ಆಲಪ್ಪುಳ:ಕೇವಲ ಎರಡು ದಿನಗಳ ಅಂತರದಲ್ಲಿ ಕೇರಳದ ಮೂವರು ಯುವತಿಯರು ವರದಕ್ಷಿಣೆ ಕಿರುಕುಳಕ್ಕೆ ಮೃತಪಟ್ಟ ಘಟನೆ ಸಾಕ್ಷರತಾ ನಾಡು ಕೇರಳದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು. ಮಾನವನ ದುರಾಸೆಯಿಂದ ಮೂವರು ಅಮಾಯಕರ ಪ್ರಾಣವೇ ಹೋಯಿತು. ಈ ಘಟನೆಯಿಂದ ಹೆಣ್ಣು ಮಕ್ಕಳನ್ನು ಹೆತ್ತ ಪಾಲಕರು ಆತಂಕಕ್ಕೀಡಾಗಿರುವುದಲ್ಲದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ದೂಡಿದೆ. ಆದರೆ, ಆಲಪ್ಪುಳದಲ್ಲಿ ಗುರುವಾರ ನಡೆದ ಮದುವೆಯೊಂದು ಹೆಣ್ಣು ಹೆತ್ತ ಪಾಲಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಹೌದು. ನಿನ್ನೆ ನಡೆದ ಸತೀಶ್​ ಸತ್ಯಾನ್​ ಮತ್ತು ಶ್ರುತಿ ರಾಜ್​ ಮದುವೆಯಲ್ಲಿ ಸಮಾಜಕ್ಕೆ ಒಂದು ಬಲವಾದ ಸಂದೇಶವನ್ನು ರವಾನಿಸಲಾಗಿದೆ. ವರ ಸತೀಶ್​ ನನಗೆ ಚಿನ್ನ ಬೇಡ ಎಂದು ವಧುವಿನ ಕುಟುಂಬಕ್ಕೆ ಹಿಂತಿರುಗಿಸಿ ಎಲ್ಲರು ತನ್ನ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮೂಲಕ ಕೇರಳದಲ್ಲಿ ಹೊಸ ಪದ್ಧತಿಗೆ ಸತೀಶ್​ ನಾಂದಿ ಆಡಿದ್ದಾರೆ.
ಇದನ್ನೂ ಓದಿರಿ:ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ
ಅಂದಹಾಗೆ ಸತೀಶ್​ ಸತ್ಯನ್​ ಮತ್ತು ಶ್ರುತಿ ರಾಜ್​ ಪಣಯಿಲ್​ ದೇವಿ ದೇವಸ್ಥಾನದಲ್ಲಿ ಗುರುವಾರ ಸಪ್ತಪದಿ ತುಳಿದಿದ್ದಾರೆ. ಮದುವೆ ಮುಗಿದ ಬಳಿಕ ವರ ಸತೀಶ್​ ಮತ್ತು ಅವರ ತಂದೆ ಸತ್ಯನ್​, ವಧು ಧರಿಸಿದ್ದ ಚಿನ್ನಾಭರಣಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.
ಸತೀಶ್​ ನೂರನಾಡ್​​ ಪಲ್ಲಿಕಲ್​ ನಿವಾಸಿ ಕೆ.ವಿ. ಸತ್ಯನ್​ ಮತ್ತು ಜಿ ಸರಸ್ವತಿ ಅವರ ಪುತ್ರ. ಶ್ರುತಿ ರಾಜ್​ ನೂರನಾಡ್​ ಪಣಯಿಲ್​ ನಿವಾಸಿ ಆರ್​. ರಾಜೇಂದ್ರನ್​ ಮತ್ತು ಪಿ ಶೀಲಾ ಅವರು ಮಗಳು. ಕೋವಿಡ್​ ಶಿಷ್ಟಾಚಾರದಂತೆ ನಡೆದ ಮದುವೆಯಲ್ಲಿ ಆಪ್ತ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು.(ಏಜೆನ್ಸೀಸ್​)
2 ದಿನದ ಅಂತರದಲ್ಲಿ ಮೂವರು ಯುವತಿಯರ ದುರಂತ ಸಾವು: ಸಾಕ್ಷರತಾ ರಾಜ್ಯ ಕೇರಳಕ್ಕೆ ಕಪ್ಪುಚುಕ್ಕೆ

ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

ಕೋಟಿಕೋಟಿ ವರದಕ್ಷಿಣೆ ಕೊಟ್ಟರೂ ಸಂತೃಪ್ತನಾಗದ ಪತಿರಾಯ! ಹೆಂಡತಿಯನ್ನು ಆಹಾರ ಕೊಡದೆ ಕೂಡಿ ಹಾಕಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
