ಲಖನೌ:ಕರೊನಾ ಪ್ರಕರಣಗಳ ಏರಿಕೆಯಿಂದ ದೇಶದಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ. ಈ ಮಧ್ಯೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಖಾಸಗಿ ಆಸ್ಪತ್ರೆಯಿಂದ ಆಕ್ಸಿಜನ್​ ಸಿಲಿಂಡರ್​ ತೆಗೆದುಕೊಂಡು ಹೋಗದಂತೆ ವ್ಯಕ್ತಿಯೊಬ್ಬ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ನನ್ನ ತಾಯಿ ಸತ್ತು ಹೋಗುತ್ತಾಳೆ. ದಯವಿಟ್ಟು ಆಕ್ಸಿಜನ್​ ಸಿಲಿಂಡರ್​ ತೆಗೆದುಕೊಂಡು ಹೋಗಬೇಡಿ. ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇನೆಂದು ಪಿಪಿಇ ಕಿಟ್​ ಧರಿಸಿದ ವ್ಯಕ್ತಿ ಆಗ್ರಾ ಆಸ್ಪತ್ರೆಯ ಮುಂದೆ ಪೊಲೀಸರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ನನ್​ ತಾಯಿ ಸತ್ತೋಗ್ತಾಳೆ ಆಕ್ಸಿಜನ್​ ಸಿಲಿಂಡರ್​ ಕೊಂಡೊಯ್ಯಬೇಡಿ ಸರ್​! ಕಾಲಿಗೆ ಬಿದ್ರೂ ಕರಗಲಿಲ್ಲ ಪೊಲೀಸರ ಮನಸ್ಸು#Mother#Death#Agra#UPPolice#Oxygencylinder#Coronaviruspic.twitter.com/nuWtZrVhbg
— Vijayavani (@VVani4U)April 29, 2021

ಈ ವಿಡಿಯೋವನ್ನು ಸೋಮವಾರ ಸಂಜೆ ಆಗ್ರಾ ಆಸ್ಪತ್ರೆ ಮುಂದೆ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯ ತಾಯಿ ಕೋವಿಡ್​ನಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಗೆ ಬಂದ ಪೊಲೀಸರು ಸಿಲಿಂಡರ್​ ತೆಗೆದುಕೊಂಡು ಆಂಬ್ಯುಲೆನ್ಸ್​ಗೆ ತುಂಬಿಕೊಂಡು ಹೋಗಿದ್ದಾರೆನ್ನಲಾಗಿದೆ.
ನನ್ನ ತಾಯಿಯನ್ನು ಮರಳಿ ಕರೆತರುತ್ತೇನೆಂದು ನನ್ನ ಕುಟುಂಬಕ್ಕೆ ಭರವಸೆ ನೀಡಿ ನಾನು ಈ ಆಸ್ಪತ್ರಗೆ ಬಂದಿದ್ದೇನೆ. ಈಗ ನೀವು ಸಿಲಿಂಡರ್​ ತೆಗೆದುಕೊಂಡು ಹೋದರೆ ನಾನು ಎಲ್ಲಿಂದ ಸಿಲಿಂಡರ್​ ವ್ಯವಸ್ಥೆ ಮಾಡಲಿ? ಪ್ಲೀಸ್​ ಸರ್​ ತೆಗೆದುಕೊಂಡು ಹೋಗಬೇಡಿ ಎಂದು ಕಣ್ಣೀರಿಡುತ್ತಾ ಪೊಲೀಸರ ಕಾಲಿಗೆ ಬಿದ್ದ ವ್ಯಕ್ತಿ ಕೇಳಿಕೊಂಡಿದ್ದಾನೆ,
ಎಷ್ಟೇ ಬೇಡಿಕೊಂಡರು ಪೊಲೀಸರ ಮನಸ್ಸು ಮಾತ್ರ ಕರಗಲೇ ಇಲ್ಲ. ಸಿಲಿಂಡರ್​ ತುಂಬಿಕೊಂಡು ಹೊರಟೇ ಹೋದರು. ಇನ್ನು ತಮ್ಮ ಮೇಲಿನ ಆಪಾದನೆಯನ್ನು ಆಗ್ರಾ ಪೊಲೀಸರು ತಳ್ಳಿಹಾಕಿದ್ದಾರೆ. ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಖಾಲಿ ಸಿಲಿಂಡರ್​ ಎಂದು ಆಗ್ರಾ ಎಸ್​ಪಿ ಸ್ಪಷ್ಟನೆ ನೀಡಿದ್ದಾರೆ. ಆದರೂ, ಜಾಲತಾಣದಲ್ಲಿ ಪೊಲೀಸರ ವರ್ತನೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.(ಏಜೆನ್ಸೀಸ್​)
ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ

4000 ಮಹಿಳೆಯರ ಜತೆ​ ಸೆಕ್ಸ್​, 77ನೇ ವಯಸ್ಸಲ್ಲಿ ಮರು ಮದ್ವೆ: ಸುಂದರಿಯಿಂದಲೇ ಆಗರ್ಭ ಶ್ರೀಮಂತನ ದುರಂತ ಅಂತ್ಯ!

ಧೈರ್ಯಂ ಸರ್ವತ್ರ ಸಾಧನಂ… ಕರೊನಾದ ಸಾವಿನ ಬಾಯಿಗೆ ಹೋಗಿ ಜಯಿಸಿ ಬಂದ ಶತಾಯುಷಿ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 12 =
Remember me
