ನವದೆಹಲಿ:ನಾವು ಪ್ರಕೃತಿಯ ಬಗ್ಗೆ ಯೋಚಿಸಿದಾಗ ನಮ್ಮ ತಲೆಗೆ ಮೊದಲು ಬರುವ ಸಂಗತಿಗಳೆಂದರೆ ದಟ್ಟವಾದ ಕಾಡುಗಳು, ಅಗಾಧವಾದ ಸಾಗರಗಳು, ಸುಂದರವಾದ ಸಸ್ಯ ಮತ್ತು ಪ್ರಾಣಿಗಳು. ಆದರೆ, ನಮ್ಮಲ್ಲಿ ಪ್ಯಾರಾಸೈಟ್​ (ಪರಾವಲಂಬಿ ಜೀವಿಗಳು)ಗಳು ಸಹ ಇವೆ. ಅವುಗಳು ಇತರ ಪ್ರಾಣಿಗಳ ಮೆದುಳನ್ನು ನಿಯಂತ್ರಿಸಿ, ತಮ್ಮ ಗುಲಾಮರನ್ನಾಗಿ ಮಾಡುಕೊಳ್ಳುತ್ತವೆ ಎಂಬುದನ್ನು ಊಹಿಸಲು ಸಹ ಹೋಗುವುದಿಲ್ಲ. ಆದರೆ, ಇತ್ತೀಚೆಗೆ ಜಾಲತಾಣದಲ್ಲಿ ನ್ಯೂರೋಪ್ಯಾರಾಸೈಟ್​ (ನರಕ್ಕೆ ಸಂಬಂಧಿಸಿದ ಪರಾವಲಂಬಿ ಜೀವಿ) ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಅದು ನೆಟ್ಟಿಗರನ್ನು ಚಕಿತಗೊಳಿಸಿದೆ.
ವಿಡಿಯೋದಲ್ಲಿ ನ್ಯೂರೋಪ್ಯಾರಾಸೈಟ್, ಮೃತಪಟ್ಟ ಕೀಟವೊಂದರ ಮನಸ್ಸನ್ನು ನಿಯಂತ್ರಿಸಿ, ಅದು ನಡೆಯುವಂತೆ ಮಾಡಿದೆ. ವಿಡಿಯೋ ನೋಡಿದರೆ, ಒಮ್ಮೆ ಕಣ್ಣುಗಳನ್ನು ನೀವು ಅರಳಿಸುವುದಂತೂ ಗ್ಯಾರೆಂಟಿ.
ವೈರಲ್​ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಉದ್ಯೋಗಿ ಡಾ. ಸಾಮ್ರಾಟ್​ ಗೌಡ ಎಂಬುವರು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಹುತೇಕ ಒಳ ಅಂಗಾಂಗಗಳೇ ಇಲ್ಲದ ಸತ್ತ ಕೀಟವೊಂದು ಸಹಜವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಿಜಕ್ಕೂ ನಮ್ಮ ಕಣ್ಣನ್ನು ನಾವೇ ನಂಬಲಾಗದ ದೃಶ್ಯವಿದು.
Do you know? according to scientists A neuro parasite has taken control of brain of this dead insect and making it walk…….. Zombie ☠️💀💀pic.twitter.com/WBS8hNvH91
— Dr.Samrat Gowda IFS (@IfsSamrat)October 18, 2022

ಒಂದು ನ್ಯೂರೋಪ್ಯಾರಾಸೈಟ್​, ಸತ್ತ ಕೀಟದ ಮೆದುಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಅದು ನಡೆಯುವಂತೆ ಮಾಡಿದೆ…. ಇದನ್ನೇ ಜೊಂಬೀ ಎಂದು ಕರೆಯಲಾಗುವುದು ಎಂದು ವಿಡಿಯೋಗೆ ಅಡಿಬರಹವನ್ನು ನೀಡಲಾಗಿದೆ. ಅಂದಹಾಗೆ ಜೊಂಬಿ ಎಂಬುದು ಶವವನ್ನು ಪುನರುಜ್ಜೀವನಗೊಳಿಸುವ ಮೂಲಕ ರಚಿಸಲಾದ ಪೌರಾಣಿಕ ಶವಗಳ ಶಾರೀರಿಕ ಪುನಾರಗಮನವಾಗಿದೆ. ಜೋಂಬಿಸ್ ಸಾಮಾನ್ಯವಾಗಿ ಹಾಲಿವುಡ್​ನ ಭಯಾನಕ ಮತ್ತು ಫ್ಯಾಂಟಸಿ ಪ್ರಕಾರದ ಸಿನಿಮಾಗಳಲ್ಲಿ ಕಾಣಬಹುದಾಗಿದೆ.
ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಕೆಲವು ಪ್ಯಾರಾಸೈಟ್​ (ಪರಾವಲಂಬಿ ಜೀವಿ)ಗಳು ತಮ್ಮ ಅತಿಥಿಗಳನ್ನು ಅಥವಾ ತಾವು ಒಳಹೊಕ್ಕುವ ಜೀವಿಗಳನ್ನು ಹೆಚ್ಚು ಕಡಿಮೆ ವಾಕಿಂಗ್ ಡೆಡ್​ ಆಗಿ ಪರಿವರ್ತಿಸುತ್ತವೆ. ಮನಸ್ಸನ್ನು ನಿಯಂತ್ರಿಸುವುದರಲ್ಲಿ ಮಾಸ್ಟರ್​ಗಳಾಗಿರುವ ಪ್ಯಾರಾಸೈಟ್​ಗಳು ತಮ್ಮ ಅತಿಥಿಗಳನ್ನು ಒಳಗಿನಿಂದ ನಿಯಂತ್ರಿಸುವ ಮೂಲಕ ತಮಗೆ ಪ್ರಯೋಜನಕಾರಿಯಾದ ಸ್ವಯಂ-ವಿನಾಶಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಜೋಂಬಿಗಳು ನಮ್ಮ ಪರಿಸರದ ಭಾಗ ಎಂಬುದನ್ನು ಈ ವಿಡಿಯೋ ಇದೀಗ ಸಾಬೀತುಪಡಿಸಿದೆ. ಜೋಂಬಿಗಳನ್ನು ಕೇವಲ ಕಾದಂಬರಿ, ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿ ಮಾತ್ರ ಚಿತ್ರಿಸಲಾಗಿಲ್ಲ ಎಂಬುದನ್ನು ವೈರಲ್​ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ.(ಏಜೆನ್ಸೀಸ್​)
ಆಸ್ಪತ್ರೆಯಲ್ಲಿ ಏರ್​ ಕೂಲರ್​ ಆನ್​ ಮಾಡಿ ಮಲಗಿದ ವ್ಯಕ್ತಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಮಹಿಳಾ ಸಿಬ್ಬಂದಿ

ನಟನೆಗೆ ಮರಳಿದ ಪ್ರೇಮ್; ಘಾರ್ಗಾ ನಿರ್ದೇಶಕರ ಚಿತ್ರದಲ್ಲಿ ಅಭಿನಯ

ಮಹೇಶ್ ಬಾಬುಗೆ ದೀಪಿಕಾ ಪಡುಕೋಣೆ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
