂಗ್ಲದೇಶದಿಂದ ಪಶ್ಚಿಮ ಬಂಗಾಳ ಮಾರ್ಗವಾಗಿ ಭಾರತಕ್ಕೆ ಕಳ್ಳಸಾಗಾಣೆ ಮಾಡಿದ್ದಾನೆ. ಕೊಲ್ಕತ್ತದ ಬ್ಯುಟಿಷಿಯನ್​ ಮಹಿಳೆಯರಿಗೆ ವಿಶೇಷ ತರಬೇತಿ ನೀಡುತ್ತಿದ್ದಳು. ಹೇಗೆ ಮಾತನಾಡಬೇಕು? ಹೇಗೆ ನಡೆಯಬೇಕು? ಮತ್ತು ಹೇಗೆ ಡ್ರೆಸ್​ ಮಾಡಿಕೊಳ್ಳಬೇಕು ಎಂಬುದನ್ನು ತರಬೇತಿ ನೀಡಿದ ಬಳಿಕ ಬಲವಂತವಾಗಿ ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಶ್ರೀಮಂತರನ್ನು ಸಂಪರ್ಕಿಸಿ ಅವರಿಂದ ಹಣ ಪಡೆದು ಮಹಿಳೆಯರನ್ನು ಸಾಗಾಟ ಮಾಡಲಾಗುತ್ತಿತ್ತು.
11 ತಿಂಗಳ ಹಿಂದೆಯೇ ಇಂದೋರ್​ನ ವಿಜಯನಗರ ಏರಿಯಾ ಮೇಲೆ ದಾಳಿ ಮಾಡಿದಾಗ 21 ಬಾಂಗ್ಲಾ ಮಹಿಳೆಯರನ್ನು ಬಂಧಿಸಲಾಗಿತ್ತು. ಈ ವೇಳೆ ಪ್ರಮುಖ ಆರೋಪಿ ಮುನೀರ್​ ಪರಾರಿಯಾಗಿದ್ದ. ಬಳಿಕ ಮಹಿಳೆಯರನ್ನು ವಿಚಾರಣೆ ನಡೆಸಿದಾಗ ಬಂಧಿತ 21 ಮಹಿಳೆಯರಲ್ಲಿ 12 ಮಂದಿ ಮುನೀರ್​ನನ್ನು ಮದುವೆ ಆಗಿದ್ದರು ಎಂಬ ವಿಚಾರ ತಿಳಿದು ಪೊಲೀಸರಿಗೆ ಶಾಕ್​ ಆಗಿತ್ತು. ಈ ವೇಳೆ ಆತನ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸ್​ ಇಲಾಖೆ ಘೋಷಿಸಿತ್ತು.
ಮತ್ತೊಂದು ಮದುವೆ ಆಗಿ ಆಕೆಯನ್ನು ಮಾರಾಟ ಮಾಡುವ ವೇಳೆ ಮುನೀರ್​ ಸೂರತ್​ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈವರೆಗೆ 75 ಮದುವೆ ಆಗಿರುವುದಾಗಿ ಮತ್ತು ಎಲ್ಲರನ್ನು ಮಾರಾಟ ಮಾಡಿರುವುದಾಗಿಯೂ ಮುನೀರ್​ ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)
ಮಗಳ ಡಿವೋರ್ಸ್​ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸಮಂತಾ ತಂದೆ ಜೋಸೆಫ್​ ಪ್ರಭು..!
ಮದುವೆಗೂ ಮುನ್ನವೇ ಒಪ್ಪಂದವೊಂದಕ್ಕೆ ಸಹಿ ಹಾಕಿ ತನ್ನ ಹಕ್ಕನ್ನು ಕಳೆದುಕೊಂಡರಾ ನಟಿ ಸಮಂತಾ?
ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!
ನಟ ದಂಪತಿಯ ವಿಡಿಯೋ ಮಾಡಿದ್ದೇ ತಪ್ಪಾಗೋಯ್ತು- ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
