ಥಾಣೆ:ಮಹಾರಾಷ್ಟ್ರದ ಥಾಣೆ ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. 21 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ, ಆಟೋ ಚಲಾಯಿಸುತ್ತಲೇ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ, ಬೀಸಾಡಿರುವ ಅಮಾನವೀಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಥಾಣೆ ನಗರದಲ್ಲಿ ನಿನ್ನೆ (ಅ.14) 6.45ರ ಮುಂಜಾನೆ ಸಮಯದಲ್ಲಿ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಲೇಜಿಗೆ ತೆರಳಲು ವಿದ್ಯಾರ್ಥಿನಿ ರಸ್ತೆ ಪಕ್ಕದಲ್ಲಿ ನಿಂತಿದ್ದಳು. ಈ ವೇಳೆ ಆಕೆಯನ್ನು ಹಾದು ಹೋಗುವಾಗ ಆಟೋ ನಿಲ್ಲಿಸಿ ಬಂದು ಚಾಲಕ ಕೆಟ್ಟದಾಗಿ ಚುಡಾಯಿಸಿದ್ದಾನೆ. ಆಕೆಗೆ ಕಿರುಕುಳ ನೀಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯ ಕೈಹಿಡಿದು ಎಳೆದಾಡಿದ್ದಾನೆ. ಬಳಿಕ ತಪ್ಪಿಸಿಕೊಳ್ಳಲು ಆಟೋ ಏರಿದ್ದಾನೆ. ಈ ವೇಳೆ ಆತನನ್ನು ಬಿಡದೇ ವಿದ್ಯಾರ್ಥಿನಿ ಆತನ ಕೈ ಹಿಡಿದುಕೊಂಡಿದ್ದಾಳೆ. ಆದರೂ ಆಟೋ ಸ್ಟಾರ್ಟ್​ ಮಾಡಿದ ದುರುಳ, ವಿದ್ಯಾರ್ಥಿನಿ ಕೈಹಿಡಿದುಕೊಂಡಿದ್ದರೂ ಚಲಾಯಿಸಿಕೊಂಡು ಹೋಗಿದ್ದಾನೆ. ಸುಮಾರು 500 ಮೀಟರ್​ ದೂರ ಆಟೋ ಜೊತೆಯಲ್ಲಿ ಓಡಿದ ವಿದ್ಯಾರ್ಥಿನಿ, ನೆಲಕ್ಕೆ ಮುಗ್ಗಿರಿಸಿ ಬಿದ್ದಿದ್ದಾಳೆ. ಇದಿಷ್ಟು ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
#Thane: Rickshaw driver molests schoolgirl, starts the auto and drags her with it#Shocking#Video#Mumbai#MumbaiNews#ThaneNews#Driver#Girlpic.twitter.com/m5xgVErb3L
— Free Press Journal (@fpjindia)October 14, 2022

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಯಾವುದೇ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ ಮಾಡುವುದು) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿದಿದ್ದಾರೆ.
ಸದ್ಯ ಆಟೋ ಚಾಲಕ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಸಿಸಿಟಿವಿ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆರೋಪಿ ಮೇಲೆ ಕಠಿಣ ಕ್ರಮ ಜರಗಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್​ ಲೇಡಿ!

ಚಲಿಸುವ ರೈಲಿಗೆ ನೂಕಿ ಮಗಳ ಹತ್ಯೆ: ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ಸಾವು

ಮದುವೆ ಎಂದರೇನು? ವಿದ್ಯಾರ್ಥಿ ಬರೆದ ಉತ್ತರ ನೋಡಿ ತಬ್ಬಿಬ್ಬಾದ ಶಿಕ್ಷಕ! ವೈರಲ್​ ಆಯ್ತು ಉತ್ತರ ಪತ್ರಿಕೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − 2 =
Remember me
