ಹೈದರಾಬಾದ್​:ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದ ನೀರಿನಲ್ಲಿ ನವವಿವಾಹಿತೆ ಸೇರಿದಂತೆ ಸುಮಾರು 7 ಮಂದಿ ಕೊಚ್ಚಿ ಹೋಗಿದ್ದಾರೆ.
ಮದುವೆ ನಂತರದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನವದಂಪತಿ ಪ್ರವಲಿಕಾ ಮತ್ತು ನವಾಜ್​ ರೆಡ್ಡಿ ಇತರೆ ನಾಲ್ಕು ಮಂದಿಯೊಂದಿಗೆ ಕಾರಿನಲ್ಲಿ ವಿಕಾರಾಬಾದ್​ನಲ್ಲಿ ಪ್ರಯಾಣಿಸುವಾಗ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನವವಿವಾಹಿತೆಯ ನಾದಿನಿ ಶ್ವೇತಾ ಮತ್ತು ಆಕೆಯ ಮಗ ತ್ರೀನಾಥ್​ ರೆಡ್ಡಿ (8) ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇನ್ನೊಬ್ಬ ಹುಡುಗನ ಗುರುತು ಪತ್ತೆಯಾಗಿಲ್ಲ.
ಭಾರೀ ಮಳೆಯ ಬಳಿಕ ಭಾನುವಾರ ರಾತ್ರಿ ವಾರಂಗಲ್​ನ ಚರಂಡಿಯೊಂದರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ದೇಹ ಪತ್ತೆಯಾಗಿತ್ತು. ಮೃತನನ್ನು ಶಿವನಗರ ಮೂಲದ ವೊರ್ರೊಮ್​ ಕ್ರಾಂತಿ ಕುಮಾರ್​ ಎಂದು ಗುರುತಿಸಲಾಗಿದೆ. ಆತನ ಲ್ಯಾಪ್​ಟಾಪ್​ ಸಹ ಸ್ಥಳದಲ್ಲಿ ಪತ್ತೆಯಾಗಿದೆ.
ಮತ್ತೊಂದು ಘಟನೆಯಲ್ಲಿ 70 ವರ್ಷದ ಹಿರಿಯ ವ್ಯಕ್ತಿಯ ಕಾರು ಶಂಕರಪಲ್ಲಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದೆ. 30 ವರ್ಷದ ಕೂಲಿ ಕಾರ್ಮಿಕನು ಕೂಡ ಆದಿಲ್​ಬಾದ್​ನಲ್ಲಿ ಮಳೆ ಪ್ರವಾಹದಿಂದ ಮೃತಪಟ್ಟಿದ್ದಾನೆ. ಸ್ಕೂಟರ್​ ಚಲಾಯಿಸುತ್ತಿದ್ದ ಇಬ್ಬರು ಯುವತಿಯರು ಕೂಡ ಯಾದಾದ್ರಿ ಭೋಂಗಿರ್​ ಜಿಲ್ಲೆಯಲ್ಲಿ ನೀರಿನ ಸೆಳೆತಕ್ಕೆ ಕಣ್ಮರೆಯಾಗಿದ್ದಾರೆ.
ನೈರುತ್ಯ ಮುಂಗಾರು ಚುರುಕಾಗಿರುವುದರಿಂದ ವಿಕಾರಾಬಾದ್, ರಂಗಾರೆಡ್ಡಿ ಮತ್ತು ಸಿದ್ದಿಪೇಟೆಯಲ್ಲಿ ಭಾರೀ ಮಳೆಯಾಗಿದೆ. ಹೈದರಾಬಾದ್, ಆದಿಲಾಬಾದ್, ನಿಜಾಮಾಬಾದ್, ಕರೀಂನಗರ, ವಾರಂಗಲ್ ಮತ್ತು ಖಮ್ಮಂನಲ್ಲಿ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.(ಏಜೆನ್ಸೀಸ್​)
ಟೇಕ್​ ಕೇರ್​​ ಅಂದ್ರೂ ಡೋಂಟ್​ ಕೇರ್: ಅಪಘಾತಕ್ಕೂ ಮುನ್ನ ಇವರ ಮಾತು ಕೇಳಿದ್ರೆ ಬದುಕುಳಿತಿದ್ದ MLA ಪುತ್ರ?!

ಬೆಂಗ್ಳೂರಲ್ಲಿ ಡೆಡ್ಲಿ ಕಾರು ಅಪಘಾತ: ಮದುವೆಯಾಗೋ ಹುಡುಗಿಯ ಜತೆ ಶಾಸಕನ ಪುತ್ರನ ಭೀಕರ ಸಾವು

ಬೆಂಗ್ಳೂರಲ್ಲಿ ಡೆಡ್ಲಿ ಕಾರು ಅಪಘಾತ: ತಮಿಳುನಾಡು ಶಾಸಕನ ಒಬ್ಬನೇ ಪುತ್ರ ಸಾವು, ಒಟ್ಟು 7 ಮಂದಿ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + one =
Remember me
