ಮಲಪ್ಪುರಂ:ನಿಜವಾದ ಪ್ರೀತಿಯು ಜಾತಿ, ಬಣ್ಣ, ಭಾಷೆ ಮತ್ತು ವಯಸ್ಸು ಎಲ್ಲವನ್ನು ಮೀರಿದ್ದು. ಅಲ್ಲದೆ, ಪ್ರೀತಿಗೆ ಯಾವುದೇ ಗಡಿ ಇಲ್ಲ ಎಂಬ ಮಾತಿಗೆ ಇವರಿಬ್ಬರ ಲವ್​ ಸ್ಟೋರಿ ತಾಜಾ ಉದಾಹರಣೆಯಾಗಿದೆ.
ಹೌದು, ಕೇರಳ ಮೂಲದ ಒಲಂಪಿಯನ್​ ಆಕಾಶ್​ ಎಚ್​ ಮಾಧವನ್​ (32) ಹಾಗೂ ಇಂಡೋನೇಷ್ಯಾ ಮೂಲದ ದೆವಿ ಸಿಟಿ ಸೆಂದರಿ (26) ಇಬ್ಬರು ಅಂಗಡಿಪ್ಪುರಂನಲ್ಲಿರುವ ಥಿರುಮಂಧಮಕುನ್ನು ಭಗವತಿ ದೇವಸ್ಥಾನದಲ್ಲಿ ಶುಕ್ರವಾರ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಲವ್​ ಸ್ಟೋರಿಯೇ ತುಂಬಾ ರೋಚಕವಾಗಿದೆ.
ಅಂದಹಾಗೆ ಮಾಧವನ್​ ಅವರು 2013 ಮತ್ತು 2017ರಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ, ಹಲವು ಪದಕಗಳನ್ನು ಜಯಿಸಿದ್ದಾರೆ. ಫೇಸ್​ಬುಕ್​ನಲ್ಲಿ ಮ್ಯೂಚುವಲ್​ ಫ್ರೆಂಡ್​ ಮೆರಿನ್​ ಎಂಬುವರ ಮೂಲಕ ಸೆಂದರಿ ಮತ್ತು ಮಾಧವನ್​ ಫ್ರೆಂಡ್ಸ್​ ಆದರು. ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್ ಸಾಮಾನ್ಯವಾಗಿತ್ತು. ದಿನ ಕಳೆದಂತೆ ಇಬ್ಬರ ಫ್ರೆಂಡ್ಸ್​ಶಿಫ್​ ಪ್ರೀತಿಗೆ ತಿರುಗಿತು. ಇದೀಗ ಎರಡು ಕುಟುಂಬಗಳನ್ನು ಒಪ್ಪಿಸಿ, ಇಬ್ಬರು ಮದುವೆ ಆಗಿದ್ದಾರೆ.
ಸೆಂದರಿ ಇಂಡೋನೇಷ್ಯಾದ ಸುರಬಯಾ ಮೂಲದವರು. ಇಂಡೋನೇಷ್ಯಾದ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಹರ್ತೊಯೋ-ಸಿತಿ ದಂಪತಿ ಮೂರನೇ ಹಾಗೂ ಕಿರಿಯ ಮಗಳು. ಸೆಂದರಿಗೆ ಇಬ್ಬರು ಅಕ್ಕಂದಿರಿದ್ದಾರೆ. ಆಕಾಶ್​, ಪೆರಿಂಥಲಮನ್ನದಲ್ಲಿ ಆಯುರ್ವೇದಿಕ್​ ಮತ್ತು ಕಾಸ್ಮೆಟಿಕ್​ ಉತ್ಪನ್ನಗಳ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ. ಅಲ್ಲದೆ, ಮಲಪ್ಪುರಂನ ಜಿಲ್ಲಾ ಕ್ರೀಡಾ ಮಂಡಳಿಯ ಸಂಚಾಲಕರಾಗಿದ್ದಾರೆ. 2020ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೆಲತ್ತೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಮಾಧವನ್​, ಮೆಲತ್ತೂರು ನಿವಾಸಿಗಳಾದ ಸೇಥುಮಾಧವನ್​ ಮತ್ತು ಗೀತಾ ದಂಪತಿಯ ಪುತ್ರ. 2013ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಡಿಸ್ಕಸ್​ ಎಸೆತದಲ್ಲಿ ಮಾಧವನ್​ ಕಂಚಿನ ಪದಕ ಜಯಿಸಿದ್ದರು. ಅಲ್ಲದೆ, 2017 ರಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚು ಗೆದ್ದಿದ್ದಾರೆ.(ಏಜೆನ್ಸೀಸ್​)
ಟ್ವಿಟರ್​ ಖರೀದಿ ಒಪ್ಪಂದ ಮುರಿದುಕೊಂಡ ಎಲಾನ್​ ಮಸ್ಕ್! ಕಾರಣ ಹೀಗಿದೆ….

ವಿಜಯಪುರ ಜಿಲ್ಲೆಯಾದ್ಯಂತ ಮತ್ತೆ ಕಂಪಿಸಿದ ಭೂಮಿ: ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಸವಿನಿದ್ದೆಯಲ್ಲಿದ್ದ ಜನರು

ಟೈಗರ್ ಜೊತೆ ಕಿರಿಕ್ ಸಾನ್ವಿ; ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
