ಹೈದರಾಬಾದ್​:ನನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಸರ್​… ನನ್ನ ಪತಿಯೂ ಕಾಣಿಸುತ್ತಿಲ್ಲ ಹುಡುಕಿಕೊಡಿ ಸರ್​… ಎಂದು ಏಕಕಾಲದಲ್ಲಿ ಪುರುಷ ಮತ್ತು ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ಹೈದರಾಬಾದ್​ನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರೇ ಬೆರಗಾಗುವಂತಹ ಪ್ರಸಂಗ ಜರುಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಬಿ. ನಾರಾಯಣದಾಸ್​ ಮತ್ತು ಮೋನಿಕಾ ದಾಸ್ ಪಶ್ಚಿಮ ಬಂಗಾಳದ​ ಕೊಲ್ಕತ ಮೂಲದ ದಂಪತಿ. ಜೀವನ ನಿರ್ವಹಣೆಗಾಗಿ ಹೈದರಾಬಾದ್​ಗೆ ಬಂದು ವೆಂಕಟಗಿರಿ ಹತ್ತಿರದ ಯೂಸುಫ್​ಗುಡದಲ್ಲಿ ನೆಲೆಸಿದ್ದರು. ನಾರಾಯಣದಾಸ್​ ಪ್ಲಂಬರ್​ ಆಗಿ ಕೆಲಸ ಮಾಡುತ್ತಿದ್ದ.
ಹೀಗಿರುವಾಗಿ ಪತ್ನಿ ಮೋನಿಕಾ, ಎಂಡಿ ಆಸಿಫ್​ ಎಂಬಾತನ ಜತೆಯಲ್ಲಿ ಕಳೆದು ಒಂದು ವರ್ಷದಿಂದ ನಿರಂತರವಾಗಿ ಫೋನ್​ನಲ್ಲಿ ಮಾತನಾಡುವುದನ್ನು ಗಮನಿಸಿ ಎಚ್ಚರಿಕೆ ನೀಡಿದ್ದ. ಪತಿ-ಪತ್ನಿಯರ ನಡುವೆ ಜಗಳವೂ ನಡೆದು, ಹಿರಿಯರ ಸಮ್ಮುಖದಲ್ಲಿ ಸಂಧಾನವು ಆಗಿತ್ತು.
ಇದೇ ಸಂದರ್ಭದಲ್ಲಿ ಮೋನಿಕಾ ತನ್ನಿಬ್ಬರು ಮಕ್ಕಳೊಂದಿಗೆ ಇದೇ ತಿಂಗಳ 24ರಂದು ಗಂಡನಿಗೂ ಹೇಳದೆ ಕೋಲ್ಕತಗೆ ತೆರಳುತ್ತಾಳೆ. ಇತ್ತ ಪತ್ನಿ ಕಾಣೆಯಾಗಿರುವುದನ್ನು ನೋಡಿ ನಾರಾಯಣದಾಸ್​ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಭಾನುವಾರು ದೂರು ದಾಖಲಿಸುತ್ತಾನೆ. ವೆಂಕಟಗಿರಿ ನಿವಾಸಿ ಆಶಿಪ್, ಪತ್ನಿ ಜತ ಹೋಗಿರುವುದು ತಿಳಿದೇ ನಾರಾಯಣದಾಸ್​ ದೂರು ನೀಡಿರುತ್ತಾನೆ.
ಇದೇ ಸಮಯದಲ್ಲಿ ಜುಬಿಲಿ ಹಿಲ್ಸ್​ ಠಾಣೆಗೆ ಬರುವ ಆಸಿಫ್​ ಪತ್ನಿ, ನನ್ನ ಗಂಡ ಕಾಣಿಸುತ್ತಿಲ್ಲ ಎಂದು ದೂರು ನೀಡುತ್ತಾಳೆ. ಎರಡು ಪ್ರಕರಣಗಳನ್ನು ನೋಡುವ ಪೊಲೀಸರಿಗೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.(ಏಜೆನ್ಸೀಸ್​)
ಮಗು ಜತೆ 18ನೇ ವಯಸ್ಸಲ್ಲೆ ಬೀದಿಪಾಲಾದ ಯುವತಿ: ಗಂಡ, ತವರು ಮನೆ ಕೈಕೊಟ್ರೂ ಪುಟಿದೆದ್ದವಳ ಕತೆ ರೋಚಕ!

ಆ. 19ಕ್ಕೆ ರೋಣ ಬರ್ತಾನಾ?; ಡಬ್ಬಿಂಗ್ ಶುರು ಮಾಡಿದ ಸುದೀಪ್

ಸ್ಟಾರ್ಟ್ ಕ್ಯಾಮರಾ ಆ್ಯಕ್ಷನ್; ಜುಲೈನಲ್ಲಿ ಶೂಟಿಂಗ್ ಪರ್ವ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 19 =
Remember me
