ಪಟನಾ:ಬಿಹಾರದ ಪೊಲೀಸ್​ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ದುರಂತ ಸಾವಿಗೀಡಾಗಿರುವ ಘಟನೆ ಬಿಹಾರದ ಡಿಯೋರಿಯಾ ಗ್ರಾಮದ ಬಳಿಯ ಛಪ್ರಾ-ಸಿವಾನ್​ ಹೆದ್ದಾರಿಯಲ್ಲಿ ಬುಧವಾರ (ಅ.12) ಬೆಳಗ್ಗೆ ನಡೆದಿದೆ.
ಪೊಲೀಸ್ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್​, ಬೈಕ್​ನಲ್ಲಿ ಹೋಗುತ್ತಿದ್ದವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಮೂವರು ಮೃತಪಟ್ಟರು. ಈ ವೇಳೆ ಓರ್ವ ಸವಾರ ತನ್ನ ಬೈಕ್​ ಸಮೇತ ಬಸ್ಸಿನ ಅಡಿಗೆ ಸಿಲುಕಿದ ಪರಿಣಾಮ ಸುಮಾರು 90 ಮೀಟರ್​ ದೂರ ಎಳೆದುಹೋಯಿತು. ಇದರಿಂದಾಗಿ ಬಸ್​ ಇಂಧನ ಟ್ಯಾಂಕ್​ ಸ್ಫೋಟಗೊಂಡು, ಬೈಕ್​ ಸವಾರ ಸಜೀಹ ದಹನವಾದನು.
ಅಪಘಾತದ ನಂತರ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಸ್‌ನಿಂದ ಇಳಿದು ಪರಾರಿಯಾಗುತ್ತಿರುವ ದೃಶ್ಯವು ಸಹ ವಿಡಿಯೋದಲ್ಲಿದೆ.
ಬಿಹಾರದ ಸಿತಾಬ್ದಿಯಾರಾದಲ್ಲಿ ದಿವಂಗತ ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ 120 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಬಸ್ ಹಿಂತಿರುಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು.(ಏಜೆನ್ಸೀಸ್​)
ಇರಾನ್​ ಮಹಿಳೆಯರ ಮೇಲೆ ನೈತಿಕ ಪೊಲೀಸ್​ಗಿರಿ: ವಿವಸ್ತ್ರಳಾಗಿ ನನ್ನ ದೇಹ ನನ್ನ ಆಯ್ಕೆ ಎಂದ ಬಾಲಿವುಡ್​ ನಟಿ

ಆರ್ಥಿಕ ಏಳಿಗೆಗಾಗಿ ಮಹಿಳೆಯರಿಬ್ಬರ ಬಲಿ: ಕೇರಳ ಜನತೆಯನ್ನು ಬೆಚ್ಚಿಬೀಳಿಸಿದ ವಾಮಾಚಾರ ಪ್ರಕರಣವಿದು

ವಿಧಿ ನೀನೆಷ್ಟು ಕ್ರೂರಿ? ಭಾರತದಿಂದ ಆಸ್ಕರ್​ ಪ್ರವೇಶ ಪಡೆದ ಗುಜರಾತಿ ಸಿನಿಮಾದ ಬಾಲನಟ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
