ಕೊಯಿಕ್ಕೋಡ್​:ದೇಶದ ಅತಿ ಕಿರಿಯ ಮೇಯರ್​ ಹಾಗೂ ಅತಿ ಕಿರಿಯ ಶಾಸಕರ ನಡುವೆ ಮದುವೆ ನಿಗದಿಯಾಗಿದ್ದು, ದೇಶದಲ್ಲೇ ವಿನೂತನ ಮದುವೆ ಸಂಭ್ರಮಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಲಿದೆ.
ತಿರುವನಂತಪುರದ ಮೇಯರ್​ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್​ (28) ವಿವಾಹ ಮಾಡಿಕೊಳ್ಳಲಿದ್ದಾರೆ. ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಸಚಿನ್​ ತಂದೆ ಕೆ.ಎಂ. ನಂದಕುಮಾರ್​, ಇನ್ನು ಮದುವೆ ದಿನಾಂಕ ಘೋಷಣೆಯಾಗಿಲ್ಲ. ಆದರೆ, ಎರಡು ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿವೆ. ಸಚಿನ್​ ಕೇರಳ ವಿಧಾನಸಭೆಯ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನೊಂದೆಡೆ ಆರ್ಯಾ ರಾಜೇಂದ್ರನ್ ದೇಶದ ಕಿರಿಯ ಮೇಯರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಸ್​ಎಫ್​ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್​ ದೇವ್ ಕೊಯಿಕ್ಕೋಡ್​ನ ನೆಲ್ಲಿಕೋಡ್​ ಮೂಲದವರು. ಎಸ್​ಎಫ್​ಐನ ರಾಜ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್​ ಅವರು ಕೊಯಿಕ್ಕೂಡ್​ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್​ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಮತ್ತು ಕೊಯಿಕ್ಕೋಡ್​ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.
ಆರ್ಯಾ ರಾಜೇಂದ್ರನ್​ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇಬ್ಬರ ಮದುವೆ ಫಿಕ್ಸ್​ ಆಗಿದ್ದು, ವಿನೂತನ ಮದುವೆಗೆ ಕೇರಳ ರಾಜ್ಯ ಸಾಕ್ಷಿಯಾಗಲಿದೆ.(ಏಜೆನ್ಸೀಸ್​)
ರೂಪದರ್ಶಿ ಖಂಡಿಲ್​ ಬಲೂಚ್​ ಹತ್ಯೆಗೈದ ಸಹೋದರನನ್ನು ಬಿಡುಗಡೆ ಮಾಡಿದ ಪಾಕ್ ನ್ಯಾಯಾಲಯ..!​

ಹೆಚ್ಚು ‘ಲೈಕ್ಸ್‌’ಗಾಗಿ ಜೀವ ಕಳೆದುಕೊಂಡ ನಾಲ್ವರು ಯುವಕರು! ರೈಲಿಗೆ ಸಿಲುಕಿ ದುರ್ಮರಣ

ಹೈಕೋರ್ಟ್​ ಆದೇಶ ಪಾಲಿಸದೇ ಹಿಜಾಬ್ ಧರಿಸಿಕೊಂಡೇ ಕಾಲೇಜು ಪ್ರವೇಶಿಸುತ್ತಿರುವ ವಿದ್ಯಾರ್ಥಿನಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
