ಧೆಂಕನಲ್​:ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ, ಧೆಂಕನಲ್​ ಜಿಲ್ಲೆಯ ರೆವಿನ್ಯೂ ಇನ್ಸ್​ಪೆಕ್ಟರ್​ ಒಬ್ಬರು ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಅವರನ್ನು ಅಮಾನತಿನಲ್ಲಿ ಇಡಲಾಗಿದೆ.
ಅಮಾನತಾದ ಅಧಿಕಾರಿಯನ್ನು ರಂಜನ್​ ಪಾಣಿಗ್ರಹಿ ಎಂದು ಗುರುತಿಸಲಾಗಿದೆ. ಧೆಂಕನಕಲ್​ ಜಿಲ್ಲಾಧಿಕಾರಿ ಭೂಮೇಶ್​ ಚಂದ್ರ ಬೆಹೆರಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹೆಚ್ಚುವರಿ ರೆವಿನ್ಯೂ ಇನ್ಸ್​ಪೆಕ್ಟರ್​ ಆಗಿದ್ದ ಪಾಣಿಗ್ರಹಿ ಅವರನ್ನು ಕೆಲವು ತಿಂಗಳ ಹಿಂದೆ ಗಾಡಸಿಲಾ ಸರ್ಕಲ್​ ಕಚೇರಿಯ ಉಸ್ತುವರಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ವೈರಲ್​ ಆಗಿರುವ ಅವರ ವಿಡಿಯೋದಲ್ಲಿ, ಪಾಣಿಗ್ರಹಿ ಅವರ ಕಚೇರಿಯಲ್ಲಿ ಖಾಲಿ ಮದ್ಯದ ಬಾಟೆಲ್​ಗಳಿದ್ದು, ಹೊರಗಿನವರು ಸಹ ಕಚೇರಿಯಲ್ಲಿ ಮಲಗಿರುವ ದೃಶ್ಯವಿದೆ. ಅದರಲ್ಲೂ ಪಾಣಿಗ್ರಹಿ, ಮಹಿಳೆಯೊಬ್ಬಳ ಜತೆ ಕಚೇರಿಯಲ್ಲಿಯೇ ಸಂಧಾನ ಸ್ಥಿತಿಯಲ್ಲಿರುವ ದೃಶ್ಯವು ಸೆರೆಯಾಗಿದೆ.
ಇದನ್ನೂ ಓದಿರಿ:ರಾಹುಲ್​ ಡ್ರಾವಿಡ್​ ಕೋಪಕ್ಕೆ ಧೋನಿ ಹೆದರಿದ್ದರು! ಹಳೆಯ ಘಟನೆ ಮೆಲುಕು ಹಾಕಿದ ಸೆಹ್ವಾಗ್​
ವೈರಲ್​ ವಿಡಿಯೋ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಪಾಣಿಗ್ರಹಿ ಅವರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಒಡಪಾದ ತಹಸೀಲ್ದಾರ್​ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ವರದಿ ಆಧರಿಸಿ ಮತ್ತೊಮ್ಮೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಕರ್ನಾಟಕದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಕಣ್ಣೇ ಅದಿರಿಂದಿ ಖ್ಯಾತಿಯ ಮಂಗ್ಲಿ..!

ಎರಡು ತಲೆ, ಮೂರು ಕೈಯುಳ್ಳ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

ಶೀಘ್ರದಲ್ಲೇ ತೆರೆಗೆ ಬರಲಿದೆ ಮತ್ತೊಂದು ಶುಭಮಂಗಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fourteen =
Remember me
