ಚಂಡೀಗಢ:ಪಂಜಾಬ್​ನ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆ ಮಾಡಿದ್ದ ದುಷ್ಕರ್ವಿುಗಳು ಗನ್ ಹಿಡಿದು ಸಂಭ್ರಮಿಸಿದ ಎರಡು ವಿಡಿಯೋಗಳು ಈಗ ವೈರಲ್ ಆಗಿದೆ.
ಐದು ಮಂದಿ ಹಂತಕರು ಗನ್ ಹಿಡಿದು ಕೇಕೆ ಹಾಕುತ್ತಿರುವ ವಿಡಿಯೋವನ್ನು ಆರೋಪಿಗಳಲ್ಲಿ ಚಿಕ್ಕ ಪ್ರಾಯದವನಾದ ಅಂಕಿತ್ ಸಿರ್ಸಾ ಸೆರೆಹಿಡಿದು, ಇನ್​ಸ್ಟಾಗ್ರಾಂಗೆ ಹಾಕಿದ್ದ. ಈಗ ಅದನ್ನು ಡಿಲೀಟ್ ಮಾಡಲಾಗಿದೆ.
#SidhuMooseWala's murder accused Ankit Sirsa, Priyavrat Fauji, Kapil, Sachin Bhivani, & Deepak seen in a video brandishing guns while traveling in a vehiclepic.twitter.com/i76a2iiCxE
— Parteek Singh Mahal (@parteekmahal)July 4, 2022

ಅಂಕಿತ್​ನನ್ನು ದೆಹಲಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಈತ ಬಂಧಿತ ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯ. ಈತನೇ ಮೂಸೆವಾಲಾನಿಗೆ ಸಮೀಪದಿಂದ ಆರು ಬುಲೆಟ್ ಹೊಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೇ 29ರಂದು ಮೂಸೆವಾಲಾ ಹತ್ಯೆ ಆಗಿತ್ತು.
ಮೇ 29ರಂದು ಮಾನಸ ಜಿಲ್ಲೆಯ ಜವಹರ್ಕೆಯ ಗ್ರಾಮದಲ್ಲಿ ಪಂಜಾಬ್​ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್​ ನಾಯಕ ಮೂಸೆವಾಲಾ ಅವರು ಚಲಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡು ಹಾರಿಸಿ ಹತ್ಯೆ ಮಾಡಿದರು. ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್​ ಬಿಷ್ಣೋಯ್ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಮಗನ ಕ್ರೀಡೆಗೆ ಡಿಕೆಶಿ ನೆರವಿ‌ನ ಭರವಸೆ

ಶಾಸಕ ಜಮೀರ್​ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: 5 ಕಡೆಗಳಲ್ಲಿ 40ಕ್ಕೂ ಅಧಿಕ ಅಧಿಕಾರಿಗಳ ತಂಡದಿಂದ ದಾಳಿ

ಅಮೆರಿಕ ಸ್ವಾತಂತ್ರ್ಯ ದಿನದ ಪರೇಡ್​ ವೇಳೆ ಗುಂಡಿನ ದಾಳಿ: 6 ಮಂದಿ ದುರ್ಮರಣ, 24 ಮಂದಿ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
