ವಿಜಯವಾಡ:ಭಾರತ ಹಿಂದೆಂದು ಕಾಣದಂತಹ ಕಠೋರ ಪರಿಸ್ಥಿತಿಯನ್ನು ಮಹಾಮಾರಿ ಕರೊನಾ ವೈರಸ್ ತಂದಿಟ್ಟಿದೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್​ ಸೋಂಕಿತರೇ ತುಂಬಿಕೊಂಡಿರುವುದರಿಂದ ಯಾರು ಎದುರು ನೋಡದ ಸನ್ನಿವೇಶಗಳೆಲ್ಲ ಕಣ್ಣ ಮುಂದೆಯೇ ನಡೆಯುತ್ತಿದೆ.
ಕರೊನಾದಿಂದಾಗಿ ಆಂಬುಲೆನ್ಸ್​ ಸೌಲಭ್ಯ ಇಲ್ಲದಿರುವುದರಿಂದ ಕುಟುಂಬವೊಂದು ಮಹಿಳೆಯ ಮೃತದೇಹವನ್ನು ಬೈಕ್​ ಮೇಲೆ ಹಾಕಿಕೊಂಡು ಹೋಗಿ ಶವಸಂಸ್ಕಾರ ಮಾಡಿರುವಂತಹ ಮನಕಲುಕುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ.​ಮೃತ ಮಹಿಳೆಯ ವಯಸ್ಸು 50 ಎಂದು ಅಂದಾಜಿಸಲಾಗಿದೆ. ಮಹಿಳೆ ಕೋವಿಡ್​ ರೋಗ ಲಕ್ಷಣಗಳಿಂದ ಬಳಲುತ್ತಿದ್ದಳು. ಪರೀಕ್ಷೆಯು ಸಹ ಮಾಡಿಸಲಾಗಿತ್ತು. ಆದರೆ, ಪರೀಕ್ಷಾ ವರದಿ ಬರುವ ಮುನ್ನವೇ ಮಹಿಳೆ ತೀರಿಕೊಂಡಿದ್ದಾಳೆ. ಮೃತ ಮಹಿಳೆ ಶ್ರೀಕಾಕುಳಂನ ಮಂದಾಸಾ ಮಂಡಲದಲ್ಲಿರುವ ಗ್ರಾಮದವಳು. ಸೋಮವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿ ಮೃತಪಟ್ಟಿದ್ದಳು.
ಆಂಬುಲೆನ್ಸ್​ ಸಿಗುವ ಭರವಸೆಯ ಮೇಲೆ ಮೃತದೇಹವನ್ನು ಕುಟುಂಬದವರು ಆಸ್ಪತ್ರೆಯಲ್ಲೇ ಇಟ್ಟುಕೊಂಡು ಕಾಯುತ್ತಿದ್ದರು. ಆದರೆ, ಯಾವುದೇ ಆಂಬುಲೆನ್ಸ್​ ಸಿಗದಿದ್ದಾಗ ಬೈಕ್​ ಮೇಲೆಯೇ ಹೆಣವನ್ನು ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.(ಏಜೆನ್ಸೀಸ್​)
ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…

ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ

ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eleven =
Remember me
