ತಿರುವಳ್ಳೂರು:ನಾಲ್ಕು ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವಜೋಡಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಅರಕ್ಕೊಣಮ್​ ಮೂಲದ ಮನೋಜ್​ ಕುಮಾರ್​ (31) ಮತ್ತು ಪೆರುಗಲಥೂರ್​ ಮೂಲದ ಕಾರ್ತಿಕಾ (30) ಮೃತ ದಂಪತಿ. ಕಾಂಕ್ರಿಟ್​ ಮಿಕ್ಸರ್​ ಲಾರಿ ಕಾರಿನ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ.
ಮನೋಜ್​ ಕುಮಾರ್​ ಅವರು ಮೆಡಿಕಲ್​ ರೆಪ್​ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕಾ ಖಾಸಗಿ ಕ್ಲೀನಿಕ್​ ಒಂದರಲ್ಲಿ ವೈದ್ಯೆ ಆಗಿದ್ದರು. ಅಕ್ಟೋಬರ್​ 28ರಂದು ಇಬ್ಬರು ಮದುವೆ ಆಗಿದ್ದರು. ಭಾನುವಾರ ಕಾರ್ತಿಕಾ ಮನೆಗೆ ಹೋಗಿ ಅರಕ್ಕೊಣಮ್​ಗೆ ಹಿಂದಿರುಗುತ್ತಿದ್ದರು.
ಪೂನಮೆಲೀ-ಅರಕ್ಕೊಣಮ್​ ಹೆದ್ದಾರಿ ನಡುವಿನ ಕಡಂಬಥೂರ್​ ಸಮೀಪ ಭಾನುವಾರ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಎದರಿನಿಂದ ಬಂದ ಕಾಂಕ್ರಿಟ್​ ಮಿಕ್ಸರ್​ ಲಾರಿ ತಿರುವ ಪಡೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ​ ಕಾರಿನ ಮೇಲೆ ಬಿದ್ದಿದೆ.
ಮಿಕ್ಸರ್​ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಘಟನೆ ನಡೆದ ಎರಡು ಗಂಟೆಯ ನಂತರ ಮಿಕ್ಸರ್​ ಲಾರಿಯನ್ನು ತೆರವುಗೊಳಿಸಲಾಯಿತು. ಇದರ ಬೆನ್ನಲ್ಲೇ ಸ್ಥಳಕ್ಕೆ ಆಂಬ್ಯುಲೆನ್ಸ್​ ದೌಡಾಯಿಸಿತು. ಆದರೆ, ಅಷ್ಟರಲ್ಲಾಗಲೇ ದಂಪತಿ ಸಾವಿಗೀಡಾಗಿದ್ದರು. ಮೃತದೇಹಗಳನ್ನು ವಶಕ್ಕೆ ಪಡೆದ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯ ಬೆನ್ನಲ್ಲೇ ಮಿಕ್ಸರ್​ ಲಾರಿ ಡ್ರೈವರ್​ ಎಸ್ಕೇಪ್​ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡ್ರೈವರ್​ಗಾಗಿ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ತಮಿಳು ನಟ ವಿಶಾಲ್​ ಬೆನ್ನಲ್ಲೇ ಅಪ್ಪು ನೆನಪಲ್ಲಿ ಮಹತ್ವದ ಕಾರ್ಯಕ್ಕೆ ಮುಂದಾದ ನಟಿ ಪ್ರಣೀತಾ!

ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!

ದಲಿತನ ಮದ್ವೆಯಾದೆನೆಂದು ತಂದೆಯೇ ಅರೆನಗ್ನಗೊಳಿಸಿದರು… ಕರಾಳ ಘಟನೆ ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
