ಮುಂಬೈ:ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್​ಎಫ್​)ಯ ಯುವ ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ಖ್ಯಾತ ನಟ ಸಲ್ಮಾನ್​ ಖಾನ್​ರನ್ನು ತಡೆದು ಭದ್ರತಾ ತಪಾಸಣೆ ನಡೆಸುವ ಮೂಲಕ ರಾತ್ರೋರಾತ್ರಿ​ ರಿಯಲ್​ ಹೀರೋ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಭಾರೀ ಮೆಚ್ಚುಗೆಗು ಪಾತ್ರರಾಗಿದ್ದಾರೆ.
ಯುವ ಅಧಿಕಾರಿ ಸೋಮನಾಥ್​ ಮೊಹಂತಿ ಒಡಿಶಾದ ನಯಾಗಢ ಜಿಲ್ಲೆಯ ಪನಿಕೊಯ್ಲಿ ಮೂಲದವರು. ಟೈಗರ್​ 3 ಚಿತ್ರದ ಚಿತ್ರೀಕರಣಕ್ಕಾಗಿ ಸಲ್ಮಾನ್​ ಖಾನ್​ ಅವರು ವಿದೇಶಕ್ಕೆ ತೆರಳೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೊಹಂತಿ ಏರ್​ಪೋರ್ಟ್​ನಲ್ಲಿ ಕರ್ತವ್ಯದಲ್ಲಿದ್ದರು. ಬಹುತೇಕರು ವಿಐಪಿಗಳು ಬಂದಾಗ ಭದ್ರತಾ ತಪಾಸಣೆ ನಡೆಸಲು ಹಿಂಜರಿಯುತ್ತಾರೆ. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೇ ಮೊಹಂತಿ ಅವರು ಸಲ್ಮಾನ್​ ಭದ್ರತಾ ತಪಾಸಣೆ ನಡೆಸಿ ಕಳುಹಿಸಿದ್ದಾರೆ.
ಭದ್ರತಾ ತಪಾಸಣೆ ಮಾಡಿದ್ದಲ್ಲದೆ, ಸಲ್ಮಾನ್​ ಖಾನ್​ರನ್ನು ತಡೆದು ಸಾಮಾನ್ಯ ಜನರ ರೀತಿ ಸಾಲಿನಲ್ಲಿ ನಿಲ್ಲುವಂತೆಯು ಮತ್ತು ದಾಖಲಾತಿಗಳನ್ನು ತೋರಿಸುವಂತೆ ಹೇಳಿದರು. ಇದು ಕೂಡ ಮೊಹಂತಿ ಅವರ ಕರ್ತವ್ಯ ಪ್ರಜ್ಞೆಯನ್ನು ತೋರಿಸುತ್ತದೆ. ಮೊಹಂತಿ ನಡೆಯಿಂದ ಸಲ್ಮಾನ್​ ಖಾನ್​ ಕೊಂಚ ಅಚ್ಚರಿಗೊಂಡರು ಕೂಡ ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತನ್ನ ಜತೆಗಿದ್ದವರಿಗೂ ಅವರು ಹೇಳಿದಂತೆ ಕೇಳಿ ಎನ್ನುವ ಮೂಲಕ ಸಲ್ಮಾನ್​ ಕೂಡ ತಮ್ಮ ಸರಳೆಯನ್ನು ಮೆರೆದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಮೊಹಂತಿ ಅವರಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಮೊಹಂತಿ ಅವರು ನಿಜವಾದ ಹೀರೋ ಎಂದು ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಭೋಜ್​ಪುರಿ ನಟಿ ತ್ರಿಷಾ ಕರ್​ ಮಧು ಬೆನ್ನಲ್ಲೇ ಮತ್ತೊಬ್ಬ ನಟಿಯ ಅಶ್ಲೀಲ ವಿಡಿಯೋ ವೈರಲ್​..!

ತಾಲಿಬಾನ್ ಹೇಳಿದ್ದೇ ಬೇರೆ..ಆಗ್ತಿರೋದೇ ಬೇರೆ! ಬಯಲಾಗ್ತಿದೆ ತಾಲಿಬಾನಿಗಳ ಅಸಲಿ ಮುಖವಾಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
