ಬಿರ್ಭಮ್​:ಆಟೋ ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್​ ಜಿಲ್ಲೆಯ ಮಲ್ಲರ್ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ 9 ಮಂದಿಯಲ್ಲಿ 8 ಮಂದಿ ಮಹಿಳಾ ಕಾರ್ಮಿಕರು. ಬಿರ್ಭಮ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಈ ಘಟನೆ ನಡೆದಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಆಟೋ ಮತ್ತು ಬಸ್​ ನಡುವೆ ಈ ಅಪಘಾತ ಸಂಭವಿಸಿದ್ದು, ಆಟೋದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
West Bengal | 9 people killed in auto and bus collision in Mallarpur police station area of Birbhum district: Dhiman Mitra, SDPO Rampurhatpic.twitter.com/dqPmhhZves
— ANI (@ANI)August 9, 2022

ಘಟನೆಯ ಬೆನ್ನಲ್ಲೇ ಪ್ರಧಾನಿ ಮೋದಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ ಮತ್ತು ಗಾಯಾಳುಗಳ ಚಿಕಿತ್ಸೆಗೆ 50 ಸಾವಿರ ರೂ. ಘೋಷಿಸಿದ್ದಾರೆ.
Anguished by the loss of lives due to a tragic accident in Birbhum district of West Bengal. Prayers with the injured.
Rs. 2 lakh from PMNRF would be given to the next of kin of each deceased and the injured would be given Rs. 50,000: PM@narendramodi
— PMO India (@PMOIndia)August 9, 2022

ಇದಕ್ಕೂ ಮುನ್ನ ಭಾನುವಾರ ಮುಂಜಾನೆ, ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಜಲ್ಪೇಶ್ ದೇವಸ್ಥಾನದ ಮಾರ್ಗವಾಗಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ 10 ಜನರು ಸಾವನ್ನಪ್ಪಿದರು. ಈ ಘಟನೆ ನಡೆದ ಎರಡು ದಿನದ ಬೆನ್ನಲ್ಲೇ ಇದೀಗ ಭೀಕರ ಅಪಘಾತ ಸಂಭವಿಸಿ 9 ಮಂದಿ ಅಸುನೀಗಿದ್ದಾರೆ.(ಏಜೆನ್ಸೀಸ್​)
ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್​ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್​​

ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ಪ್ರೇಮಿಗಳು

ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
