ನಲ್ಗೊಂಡ:ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಬೇರೆಯಾಗುತ್ತೇವೆ ಎಂಬ ಭಯದಿಂದ ವಿಷ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಮಟ್ಟಿಪಲ್ಲಿ ಕೊಂಡಾಲು (22) ಹಾಗೂ ಸಂಧ್ಯಾ (20) ಮೃತ ಪ್ರೇಮಿಗಳು. ಇಬ್ಬರು ಕೂಡ ಒಂದೇ ಗ್ರಾಮದವರು. ಕೊಂಡಾಲು, ಹಲಿಯಾ ಎಂಬಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪಿಯುಸಿ ಮುಗಿಸಿದ್ದ ಸಂಧ್ಯಾ ಮನೆಯಲ್ಲಿ ಉಳಿದುಕೊಂಡಿದ್ದಳು. ಈಕೆಗೆ ಇದೇ ತಿಂಗಳ 22ರಂದು ಮಾವನ ಮಗನ ಜತೆ ಮದುವೆ ನಿಶ್ಚಯವಾಗಿತ್ತು. ಮುಂದಿನ ತಿಂಗಳು 11ರಂದು ಮದುವೆ ಸಮಾರಂಭ ನಡೆಯಬೇಕಿತ್ತು.
ಅ. 22ರಂದು ಯಾರು ಇಲ್ಲದ ಸಮಯದಲ್ಲಿ ಪ್ರಿಯಕರನ ಮನೆಗೆ ಬಂದ ಸಂಧ್ಯಾ ಮೊದಲು ಇಬ್ಬರು ಒಟ್ಟಿಗೆ ನೂಡಲ್ಸ್​ ಮಾಡಿಕೊಂಡು ತಿಂದಿದ್ದಾರೆ. ಬಳಿಕ ಇಬ್ಬರು ಮನೆಯಲ್ಲೇ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾರೆ. ಆದರೆ, ಫ್ಯಾನ್​ ಸರಿಯಿಲ್ಲದ ಕಾರಣ ಇಬ್ಬರು ಕ್ರಿಮಿನಾಶಕವನ್ನು ಸೇವಿಸಿದ್ದಾರೆ. ಇದಾದ ಕೆಲ ಸಮಯದ ಬಳಿಕ ಸಂಧ್ಯಾ ತನ್ನ ಮನೆಗೆ ತೆರಳಿದ್ದಾಳೆ. ಮನೆಗೆ ಹೋದಾಕೆ ವಾಂತಿ ಮಾಡಿಕೊಳ್ಳುವುದನ್ನು ತಾಯಿ ಗಮನಿಸಿದ್ದಾರೆ. ಆಕೆ ವಿಷ ಸೇವಿಸಿದ್ದಾಳೆಂದು ಗೊತ್ತಾದ ಕೂಡಲೇ ಆಕೆಯನ್ನು ನಲ್ಗೊಂಡ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇತ್ತ ಕೊಂಡಾಲು ಕೂಡ ಪ್ರಜ್ಞೆಯಿಲ್ಲದೆ ಬಿದ್ದಿದ್ದನ್ನು ನೋಡಿ ಆತ ವಿಷ ಸೇವಿಸಿದ್ದಾನೆಂದು ತಿಳಿದು ಆತನನ್ನು ಅದೇ ಆಸ್ಪತ್ರೆಗೆ ದಾಖಲಿಸುತ್ತಾರೆ. ಇಬ್ಬರು ಕೂಡ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಡುತ್ತಾರೆ. ಇಬ್ಬರ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಇನ್ನು ಸಂಧ್ಯಾ ಅವರ ಸಹೋದರ ವರ್ಷಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗ ಮೃತಪಟ್ಟಿದ್ದನ್ನೇ ಅರಗಿಸಿಕೊಳ್ಳಲಾಗದ ಕುಟುಂಬಕ್ಕೆ ಇದೀಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಬೆಳೆದ ಮಕ್ಕಳಿಬ್ಬರನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.(ಏಜೆನ್ಸೀಸ್​)
ಫೇಸ್​ಬುಕ್​ ನೋಡ್ತಿದ್ದ ಬಾಹುಬಲಿ ಸಿನಿಮಾ ನಟಿಗೆ ಬಿಗ್​ ಶಾಕ್​! ಲೈಂಗಿಕತೆಯ ಭರವಸೆ ನೆಪದಲ್ಲಿ ನೀಚ ಕೃತ್ಯ

11 ಆಟಗಾರರಿರುವ ತಂಡದಲ್ಲಿ ಮುಸ್ಲಿಂನನ್ನೇ ಟಾರ್ಗೆಟ್​ ಮಾಡುತ್ತಿರುವುದೇಕೆ? ಅಸಾದುದ್ದೀನ್​ ಓವೈಸಿ ಆಕ್ರೋಶ

ಇನ್​ಸ್ಟಾಗ್ರಾಂನಲ್ಲಿ ನಟಿ ಕಾಜಲ್ ಅಗರ್​ವಾಲ್​ ಹವಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
