ನೆಲ್ಲೂರು​:ಪ್ರೀತಿಗೆ ಯಾವುದೇ ಬೌಂಡರಿ ಇಲ್ಲ… ಪ್ರೀತಿ ಕುರುಡು…ಪ್ರೀತಿಗೆ ವಯಸ್ಸಿನ ಅಡ್ಡಿಯಿಲ್ಲ ಎನ್ನುವ ಮಾತು ಸತ್ಯವಾದರೂ ಕೂಡ ನಾಗರಿಕ ಸಮಾಜದಲ್ಲಿ ಪ್ರೇಮಿಗಳ ವಂಶ, ವಯಸ್ಸು ಮುಂತಾದವುಗಳನ್ನು ಪರಿಗಣಿಸುವುದು ಸಹಜ. ಅನೇಕರು ವಯಸ್ಸನ್ನು ಮೀರಿ ಮದುವೆ ಆಗಿ ಬದುಕು ಸಾಗಿಸಿದ ಉದಾಹರಣೆಗಳು ಇವೆ. ಹಾಗೇ ದುರಂತಕ್ಕೀಡಾದವರು ಇದ್ದಾರೆ.
ಇತ್ತೀಚಿನ ಘಟನೆಯೊಂದರಲ್ಲಿ ಆಂಧ್ರ ಪ್ರದೇಶದ ನೆಲ್ಲೂರಿನ ಲಾಡ್ಜ್​ ಒಂದರಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆಘಾತಕಾರಿ ವಿಚಾರವೆಂದರೆ, ಇಲ್ಲಿ ಹುಡುಗಿಯ ವಯಸ್ಸು 17 ಮತ್ತು ಪ್ರಿಯಕರನ ವಯಸ್ಸು 42. ಇಬ್ಬರು ನಡುವೆ ಬರೋಬ್ಬರಿ 25 ವರ್ಷ ಅಂತರವಿದ್ದು, ಈ ಪ್ರಕರಣ ಆಂಧ್ರದ ಜನರನ್ನು ಚಿಂತೆಗೀಡು ಮಾಡಿದೆ.
ಹುಡುಗಿಯ ಪ್ರಿಯಕರನ ಹೆಸರು ರಾಮಯ್ಯ ಎಂದು ಗುರುತಿಸಲಾಗಿದೆ. ಇಬ್ಬರು ನೆಲ್ಲೂರಿನ ಲಾಡ್ಜ್​ಗೆ ತೆರಳಿದ್ದಾರೆ. ಇದಾದ ಬೆನ್ನಲ್ಲೇ ಇಬ್ಬರು ವಿಷ ಸೇವಿಸುವುದು ಲಾಡ್ಜ್​ ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ನೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರು ಸ್ಥಿತಿ ತುಂಬಾ ಗಂಭೀರವಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ಇಬ್ಬರ ಆತ್ಮಹತ್ಯೆಗೆ ಪ್ರೇಮ ಸಂಬಂಧವೇ ಕಾರಣ ಎನ್ನಲಾಗಿದೆ. ಪ್ರಿಯಕರ ಮೊದಲೇ ಮದುವೆ ಆಗಿದ್ದ ವಿಚಾರ ತಿಳಿದು ಅದನ್ನು ಸಹಿಸದೇ ಹುಡುಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದನ್ನು ನೋಡಿ ಪ್ರಿಯಕರನು ಸಹ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆಂದು ಹೇಳಲಾಗಿದೆ. 42 ವರ್ಷದ ವ್ಯಕ್ತಿಗೆ ಇಬ್ಬರು ಮಕ್ಕಳಿರುವುದಾಗಿ ತಿಳಿದುಬಂದಿದೆ.
ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನೆಲ್ಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನಷ್ಟು ಮಾಹಿತಿ ತನಿಖಾ ನಂತರ ತಿಳಿದುಬರಲಿದೆ.(ಏಜೆನ್ಸೀಸ್​)
ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

VIDEO| ಪಾಕ್​ ಟಿಕ್​ಟಾಕರ್​​ ಬಟ್ಟೆ ಹರಿದು, ಎಳೆದಾಡಿದ ನೂರಾರು ಯುವಕರು! ಭಯಾನಕ ವಿಡಿಯೋ ವೈರಲ್​

ನಮಗೆ ಸಹಾಯ ಮಾಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ: ಭಾರತದ ಮೇಲೆ ಆಫ್ಘಾನ್​ ಪ್ರಜೆಗಳ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + four =
Remember me
