ರಾಯ್ಪುರ್​:ಈ ನನ್ನ ಸಾವು ನಿನ್ನ ಮದುವೆಯ ಉಡುಗೊರೆ.. ಐ ಲವ್​ ಯೂ ಎಂದು ಬರೆದು ಯುವಕನೊಬ್ಬ ಸಾವಿನ ಹಾದಿ ಹಿಡಿದಿರುವ ಆತಂಕಕಾರಿ ಘಟನೆ ಛತ್ತೀಸ್​ಗಢದ ಬಲೋದ್​ ಜಿಲ್ಲೆಯ ಪರಾಸ್​ ಏರಿಯಾದಲ್ಲಿ ನಡೆದಿದೆ.
ಯುವಕನದ್ದು ಒನ್​ ಸೈಡ್​ ಲವ್​ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಕೋಣೆಯ ಗೋಡೆಯ ಮೇಲೆ ಈ ನನ್ನ ಸಾವು ನಿನ್ನ ಮದುವೆಗೆ ನಾನು ಕೊಡುತ್ತಿರುವ ಉಡುಗೊರೆ ಎಂದು ಬರೆದಿದ್ದಾನೆ. ಇದಲ್ಲದೆ, ಸಾಯುವ ಮುನ್ನ ವಿಡಿಯೋ ಮಾಡಿ ಅದನ್ನು ವಾಟ್ಸ್​ಆ್ಯಪ್​​ ಸ್ಟೇಟಸ್​ ಹಾಕಿ ಸಾವಿನ ಹಾದಿ ಹಿಡಿದಿದ್ದಾನೆ.
ಮೃತ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಆ ಪ್ರೀತಿ ಒನ್​ ಸೈಡ್​ ಆಗಿತ್ತು. ಕೆಲವು ದಿನಗಳಿಂದ ಯುವತಿಯ ಮದುವೆಗೆ ಸಿದ್ಧತೆ ನಡೆಯುತ್ತಿತ್ತು. ಈ ವಿಚಾರವನ್ನು ತಿಳಿದ ಯುವಕ ಖಿನ್ನತೆಗೆ ಜಾರಿದ್ದ. ಇದೇ ನೋವಿನಲ್ಲಿ ತನ್ನ ಕೊಠಡಿಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗು ಮುನ್ನ ಈ ನನ್ನ ಸಾವು ನಿಮ್ಮ ಮದುವೆಗೆ ನನ್ನ ಉಡುಗೊರೆ. ಐ ಲವ್​ ಯೂ ಎಂದು ಕೋಣೆಯ ಗೋಡೆಯ ಮೇಲೆ ಇದ್ದಿಲಿನಿಂದ ಬರೆದಿದ್ದಾನೆ. ಅಲ್ಲದೆ, ಕುತ್ತಿಗೆಗೆ ಹಗ್ಗ ಹಾಕಿಕೊಳ್ಳುವುದನ್ನು ವಿಡಿಯೋ ಮಾಡಿ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಶೇರ್​ ಮಾಡಿ ಪ್ರಾಣ ಬಿಟ್ಟಿದ್ದಾನೆಂದು ಬಲೋದ್​ ಡಿಎಸ್​ಪಿ ಪ್ರತೀಕ್​ ಚತುರ್ವೇದಿ ಅವರು ತಿಳಿಸಿದ್ದಾರೆ.
ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಶೇರ್​ ಮಾಡಿರುವ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರತೀಕ್​ ಚತುರ್ವೇದಿ ಮಾಹಿತಿ ನೀಡಿದರು.(ಏಜೆನ್ಸೀಸ್​)
ಮದ್ಯದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಮಹಿಳೆ! ವಿಡಿಯೋ ವೈರಲ್​

ಹಿಂಬದಿ ಸೀಟಿನಲ್ಲಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ: ವಿಮಾನದಿಂದ ಇಳಿಯುತ್ತಿದ್ದಂತೆ ಕಾದಿತ್ತು ಶಾಕ್​!

ಬಸ್ಸಿನೊಳಗೆ ಕುಸಿದು ಬಿದ್ದ ಯುವಕನಿಗೆ ಪುನರ್ಜನ್ಮ ನೀಡಿದ ನರ್ಸ್​ಗೆ ಮೆಚ್ಚುಗೆಯ ಮಹಾಪೂರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 13 =
Remember me
