ಮುಂಬೈ:ನ್ಯಾಷನಲಿಷ್ಟ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ) ಮುಖ್ಯಸ್ಥ ಹಾಗೂ ಹಿರಿಯ ರಾಜಕಾರಣಿ ಶರದ್​ ಪವಾರ್​ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕರ್​ ಅಂಬೇಕರ್​ಗೆ ಎನ್​ಸಿಪಿ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ್ದಾರೆ.
ಬಿಜೆಪಿ ನಾಯಕನ ಮೇಲೆ ಎನ್​ಸಿಪಿ ಕಾರ್ಯಕರ್ತರು ಕೈ ಮಾಡಿದ ವಿಡಿಯೋವನ್ನು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್​ ಪಾಟೀಲ್​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ಖಂಡಿಸಿದ್ದಾರೆ.
ಮಹಾರಾಷ್ಟ್ರ ಪ್ರದೇಶ ಭಾರತೀಯ ಜನತಾ ಪಕ್ಷದ ವಕ್ತಾರ ವಿನಾಯಕ್​ ಅಂಬೇಕರ್​ ಮೇಲೆ ಎನ್​ಸಿಪಿ ಗೂಂಡಾಗಳು ದಾಳಿ ಮಾಡಿದ್ದಾರೆ. ಬಿಜೆಪಿ ಪರವಾಗಿ ನಾನು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ಗೂಂಡಾಗಳನ್ನು ತಕ್ಷಣ ಬಂಧಿಸಬೇಕು ಎಂದು ಟ್ವೀಟ್​ ಮೂಲಕ ಚಂದ್ರಕಾಂತ್​ ಪಾಟೀಲ್ ಆಗ್ರಹಿಸಿದ್ದಾರೆ.
ಎನ್​ಸಿಪಿಯ ಕೆಲ ಕಾರ್ಯಕರ್ತರು ಮೇಜಿನ ಬಳಿ ಕುಳಿತಿರುವ ಅಂಬೇಕರ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇದರ ಮಧ್ಯೆ ವ್ಯಕ್ತಿಯೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆ ಆರಂಭವಾಗಿದೆ.
महाराष्ट्र प्रदेश भारतीय जनता पार्टीचे प्रवक्ते प्रा. विनायक आंबेकर यांच्या वर राष्ट्रवादीच्या गुंडांनी भ्याड हल्ला केला असून, भाजपाच्या वतीने मी या हल्ल्याचा तीव्र शब्दांत निषेध व्यक्त करतो. राष्ट्रवादीच्या या गुंडांवर तात्काळ कारवाई झालीच पाहिजे !@BJP4Maharashtrapic.twitter.com/qR7lNc1IEN
— Chandrakant Patil (@ChDadaPatil)May 14, 2022

ಪವಾರ್ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದ ಮೇಲೆ ಶನಿವಾರ ಮರಾಠಿ ನಟಿ ಕೇತಕಿ ಚಿತಾಲೆ ಮತ್ತು ವಿದ್ಯಾರ್ಥಿ ನಿಖಿಲ್ ಭಾಮ್ರೆ ಅವರನ್ನು ಬಂಧಿಸಲಾಗಿದೆ. ಇಂದು ಮಹಾರಾಷ್ಟ್ರದ ನ್ಯಾಯಾಲಯವು ನಟಿಯನ್ನು ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನಟಿ ಚಿತಾಲೆಯನ್ನು ಥಾಣೆ ಪೊಲೀಸರು ಬಂಧಿಸಿದರೆ, ನಿಖಿಲ್ ಭಾಮ್ರೆಯನ್ನು ನಾಸಿಕ್‌ನಲ್ಲಿ ಬಂಧಿಸಲಾಯಿತು.
ಅಂದಹಾಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಆಡಳಿತಾರೂಢ ಒಕ್ಕೂಟದ ಭಾಗವಾಗಿದೆ. ಶಿವಸೇನೆ, ಕಾಂಗ್ರೆಸ್​ ಹಾಗೂ ಎನ್​ಸಿಪಿ ಸೇರಿ ಮಹಾ ಅಘಾಡಿ ಸರ್ಕಾರ ರಚನೆ ಮಾಡಿದೆ.(ಏಜೆನ್ಸೀಸ್​)
ಅಪಘಾತದಲ್ಲಿ ಪ್ರಿಯಕರ ಮೃತಪಟ್ಟ ನೋವಿನಿಂದ ಪ್ರೇಯಸಿ ಆತ್ಮಹತ್ಯೆ: ಒಂದೇ ಸ್ಥಳದಲ್ಲಿ ಪ್ರೇಮಿಗಳ ಅಂತ್ಯಕ್ರಿಯೆ

ಚೊಚ್ಚಲ ಥಾಮಸ್​ ಕಪ್​ ಗೆದ್ದು ಹೊಸ ಇತಿಹಾಸ ಬರೆದ ಭಾರತದ ಬ್ಯಾಡ್ಮಿಂಟನ್​ ತಂಡ: ಪ್ರಧಾನಿ ಮೋದಿ ಮೆಚ್ಚುಗೆ

ವಕೀಲೆ ಮೇಲೆ ಹಲ್ಲೆ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ: ಆರೋಪಿ ಪರ ಯಾರೂ ವಕಾಲತ್ತು ವಹಿಸದಂತೆ ಮನವಿ

Sign in to your account
Please enter an answer in digits:five × 1 =
Remember me
