ರಾಂಪುರ:ಮರಣ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಉಂಟಾದ ವಾಗ್ವಾದ ತಾರಕಕ್ಕೇರಿ ನರ್ಸ್​ ಒಬ್ಬಳು ಸಾರ್ವಜನಿಕರ ಎದುರಲ್ಲೇ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವರದಿಯ ಪ್ರಕಾರ ರೋಗಿಗಳಿಂದ ತುಂಬಿದ್ದ ವೈದ್ಯರ ಕೊಠಡಿಗೆ ಬಂದ ನರ್ಸ್​, ಸಾವಿಗೀಡಾದ ರೋಗಿಯೊಬ್ಬರ ಮರಣ ಪ್ರಮಾಣ ಪತ್ರ ನೀಡುವಂತೆ ಕೇಳುತ್ತಾಳೆ. ಇದರ ಬೆನ್ನಲ್ಲೇ ಇಬ್ಬರ ನಡುವೆ ವಾಗ್ವಾದ ಶುರುವಾಗುತ್ತದೆ. ತಕ್ಷಣ ನರ್ಸ್​ ವೈದ್ಯನ ಕಪಾಳಕ್ಕೆ ಬಾರಿಸುತ್ತಾಳೆ. ಪ್ರತಿಯಾಗಿ ವೈದ್ಯನು ಸಹ ಆಕೆಗೆ ಬಾರಿಸುತ್ತಾರೆ.
ಈ ದೃಶ್ಯವನ್ನು ಆಸ್ಪತ್ರೆಯಲ್ಲಿದ್ದ ಸ್ಥಳೀಯರು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್​ ಆಗಿದೆ. ಈ ಘಟನೆ ಸೋಮವಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್​ ರವೀಂದ್ರ ಕುಮಾರ್​ ಆದೇಶಿಸಿದ್ದಾರೆ. ಸದ್ಯ ರೋಗಿಗಳ ಮುಂದೆಯೇ ನರ್ಸ್​ ಮತ್ತು ವೈದ್ಯ ಕಿತ್ತಾಡಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.(ಏಜೆನ್ಸೀಸ್​)
ಮರಣ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಉಂಟಾದ ವಾಗ್ವಾದ ತಾರಕಕ್ಕೇರಿ ನರ್ಸ್​ ಒಬ್ಬಳು ಸಾರ್ವಜನಿಕರ ಎದುರಲ್ಲೇ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.#Nurse#Slaps#Doctor#UttarPradeshpic.twitter.com/p3YJSTBhg1
— Vijayavani (@VVani4U)April 28, 2021

ಅಜ್ಜನಿಗೆ ಆಕ್ಸಿಜನ್ ಸಿಲಿಂಡರ್ ಬೇಕಾಗಿದೆ ಅಂತ ಟ್ವೀಟ್ ಮಾಡಿದ ಯುವಕನ ವಿರುದ್ಧ ಎಫ್ಐಆರ್!

ತನ್ನ ದೊಡ್ಡ ನಿತಂಬಗಳಿಂದಾದ ಅವಮಾನದ ಬಗ್ಗೆ ಮಾತನಾಡಿದ ಗೋವಾ ಬ್ಯೂಟಿ ಇಲಿಯಾನಾ..!

ತಂಗಿಯ ಜತೆ ಮಂಚದಲ್ಲಿ ಚಕ್ಕಂದ- ನಾಲ್ಕನೇ ಗಂಡನಿಂದ ‘ಡ್ರಗ್ಸ್‌ ರಾಣಿ’ಯ ದುರಂತ ಅಂತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
