ವಿಜಯವಾಡ:ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದು ಕೂಡ ಸಾಮಾಜಿಕ ಪಿಡುಗುಗಳಲ್ಲಿ ಒಂದೆನ್ನಬಹುದು. ಇದಕ್ಕೆ ತಾಜಾ ಉದಾಹರಣೆಯಾಗಿ ಆಂಧ್ರ ಪ್ರದೇಶದ ಬ್ಯಾಂಕ್​ ಮ್ಯಾನೇಜರ್​ ಒಬ್ಬ ಕಚೇರಿಯ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿರುವ ಘಟನೆ ವರದಿಯಾಗಿದೆ.
ಮಹಿಳಾ ಗ್ರಾಹಕರಿಗೆ ಲೋನ್​ ಬೇಕಾದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್​ ಮ್ಯಾನೇಜರ್​ಗೆ ಲೈಂಗಿಕ ಸುಖ ನೀಡಬೇಕಂತೆ. ಈ ರೀತಿ ಕಿರುಕುಳ ಪ್ರಕರಣ ಆಂಧ್ರದ ನೆಲ್ಲೂರು ಜಿಲ್ಲೆಯ ಪೊದಲಕುರ್​ ಶಾಖೆಯಲ್ಲಿ ಬೆಳಕಿಗೆ ಬಂದಿದೆ.
ವಿವರಣೆಗೆ ಬರುವುದಾದರೆ, ಆರೋಪಿ ನಾಗೇಶ್​ ಪೊದಲಕುರ್​ ಎಸ್​ಬಿಐ ಶಾಖೆಯಲ್ಲಿ ಎಸ್​ಬಿಐ ಮ್ಯಾನೇಜರ್​ ಆಗಿದ್ದಾರೆ. ಈತನ ವಿರುದ್ಧ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವಿದೆ. ಅಲ್ಲದೆ, ಈತನ ಕಿರುಕುಳ ತಾಳದೇ ಕೆಲವು ಉದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರಂತೆ.
ಸಿಸಿಟಿವಿಯಲ್ಲಿ ಬ್ಯಾಂಕ್​ ಮ್ಯಾನೇಜರ್​ ಚೆಲ್ಲಾಟ ದಾಖಲಾದ ಬಳಿಕ ಆತನ ದುಷ್ಕೃತ್ಯಗಳೆಲ್ಲ ಒಂದೊಂದಾಗಿ ಬಯಲಿಗೆ ಬಂದಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮ್ಯಾನೇಜರ್​ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ದಾಖಲಾಗಿದೆ.
ಸದ್ಯ ನಾಗೇಶ್​ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗೇಶ್​ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ದಿವ್ಯಾ ಅವರೇನು ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿನಾ? ನೀವು ಮಾಡ್ತಿರೋದು ಸರಿನಾ?

ದ್ರೌಪದಿಯಲ್ಲ ಸೀತೆ ಆಗಲಿದ್ದಾರೆ ದೀಪಿಕಾ ಪಡುಕೋಣೆ

ಮಾಫಿಯಾ ವಿರುದ್ಧ ಪ್ರಜ್ವಲ್​ಹೋರಾಟ; ಹುಟ್ಟುಹಬ್ಬಕ್ಕೆ ಟೀಸರ್, ಪೋಸ್ಟರ್​ಗಳೇ ಉಡುಗೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + seven =
Remember me
