ಕೊಚ್ಚಿ:ಖ್ಯಾತ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜ್ಯನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್​ ಕುಮಾರ್​ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೊಲೆಗೆ ಸಂಚು ರೂಪಿಸಿದ ಆರೋಪವು ದಿಲೀಪ್​ ಮೇಲಿದೆ.
ಇದೀಗ ಮತ್ತೊಂದು ಬಹಳ ಗಂಭೀರವಾದ ವಿಷಯ ಚರ್ಚೆಯಾಗುತ್ತಿದೆ. ಆರೋಪಿ ದಿಲೀಪ್ ಅವರ ಮೊಬೈಲ್​ ಫೋನ್​ ಸರ್ವೀಸ್​ ಮಾಡಿದ ಯುವಕ ನಿಗೂಢವಾಗಿ ಸಾವಿಗೀಡಾಗಿರುವುದು ಭಾರೀ ಅನುಮಾನ ಹುಟ್ಟುಹಾಕಿದೆ. ಈ ಸಂಬಂಧ ಮೃತ ಯುವಕನ ಸಂಬಂಧಿಕರು ಅಂಗಮಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭವಾಗಿದೆ.
ತ್ರಿಸ್ಸೂರ್​ ಮೂಲದ ಸಲೇಶ್​ 2020ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಲೀಶ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತ ಸಲೇಶ್​ ಕೊಚ್ಚಿಯಲ್ಲಿ ಮೊಬೈಲ್​ ಸರ್ವೀಸ್​​ ಶಾಪ್​ ನಡೆಸುತ್ತಿದ್ದ. ನಟ ದಿಲೀಪ್​ ಫೋನ್​ ಅನ್ನು ಕೂಡ ಸಲೇಶ್​ ಸರ್ವೀಸ್​ ಮಾಡಿದ್ದ. ಸಾಯುವ ಮುನ್ನ ಸಲೇಶ್​, ದಿಲೀಪ್​ ಅವರನ್ನು ಭೇಟಿ ಮಾಡಿದ್ದ ಎಂದು ತಿಳಿದುಬಂದಿದೆ.
ಸಲೇಶ್​ ಅವರ ಸಹೋದರ ದೂರು ದಾಖಲಿಸಿದ್ದು, ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಸಲೇಶ್​ಗೆ ದಿಲೀಪ್​ ಜತೆ ಆಪ್ತತೆ ಇತ್ತಂತೆ. “ವೆಲ್​ಕಮ್​ ಟು ಸೆಂಟ್ರಲ್​ ಜೈಲ್​” ಸೇರಿದಂತೆ ಅನೇಕ ಚಿತ್ರಗಳಲ್ಲಿಯೂ ಸಲೇಶ್​ ನಟಿಸಿದ್ದಾರೆ.
ಸದ್ಯ ಸಲೇಶ್​ ಸಾವಿನ ಬಗ್ಗೆ ಆತನ ಕುಟುಂಬಸ್ಥರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಬಹುಶಃ ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಈಗಾಗಲೇ ನಟಿಯ ಮೇಲಿನ ದೌರ್ಜನ್ಯ ಮತ್ತು ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಆರೋಪದ ಜತೆಗೆ ಇದೀಗ ಸಲೇಶ್​ ಸಾವಿನ ಅನುಮಾನವೂ ಕೂಡ ದಿಲೀಪ್​ಗೆ ಸುತ್ತುಕೊಂಡಿದೆ.
ತನಿಖಾಧಿಕಾರಿಗಳಿಗೆ ಹಳೆಯ ಫೋನ್​ ನೀಡಲು ದಿಲೀಪ್​ ನಿರಾಕರಿಸಿದ್ದರು. ಯಾವಾಗ ಹೈಕೋರ್ಟ್​ ಚಾಟಿ ಬೀಸಿತು. ತಮ್ಮ ಫೋನ್​ಗಳನ್ನು ದಿಲೀಪ್​ ಸೇರಿದಂತೆ ಇತರೆ ಆರೋಪಿಗಳು ಕೋರ್ಟ್​ಗೆ ಹಸ್ತಾಂತರ ಮಾಡಿದ್ದಾರೆ. ಇನ್ನೊಂದೆಡೆ ದಿಲೀಪ್​ ಬಂಧನದ ಭೀತಿಯಲ್ಲಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಕೋರ್ಟ್​ ನಡೆಸಲಿದೆ. ದಿಲೀಪ್​ ಅವರ ಹಳೆಯ ಫೋನ್​ನಲ್ಲಿ ಲೈಂಗಿಕ ದೌರ್ಜನ್ಯ ಮತ್ತು ತನಿಖಾಧಿಕಾರಿಗಳ ಮೇಲಿನ ಕೊಲೆಗೆ ಸಂಚು ರೂಪಿಸಿದ್ದರ ಕುರಿತು ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗುತ್ತದೆ. ಸದ್ಯ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಖ್ಯಾತ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್​ಗೆ ಶಾಕ್​ ಕೊಟ್ಟ ಕೇರಳ ಹೈಕೋರ್ಟ್​

ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೋ ಕುರಿತು ಸ್ಫೋಟಕ ಹೇಳಿಕೆ ಕೊಟ್ಟ ನಟ ದಿಲೀಪ್​!

ಬ್ಯೂಟಿ ಪಾರ್ಲರ್​ನಲ್ಲಿ ಕೆಲ್ಸ ಸಿಗುತ್ತೆ ಅಂತಾ ಆಸೆಯಿಂದ ಬಂದ ನಾಲ್ವರು ಹೆಣ್ಣುಮಕ್ಕಳಿಗೆ ಕಾದಿತ್ತು ಶಾಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × five =
Remember me
