ಕೊಟ್ಟಾಯಂ (ಕೇರಳ):ನಿನ್ನೆ (ಅ.1) ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್​ನಲ್ಲಿ ಸಹಪಾಠಿ ಅಭಿಷೇಕ್ ಬೈಜು ಎಂಬಾತನಿಂದ ಬರ್ಬರವಾಗಿ ಹತ್ಯೆಯಾದ 22 ವರ್ಷದ ವಿದ್ಯಾರ್ಥಿನಿ ನಿಥಿನಾ ಮೋಲ್‌, ತನ್ನ ಅನಾರೋಗ್ಯ ಪೀಡಿತ ತಾಯಿಯ ಬದುಕಿಗೆ ಭರವಸೆಯ ಕಿರಣವಾಗಿದ್ದ ಒಬ್ಬಳೇ ಮಗಳು. ಸಹೃದಯಿ ಆಗಿದ್ದ ನಿಥಿನಾ ಓದುವುದರಲ್ಲಿಯೂ ಸ್ಮಾರ್ಟ್​ ಹುಡುಗಿಯಾಗಿದ್ದಳು ಎಂದು ಸ್ಥಳೀಯರು ಮೆಲಕು ಹಾಕಿದ್ದಾರೆ.
ಗಂಡನಿಂದ ಪತ್ಯೇಕವಾದ ಬಳಿಕ ನಿಥಿನಾ ತಾಯಿ ಬಿಂದು ತನ್ನ ಮಗಳೊಂದಿಗೆ ವಾಸವಿದ್ದಳು. ತಾಯಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ವೈಕಂನ ತಲಯೋಲಪರಂಬು ಮೂಲದ ಬಿಂದು ಕುಟುಂಬ ಜೀವನ ಸಾಗಿಸಲು ತುಂಬಾ ಪರದಾಡುತ್ತಿತ್ತು. ಅನಾರೋಗ್ಯ ಸಮಸ್ಯೆಯಿಂದಾಗಿ ಬಿಂದು ಪ್ರತಿನಿತ್ಯ ಕೆಲಸ ಮಾಡಲು ಆಗುತ್ತಿರಲಿಲ್ಲ. ಆಗಾಗ ತಾಯಿಗೆ ನಿಥಿನಾ ಬೆನ್ನೆಲುಬಾಗಿ ನಿಲ್ಲುತ್ತಿದ್ದಳು.
ಮನೆಗೆ ಅವಶ್ಯಕ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಕೆಲವೊಮ್ಮೆ ಪಾರ್ಟ್​ ಟೈಂ ಕೆಲಸವನ್ನು ಸಹ ನಿಥಿನಾ ಮಾಡುತ್ತಿದ್ದಳು. ತನ್ನ ಮಗಳು ಜೀವನದಲ್ಲಿ ತುಂಬಾ ಯಶಸ್ವಿಯಾಗಬೇಕೆಂದು ಯಾವಾಗಲು ಬಿಂದು ಬಯಸುತ್ತಿದ್ದರು. ಪ್ರವಾಹದ ವೇಳೆ ತಮ್ಮ ಮನೆ ತುಂಬಾ ಹಾನಿಯಾದ ಪರಿಣಾಮ ಜಾಯ್​ ಅಲುಕ್ಕಾಸ್​ ಉದ್ಯಮಿ ನೆರವಿನಲ್ಲಿ ವ್ಯವಸ್ಥೆಯಾದ ಮನೆಯಲ್ಲಿ ಬಿಂದು ಮತ್ತು ಮಗಳು ನಿಥಿನಾ ವಾಸವಿದ್ದರು.
ಸಾಮಾಜಿಕ ಚಟುವಟಿಕೆಗಳಲ್ಲಿ ನಿಥಿನಾ ತುಂಬಾ ಸಕ್ರೀಯಳಾಗಿರುತ್ತಿದ್ದಳು. ಅದರಲ್ಲೂ ಚುನಾವಣೆ ಸಂದರ್ಭ ಬಂದಾಗಲಂತೂ ತಮ್ಮ ಏರಿಯಾದಲ್ಲಿ ನಿಥಿನಾ ಸಕ್ರೀಯಳಾಗಿ ತೊಡಗುತ್ತಿದ್ದಳು ಎಂದು ಪಂಚಾಯತ್​ ಸದಸ್ಯರಲ್ಲಿ ಒಬ್ಬರಾದ ಜೋಸ್​ ಎಂಬುವರು ತಿಳಿಸಿದ್ದಾರೆ.
ಶುಕ್ರವಾರ (ಅ.1) ನಿಥಿನಾ ತಾಯಿಯ ಜತೆ ಮನೆ ಬಿಟ್ಟಳು. ತಾಯಿ ಕೊಟ್ಟಾಯಂಗೆ ತೆರಳಿದ್ರೆ, ನಿಥಿನಾ ಕಾಲೇಜು ಕಡೆ ತೆರಳಿದಳು. ಇದಾದ ಕೆಲವೇ ಗಂಟೆಗಳಲ್ಲಿ ಬಿಂದುಗೆ ಕರೆಯೊಂದು ಬರುತ್ತದೆ. ಭಯಾನಕ ಸುದ್ದಿಯೊಂದನ್ನು ಕೇಳಿ ಕೊಟ್ಟಾಯಂ ಆಸ್ಪತ್ರೆಗೆ ಧಾವಿಸುವ ಆಕೆಗೆ ಮಗಳು ಬರ್ಬರವಾಗಿ ಹತ್ಯೆಯಾಗಿರುವುದನ್ನು ನೋಡಿ ಬರಸಿಡಿಲು ಬಡಿದಂತಾಗುತ್ತದೆ.
ಪರೀಕ್ಷೆ ಬರೆಯಲು ಬಂದಿದ್ದ ನಿಥಿನಾ, ಪರೀಕ್ಷಾ ಕೊಠಡಿಗೆ ತೆರಳುವ ವೇಳೆ ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಿಥಿನಾ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್​ನಲ್ಲಿ ಮೂರನೇ ವರ್ಷದ ‘ಬ್ಯಾಚುಲರ್‌ ಆಫ್‌ ವೋಕೇಷನ್‌’ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ನಡುವೆ ಪ್ರೀತಿಯ ಸಂಬಂಧ ಇತ್ತು ಎನ್ನಲಾಗಿದೆ. ಲವ್​ ಬ್ರೇಕ್​ ಅಪ್​ ಮಾಡಿಕೊಂಡ ಕೋಪದಲ್ಲಿ ಅಭಿಷೇಕ್​ ಕೊಲೆ ಮಾಡಿದ್ದಾನೆಂದು ಪ್ರಾಥಮಿಕ ವರದಿಯಾಗಿದೆ. ಇದೀಗ ಇದ್ದ ಒಬ್ಬ ಮಗಳನ್ನು ಕಳೆದುಕೊಂಡ ಬಿಂದು ಅನಾಥೆಯಾಗಿದ್ದಾರೆ.(ಏಜೆನ್ಸೀಸ್​)
ಕಾಲೇಜ್‌ ಆವರಣದಲ್ಲಿ ಹರಿಯಿತು ನೆತ್ತರು: ಪ್ರೀತಿಸಿಲ್ಲವೆಂದು ವಿದ್ಯಾರ್ಥಿನಿಯ ರುಂಡ ಕಡಿದ ವಿದ್ಯಾರ್ಥಿ!

ಬ್ಯೂಟಿ ಕಿಂಗ್‌, ಮದ್ಯಪ್ರಿಯ, ಪ್ರಶಸ್ತಿಗಳ ಸರದಾರ 21 ಕೋಟಿ ರೂ. ಬೆಲೆಯ ಸುಲ್ತಾನ್‌ ಹೃದಯಾಘಾತದಿಂದ ಸಾವು

ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್​ ಕಾಲ್​ ಸೀಕ್ರೆಟ್​ ಮೇಲೆ ಪೊಲೀಸರ ಕಣ್ಣು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + ten =
Remember me
