ಪಟನಾ:ಶಾಲಾ ವಿದ್ಯಾರ್ಥಿನಿಯ ಕುತ್ತಿಗೆಗೆ ಯುವಕನೊಬ್ಬ ಗುಂಡಿಕ್ಕಿರುವ ಆಘಾತಕಾರಿ ಘಟನೆ ಬಿಹಾರ ರಾಜಧಾನಿ ಪಟನಾದಲ್ಲಿ ಬುಧವಾರ ನಡೆದಿದೆ. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ದಾಖಲಾಗಿದ್ದು, ಅದಕ್ಕೆ ಸಂಬಂಧಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಬ್ಯೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಿಪರಾದ ಇಂದ್ರಪುರಿ ಏರಿಯಾದಲ್ಲಿ ಘಟನೆ ನಡೆದಿದೆ.
ವಿಡಿಯೋದಲ್ಲಿ ಏನಿದೆ?ಬ್ಯಾಗ್ ಒಂದನ್ನು​ ಹಿಡಿದುಕೊಂಡು ಬರುವ ಯುವಕ, ತನ್ನ ಹಿಂದೆ ಹುಡುಗಿ ಬರುವುದನ್ನು ನೋಡಿ ಅಲ್ಲಿಯೇ ನಿಲ್ಲುತ್ತಾನೆ. ಹುಡುಗಿ ಜನರಿಲ್ಲದ ಕಿರಿದಾದ ರಸ್ತೆ ಕಡೆ ಬಂದು ಯುವಕನನ್ನು ದಾಟಿ ಮುಂದೆ ಹೋಗುವಾಗ ಹಿಂದೆ ಬ್ಯಾಗ್​ನಿಂದ ರಿವಾಲ್ವರ್​ ತೆಗೆದುಕೊಳ್ಳುವ ಆತ ಹುಡುಗಿಯ ಕುತ್ತಿಗೆಗೆ ಗುಂಡಿಕ್ಕುತ್ತಾನೆ. ಹುಡುಗಿ ದಿಢೀರನೇ ನೆಲಕ್ಕೆ ಕುಸಿಯುತ್ತಿದ್ದಂತೆ ಆತ ಅಲ್ಲಿಂದ ಪರಾರಿ ಆಗುತ್ತಾನೆ.
Bihar| A vegetable vendor’s daughter shot yesterday in Indrapuri locality of Sipara area of ​​Beur PS in Patna. Injured girl who was shot in the neck is undergoing treatment in a private hospital. Matter is being said to be a love affair: Patna Police
(Visuals: CCTV footage)pic.twitter.com/kHbddcU2L1
— ANI (@ANI)August 18, 2022

ಸಂತ್ರಸ್ತೆ ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತ ಹುಡುಗಿ ತರಕಾರಿ ವ್ಯಾಪಾರಿಯ ಮಗಳು ಹಾಗೂ 9ನೇ ತರಗತಿ ವಿದ್ಯಾರ್ಥಿನಿ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.(ಏಜೆನ್ಸೀಸ್​)
ಅಪ್ರಾಪ್ತೆ ಅಪಘಾತ ಪ್ರಕರಣದ ತನಿಖೆ ವೇಳೆ ಬಯಲಾಯ್ತು ನಕಲಿ ನಂಬರ್ ಪ್ಲೇಟ್ ಅವಾಂತರ!

ಟ್ವಿಟರ್​ ಬಳಸಿದ ಸೌದಿ ಅರೇಬಿಯಾ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ: ಅಷ್ಟಕ್ಕೂ ಆಕೆ ಮಾಡಿದ ಟ್ವೀಟ್​ ಯಾವುದು?

ಹಾಸ್ಟೆಲ್​ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್​: ಯುವತಿಯರು ದಿಕ್ಕಾಪಾಲು, ಭಯಾನಕ ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 2 =
Remember me
