ಕೊಚ್ಚಿ:ಕೇರಳದ ಮಾಡೆಲ್​ಗಳಿಬ್ಬರ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ನಿಗೂಢತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ. ಅಪಘಾತಕ್ಕೂ ಮುನ್ನ ಹೋಟೆಲ್​ನಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿಯ ಡಿಜಿಟಲ್​ ವಿಡಿಯೋ ರೆಕಾರ್ಡರ್​ (ಡಿವಿಆರ್​) ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಇದರ ಬೆನ್ನಲ್ಲೇ ಅಪಘಾತಕ್ಕೂ ಮುನ್ನ ಮಾಡೆಲ್​ಗಳಿದ್ದ ಕಾರನ್ನು ಆಡಿ ಕಾರೊಂದು ಅಡ್ಡ ಹಾಕಿತ್ತು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಮಾಜಿ ಮಿಸ್​ ಕೇರಳ ಅನ್ಸಿ ಕಬೀರ್​ ಹಾಗೂ ರನ್ನರ್​ ಅಪ್​ ಅಂಜನಾ ಶಾಜನ್​ ಸಾವು ಇದೀಗ ಕೇರಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ತಮ್ಮ ಸ್ನೇಹಿತರೊಂದಿಗೆ ಪ್ರಯಾಣ ಮಾಡುತ್ತಿದ್ದ ಕೆಎಲ್​ 40 ಜೆ 3333 ನಂಬರಿನ ಕಾರನ್ನು ಆಡಿ ಕಾಡು ಚೇಸ್​ ಮಾಡಿರುವುದು ಮೊನ್ನೆಯಷ್ಟೇ ಸಿಸಿಟಿವಿ ಮೂಲಕ ಕೇರಳ ಪೊಲೀಸರ ಗಮನಕ್ಕೆ ಬಂದಿತ್ತು. ಇದೀಗ ಆಡಿ ಕಾರಿನಲ್ಲಿದ್ದವರು ಮಾಡೆಲ್​ಗಳಿದ್ದ ಕಾರನ್ನು ಅಡ್ಡ ಹಾಕಿರುವ ಬಗ್ಗೆ ಮಾಹಿತಿ ದೊರೆತಿದೆ. ಹೀಗಾಗಿ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗಿ ಸಾಗುತ್ತಿದೆ.
ಡಿಜೆ ಪಾರ್ಟಿ ಮುಗಿದ ಬಳಿಕ ಫೋರ್ಟ್​ ಕೊಚ್ಚಿಯಲ್ಲಿರುವ ನಂ. 18 ಹೋಟೆಲ್​ನಿಂದ ಮಾಡೆಲ್​ಗಳ ಕಾರನ್ನು ಆಡಿ ಕಾರು ಹಿಂಬಾಲಿಸಿದೆ. ಈ ಸಂಬಂಧ ಪೊಲೀಸರು ಆಡಿ ಕಾರು ಚಾಲಕ ಸೈಜುಗೆ ಸಮನ್ಸ್​ ನೀಡಿದ್ದು, ಮಾಡೆಲ್​ಗಳಿದ್ದ ಕಾರು ಚಾಲಕ ಅಬ್ದುಲ್​ ರೆಹಮಾನ್​ ನೀಡಿದ ದೂರಿನ ಆಧಾರದ ಮೇಲೆ ಸೈಜು ಎಂಬಾತನನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಇನ್ನು ಕಾರು ಅಪಘಾತದ ಬಳಿಕ ಆಡಿ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಹೊರಗಡೆ ಇಳಿದು ಬಂದು ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿರುವುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲದೆ, ಆ ವ್ಯಕ್ತಿಯ ಫ್ರೆಂಡ್ಸ್​ ಬೇರೆ ವಾಹನದಲ್ಲಿ ಅಪಘಾತದ ಸ್ಥಳಕ್ಕೆ ಬಂದು ದೂರದಲ್ಲೇ ನಿಂತು ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಿ ಅಲ್ಲಿಂದ ಹೊರಟಿದ್ದರ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರೆತಿದೆ. ಇದಿಷ್ಟು ಘಟನೆಯಲ್ಲಿ ನಂ. 18 ಹೋಟೆಲ್​ ಮಾಲೀಕ ರಾಯ್​ ಪಾತ್ರವಿರಬಹುದಾ? ಸ್ಥಳ ಪರಿಶೀಲಿಸಿದ ಗ್ಯಾಂಗ್​ಗೂ ರಾಯ್​ಗೂ ಸಂಬಂಧ ಇರಬಹುದಾ ಎಂಬ ಸಂಶಯ ಪೊಲೀಸರಿಗೆ ಮೂಡಿದೆ.
ಇನ್ನು ಆಡಿ ಕಾರಿನಲ್ಲಿದ್ದ ಪ್ರಯಾಣಿಕರು ಕೂಡ ಮದ್ಯದ ಅಮಲಿನಲ್ಲಿದ್ದರು ಮತ್ತು ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ತಿಳಿಯಲು ಆಸ್ಪತ್ರೆಗೂ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಅಪಘಾತಕ್ಕೂ ಮುನ್ನ ಮಾಡೆಲ್​ಗಳಿದ್ದ ಕಾರನ್ನು ಆಡಿ ಕಾರು ಅಡ್ಡಗಟ್ಟಿತ್ತು. ಮರಳಿ ಹೋಟೆಲ್​ ಬರುವಂತೆ ಕಾರಿನಲ್ಲಿದ್ದವರು ಕೇಳಿದ್ದರು ಎಂದು ವರದಿಯಾಗಿದೆ.
ಡಿಜೆ ಪಾರ್ಟಿಯು ಪೋರ್ಟ್​ ಕೊಚ್ಚಿಯ ಹೋಟೆಲ್​ ನಂಬರ್​ 18 ಅಲ್ಲಿ ನಡೆದಿತ್ತು. ಪಾರ್ಟಿಯಲ್ಲಿ ಮಿಸ್​ ಕೇರಳ ವಿಜೇತರಾಗಿದ್ದ ಮಾಡೆಲ್​ಗಳಿಬ್ಬರು ಕೂಡ ಭಾಗವಹಿಸಿದ್ದರು. ಪಾರ್ಟಿಯ ನಂತರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೋಟೆಲ್​ ಮೇಲೆ ದಾಳಿ ಮಾಡಿದಾಗ ಸಿಸಿಟಿವಿ ವಿಡಿಯೋ ಲಭ್ಯವಾಗಿರಲಿಲ್ಲ. ಸಿಸಿಟಿವಿ ದೃಶ್ಯಗಳಿರುವ ಡಿವಿಆರ್​ ಅನ್ನು ಹೋಟೆಲ್​ ಮಾಲೀಕರು ತೆಗೆದುಕೊಂಡು ಹೋಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಹೋಟೆಲ್​ ಕೆಲಸಗಾರರ ವಿಚಾರಣೆ ವೇಳೆ ಇದು ಬಯಲಿಗೆ ಬಂದಿದೆ.
ಅಪಘಾತ ಸ್ಥಳದ ಬಳಿ ವಶಕ್ಕೆ ಪಡೆದಿರುವ ಸಿಸಿಟಿವಿ ಫುಟೇಜ್​ನಲ್ಲಿ ಮೃತ ಅನ್ಸಿ ಕಬೀರ್​ ಮತ್ತು ಅಂಜನಾ ಶಾಜನ್ ಸವಾರಿ ಮಾಡಿದ್ದ ಕಾರಿನ ಹಿಂದೆ ಮತ್ತೊಂದು ಕಾರು ಚೇಸ್​ ಮಾಡಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಬಾರ್​ ಮತ್ತು ಇತರೆ ಏರಿಯಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ಆದರೆ, ಹೋಟೆಲ್​ ಮಾಲೀಕನ ಮೇಲೆ ಅನುಮಾನ ದಟ್ಟವಾಗಿದೆ. ಏಕೆಂದರೆ, ಡಿಜೆ ಪಾರ್ಟಿಯ ಸಿಸಿಟಿವಿ ಡಿವಿಆರ್​ ಅನ್ನು ಮಾಲೀಕ ಮುಚ್ಚಿಟ್ಟಿದ್ದಾನೆ. ಅದರಲ್ಲೂ ಪಾರ್ಟಿ ಹಾಲ್​ ಮತ್ತು ಪಾರ್ಕಿಂಗ್​ ಹಾಲ್​ ವಿಡಿಯೋ ತುಣಕಗಳೇ ಪ್ರಮುಖವಾಗಿ ಕಾಣೆಯಾಗಿವೆ. ಪಾರ್ಟಿ ಮುಗಿದ ತಕ್ಷಣವೇ ಅನ್ಸಿ ಮತ್ತು ಸ್ನೇಹಿತರು ಅಲ್ಲಿಂದ ಬೇಗ ಹೊರಟರು. ಇದುವರೆಗೂ ಎರಡು ಬಾರಿ ಹೋಟೆಲ್​ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆಗೂ ಡಿವಿಆರ್​ ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣದಲ್ಲಿ ಹೋಟೆಲ್​ ಮಾಲೀಕನ ಪಾತ್ರ ಇರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಘಟನೆ ಹಿನ್ನೆಲೆಪೋರ್ಟ್​ ಕೊಚ್ಚಿ ಪೊಲೀಸ್​ ಠಾಣೆ ಎದುರೇ ಹೋಟೆಲ್​ ಇದೆ. ಪಾರ್ಟಿ ಮುಗಿಸಿಕೊಂಡು ಅನ್ಸಿ ಕಬೀರ್​, ಅಂಜನಾ ಶಾಜನ್​, ಆಶಿಕ್​ ಮತ್ತು ಅಬ್ದುಲ್​ ರೆಹಮಾನ್ ಅಕ್ಟೋಬರ್​ 31ರಂದು​ ಮನೆಗೆ ಬರುತ್ತಿದ್ದರು. ಈ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಸ್​ ಕೇರಳ ವಿಜೇತರಾದ ಅನ್ಸಿ ಕಬೀರ್​ ಮತ್ತು ಅಂಜನಾ ಶಾಜನ್​ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಶಿಕ್​ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್​ ರೆಹಮಾನ್​ನನ್ನು ಮೊನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ ರೆಹಮಾನ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಮಾಡೆಲ್​ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್​ನೊಂದಿಗೆ​ ಹೋಟೆಲ್​ ಮಾಲೀಕ ನಾಪತ್ತೆ

ಕೇರಳ ಮಾಡೆಲ್​ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!

23 ವರ್ಷಕ್ಕೆ ಈಕೆ ಮಾಡುತ್ತಿರುವ ಅನಾಚಾರ ಕೇಳಿದ್ರೆ ದಂಗಾಗ್ತೀರಾ! ಇದು ಖತರ್ನಾಕ್​​ ಲೇಡಿಯ ಕರಾಳ ಮುಖ

ಆಂಧ್ರ ಹುಡುಗಿ-ಐರ್ಲೆಂಡ್​ ಹುಡುಗ: ದೇಶ, ಭಾಷೆ, ಧರ್ಮದ ಗಡಿ ಮೀರಿದ ವಿಶೇಷ ಪ್ರೇಮ ಕತೆ ಇದು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + sixteen =
Remember me
