ಹೈದರಾಬಾದ್​:ಸರ್ಕಾರದಿಂದ ಭದ್ರತಾ ಪಡೆದವರನ್ನು ಹೊರತುಪಡಿಸಿ ಯಾರೊಬ್ಬರು ಕಾರಿನ ಗಾಜಿನ ಮೇಲೆ ಕಪ್ಪು ಸ್ಕ್ರೀನ್​ ಅಳವಡಿಸಿರಬಾರದು ಎಂದು ಸುಪ್ರೀಂಕೋರ್ಟ್​ ಇತ್ತೀಚೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಹೈದರಾಬಾದ್​ ಸಂಚಾರಿ ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ. ವಿವಿಐಪಿ, ಸೆಲೆಬ್ರಿಟಿಗಳೆನ್ನದೆ ಕಪ್ಪು ಸ್ಕ್ರೀನ್​ ಅಳವಡಿಸಿದವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.
ಪೊಲೀಸರ ತಪಾಸಣೆ ವೇಳೆ ಈಗಾಗಲೇ ಅಲ್ಲು ಅರ್ಜುನ್​, ಕಲ್ಯಾಣ್​ ರಾಮ್​, ಮಂಚು ಮನೋಜ್​ ಹಾಗೂ ತ್ರಿವಿಕ್ರಮ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ದಂಡದ ಬಿಸಿ ತಟ್ಟಿದೆ. ಅಲ್ಲದೆ, ಕಪ್ಪು ಸ್ಕ್ರೀನ್​ಗಳನ್ನು ಕಳಚಿದ್ದಾರೆ. ಇದೀಗ ಆ ಸಾಲಿಗೆ ಸಮಂತಾ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಸೇರಿಕೊಂಡಿದ್ದಾರೆ.
ಇತ್ತೀಚೆಗೆ ಪೊಲೀಸ್​ ತಪಾಸಣೆ ವೇಳೆ ನಾಗಚೈತನ್ಯ ಅವರು ಕಾರು ಸಿಕ್ಕಿಬಿದ್ದಿತು. ಈ ವೇಳೆ ಕಾರಿನ ಗಾಜಿನಲ್ಲಿದ್ದ ಕಪ್ಪು ಸ್ಕ್ರೀನ್​ ಅನ್ನು ತೆಗೆಸಿದ ಪೊಲೀಸರು 700 ರೂಪಾಯಿ ದಂಡವನ್ನು ವಿಧಿಸಿದರು. ಈ ಸಂದರ್ಭದಲ್ಲಿ ನಾಗಚೈತನ್ಯ ಕಾರಿನಲ್ಲೇ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸರ ಕರ್ತವ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ.(ಏಜೆನ್ಸೀಸ್​)
ಕೆಲ್ಸ ಸಿಗಲಿಲ್ಲ ಅಂತಾ ಸೀರೆ ಉಟ್ಕೊಂಡು ಭಿಕ್ಷೆ ಬೇಡ್ತಿದ್ದ ಯುವಕ: ಆತನ ಮಾತು ಕೇಳಿ ಪೊಲೀಸರೇ ಶಾಕ್​!

ಮೈಸೂರು-ನಂ.ಗೂಡು ಹೆದ್ದಾರೀಲಿ ಹಾಡಹಗಲೇ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳಿಂದ ದಾಳಿ: ಬೆಚ್ಚಿಬಿದ್ದ ಸ್ಥಳೀಯರು

4ನೇ ಅಲೆ ತಡೆಗೆ ಬಿಗಿಬಲೆ: ದೇಶದ ಹಲವೆಡೆ ಸೋಂಕು ಹೆಚ್ಚಳ; ಸರ್ಕಾರ ಹೈ-ಅಲರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
