ನವದೆಹಲಿ:ಆತಂಕಕಾರಿ ಘಟನೆಯೊಂದರಲ್ಲಿ ವ್ಯಕ್ತಿಗಳ ಗುಂಪೊಂದು ಪೊಲೀಸ್​ ಠಾಣೆ ಒಳಗೆ ನುಗ್ಗಿ ಸಿಬ್ಬಂದಿಯೊಬ್ಬರಿಗೆ ಥಳಿಸಿದ್ದಾರೆ. ಈ ಘಟನೆ ದೆಹಲಿಯ ಆನಂದ್​ ವಿಹಾರ ಪೊಲೀಸ್​ ಠಾಣೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪೊಲೀಸ್​ ಪೇದೆಯನ್ನು ಸುತ್ತುವರಿದಿರುವ ದುಷ್ಕರ್ಮಿಗಳ ಗುಂಪು ಪೇದೆಯನ್ನು ಥಳಿಸುತ್ತಿರುವುದು ವಿಡಿಯೋದಲ್ಲಿದೆ. ಇದೇ ವೇಳೆ ಪಕ್ಕದಲ್ಲೇ ಇರುವ ಜನರು ವಿಡಿಯೋ ಮತ್ತು ಫೋಟೋ ತೆಗೆಯುವುದರಲ್ಲಿ ಬಿಜಿಯಾಗಿದ್ದು, ಯಾರೊಬ್ಬರು ಕೂಡ ಪೇದೆಯನ್ನು ಬಿಡಿಸಬೇಕೆಂಬ ಗೋಜಿಗೆ ಹೋಗೇ ಇಲ್ಲ.
ದಾಳಿಕೋರರು ಯಾರು?ದಾಳಿ ಮಾಡಿದ ಗುಂಪಿನ ಪ್ರಮುಖ ಆರೋಪಿಯನ್ನು ಸತೀಶ್​ ಚೌಧರಿ​ (29) ಎಂದು ಗುರುತಿಸಲಾಗಿದೆ. ಈತ ಕರ್ಕರ್ದೂಮ ಗ್ರಾಮದ ನಿವಾಸಿ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ.
Video of the assualt of a Delhi Police head constable has gone viral on social media.
Location: Anand Vihar police station in New Delhi.pic.twitter.com/RBZzT4fXVM
— Ravi Chaturvedi (@Ravi4Bharat)August 6, 2022

ನಡೆದಿದ್ದೇನು?ಕರ್ಕರ್ದೂಮ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಆಕೆ ಚಿನ್ನದ ಸರವನ್ನು ಮರಿದು ಹಾಕಿದ್ದಾರೆ ಎಂದು ಜುಲೈ 30ರ ರಾತ್ರಿ 11.27ಕ್ಕೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ. ಈ ಸಮಸ್ಯೆ ಗ್ರಾಮದ ಅಂಚಲ್​ ಬಕ್ಸಿ ಮತ್ತ ಅಜಯ್​ಗೆ ಸಂಬಂಧಿಸಿದ್ದಾಗಿರುತ್ತದೆ. ಸ್ಥಳಕ್ಕೆ ತೆರಳುವ ಪೊಲೀಸರು ಪಾನಮತ್ತನಾಗಿದ್ದ ಅಜಯ್​ ಎಂಬಾತನನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಾರೆ. ಈ ವೇಳೆ ಅಜಯ್​ ಸಹೋದರ ಸತೀಶ್ ಚೌಧರಿ ಮತ್ತು ಇತರರು ಪೊಲೀಸ್​ ಠಾಣೆಗೆ ಆಗಮಿಸಿ, ಕರ್ತವ್ಯ ನಿರತ ಪೊಲೀಸ್​ ಪೇದೆಯನ್ನು ಪ್ರಚೋದಿಸಲು ಯತ್ನಿಸುತ್ತಾರೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಬರುವ ಕಾನ್ಸ್​ಟೇಬಲ್​ ಪ್ರಕಾಶ್​ ಅವರನ್ನು ಸುತ್ತುವರಿಯುವ ಸತೀಶ್​ ಮತ್ತು ಆತನ ಸಹಚರರು ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದ ಉಪ ಪೊಲೀಸ್​ ಆಯುಕ್ತ (ಶಹ್ದಾರಾ) ಆರ್​ ಸತ್ಯಸುಂದರಂ ಮಾಹಿತಿ ನೀಡಿದರು.​
ಗಾಯಗೊಂಡ ಪೊಲೀಸರಿಗೆ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸತ್ಯಸುಂದರಂ ತಿಳಿಸಿದ್ದಾರೆ.(ಏಜೆನ್ಸೀಸ್​)
ಬಿಗ್​ಬಾಸ್​ ಮನೆಗೆ ಸೋನು ಶ್ರೀನಿವಾಸ್​ ಗೌಡ ಎಂಟ್ರಿ ಬೆನ್ನಲ್ಲೇ ಜಾಲತಾಣದಲ್ಲಿ ಅಲ್ಲೋಲ-ಕಲ್ಲೋಲ

ವಿಡಿಯೋದಲ್ಲಿ ಕಣ್ಣೀರಿಡುತ್ತಾ ಗಂಡನ ಕರಾಳ ಮುಖ ಬಿಚ್ಚಿಟ್ಟು ಅಮೆರಿಕದಲ್ಲಿ ಸಾವಿನ ಹಾದಿ ಹಿಡಿದ ಭಾರತೀಯ ಮಹಿಳೆ

ಇಷ್ಟು ದಿನ ನನ್ಗೆ ನಿತ್ಯಾ ಬೇಕೇ ಬೇಕು ಅಂತಿದ್ದ ಯುವಕ ಈಗ ಆಕೆಯ ಆ ಒಂದು ಮಾತಿಗೆ ಕೊಟ್ಟಿದ್ದು ಖಡಕ್​ ಪ್ರತಿಕ್ರಿಯೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 20 =
Remember me
