ನವದೆಹಲಿ:ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಫೇಮಸ್​ ಆಗಲೆಂದೇ ಸಾಕಷ್ಟು ಮಂದಿ ನಾನಾ ಸರ್ಕಸ್​ ಮಾಡುತ್ತಿರುತ್ತಾರೆ. ಕೆಲವರು ಏನೇನೋ ಮಾಡಲು ಹೋಗಿ ಕಾನೂನಿನ ನಿಯಮಗಳನ್ನು ಮುರಿದು ಜೈಲು ಅತಿಥಿಯಾದ ಉದಾಹರಣೆಗಳಿವೆ. ಆ ಸಾಲಿಗೆ ಮತ್ತೊಬ್ಬ ವ್ಯಕ್ತಿ ಇದೀಗ ಸೇರಿಕೊಂಡಿದ್ದಾನೆ.
ನೊಯ್ಡಾದ 21 ವರ್ಷದ ಯುವಕನೊಬ್ಬ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯಲು ಸಿನಿಮಾದಲ್ಲಿ ಬರುವ ನಾಯಕನ ರೀತಿ ಸಾಹಸ ಮಾಡಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ. ಬಂಧಿತ ಯುವಕ ಅಪಾಯಕಾರಿ ಸಾಹಸ ಮಾಡಿ ವಿಡಿಯೋ ಹರಿಬಿಟ್ಟಿದ್ದ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಆತನ್ನನ್ನು ಹುಡುಕಾಡಿ ಪೊಲೀಸರು ಬಂಧಿಸಿದ್ದಾರೆ.
ಯುವಕ ಮಾಡಿದ್ದೇನು ಅಂತಾ ಹೇಳುವುದಾದರೆ, ಎರಡು ಚಲಿಸುವ ಎಸ್​ಯುವಿ ಕಾರಿನ ಮೇಲೆ ನಿಂತು ನಗರದ ರಸ್ತೆಯಲ್ಲೇ ಯುವಕ ಸಾಹಸ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲೆಂದೇ ಈ ವಿಡಿಯೋ ಮಾಡಿದ್ದು, ಆತನ್ನನ್ನು ಮತ್ತು ಎರಡು ಕಾರುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಕಮಿಷನರೇಟ್ ಗೌತಮ್ ಬುದ್ಧನಗರದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಯುವಕ, 1991ರಲ್ಲಿ ಬಿಡುಗಡೆಯಾದ ನಟ ಅಜಯ್​ ದೇವಗನ್​ ಅವರ ಚೊಚ್ಚಲ ಸಿನಿಮಾ “ಫೂಲ್ ಔರ್ ಕಾಂತೆ”ನಲ್ಲಿ ಮಾಡಿದ ಸಾಹಸವನ್ನು ಮರು ಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ವಾಹನನಿಬಿಡ ರಸ್ತೆಯಲ್ಲೇ ತಮ್ಮ ಬೈಕ್‌ನಲ್ಲಿ ಅಜಾಗರೂಕತೆಯಿಂದ ಚಾಲನೆ ಮತ್ತು ವ್ಹೀಲಿಂಗ್​ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.
ಯುವಕನ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಗೌತಮ್ ಬುದ್ಧ ನಗರ ಪೊಲೀಸರು ತಿಳಿಸಿದ್ದಾರೆ. ಅವನು ತನ್ನ ಪ್ರಾಣವನ್ನು ಮಾತ್ರವಲ್ಲದೆ ರಸ್ತೆಯಲ್ಲಿರುವ ಇತರ ಜನರ ಪ್ರಾಣವನ್ನೂ ಅಪಾಯಕ್ಕೆ ಒಳಪಡಿಸಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
गाड़ियों व बाइक पर खतरनाक स्टंट करने वाले युवक को थाना सेक्टर-113 नोएडा पुलिस द्वारा गिरफ्तार कर स्टंट में प्रयुक्त वाहनों को सीज किया गया।#UPPolicepic.twitter.com/92yYu33O45
— POLICE COMMISSIONERATE GAUTAM BUDDH NAGAR (@noidapolice)May 22, 2022

ನಿಲ್ಲದ ಅಪಘಾತಗಳ ಸರಣಿ: ಸಾವಿನ ಹೆದ್ದಾರಿ ಎಂಬುದನ್ನು ಮತ್ತೆ ನೆನಪಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿ

ಶೂಟಿಂಗ್​ ನೆಪದಲ್ಲಿ ಗಾಯಕಿಯನ್ನು ಕರೆದೊಯ್ದ ಇಬ್ಬರು: 12 ದಿನದ ಬಳಿಕ ಭಯಾನಕ ಸತ್ಯ ಬಯಲು!

ಕಂಗನಾ ಸಿನಿಮಾ ಸೋಲಿಗೆ ಸಂಭ್ರಮಾಚರಿಸಿದ ನಟಿ! ಧಾಕಡ್​ ಚಿತ್ರ ಸೋಲಲಿ ಎಂದು ಮೊದಲೇ ಹೇಳಿಕೆ ಕೊಟ್ಟಿದ್ದ ಈಕೆ ಯಾರು ಗೊತ್ತಾ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve − eight =
Remember me
